ನಿಮ್ಮ ಮನೆ ಮನಗಳಿಗೆ ಮತ್ತೆ ಲಗ್ಗೆ ಇಡಲು ಅನಿರುದ್ಧ್ ರೆಡಿ ; ಆರ್ಯವರ್ಧನ್ ಈಗ ಸೂರ್ಯವಂಶ..!

By ಪ್ರಿಯಾ ದೊರೆ

ಎಲ್ಲಾ ವಾಹಿನಿಯಲ್ಲೂ ಹೊಸ ಹೊಸ ಧಾರಾವಾಹಿಗಳು ಪ್ರಾರಂಭ ಮಾಡುತ್ತಿದ್ದು, ಇದೀಗ ಉದಯ ಟಿವಿಯಲ್ಲಿಯೂ ಎರಡು ಹೊಸ ಸೀರಿಯಲ್ ಗಳು ಪ್ರಸಾರಗೊಳ್ಳಲು ಸಜ್ಜಾಗಿವೆ. ಹೌದು, ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟ ಅನಿರುದ್ಧ್ ಜತ್ಕರ್ ಈಗ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಅನಿರುದ್ಧ್ ಅವರು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸಿದ್ದರು. ಆರ್ಯವರ್ಧನ್ ಪಾತ್ರದಲ್ಲಿ ಮಿಂಚಿದ್ದರು. ಧಾರಾವಾಹಿ ಬಿಟ್ಟ ಬಳಿಕ ಅನಿರುದ್ಧ್ ಅವರನ್ನು ಕಿರುತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಸೂರ್ಯವಂಶದಲ್ಲಿ ಅನಿರುದ್ಧ್ ಜತ್ಕರ್

ಎಸ್. ನಾರಾಯಣ್ ನಿರ್ದೇಶನದ ಸೂರ್ಯವಂಶ ಎಂಬ ಧಾರಾವಾಹಿಯಲ್ಲಿ ಅನಿರುದ್ಧ್ ನಟಿಸುತ್ತಿದ್ದಾರೆ. ಈ ಬಗ್ಗೆ ಕಳೆದ ವರ್ಷವೇ ಅನಿರುದ್ಧ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅನಿರುದ್ಧ್ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿರುವುದನ್ನು ತಿಳಿದ ಅಭಿಮಾನಿಗಳು ಖುಷಿ ಪಟ್ಟಿದ್ದರು. ಉದಯ ಟಿವಿಯಲ್ಲಿ ಪ್ರೋಮೋ ಪ್ರಸಾರ ಮಾಡಿದ್ದು, ಸೂರ್ಯವಂಶ ಧಾರಾವಾಹಿ ಶೀಘ್ರದಲ್ಲೇ ಆರಂಭವಾಗಲಿದೆ. ಮುಖ್ಯ ಪಾತ್ರದಲ್ಲಿ ಅನಿರುದ್ಧ್ ಜತ್ಕರ್ ಬಣ್ಣ ಹಚ್ಚಿದ್ದಾರೆ. ಇದರಲ್ಲೂ ಉದ್ಯಮಿ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳ ಹಿಂದೆ ವಿಷ್ಣುವರ್ಧನ್ ಅವರು ನಾಯಕರಾಗಿದ್ದ ಸೂರ್ಯವಂಶ ಸಿನಿಮಾವನ್ನು ಮಾಡಿ ಎಸ್. ನಾರಾಯಣ್ ಸಕ್ಸಸ್ ಕಂಡಿದ್ದರು. ಇದೀಗ ಅದೇ ಹೆಸರಿನಲ್ಲಿ ವಿಷ್ಣುವರ್ಧನ್ ಅವರ ಅಳಿಯನ ಜೊತೆಗೆ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಎಸ್. ನಾರಾಯಣ್ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ.

udaya tv sooryavamsha and mynaa serials

ನಟಿಯನ್ನು ತಿಳಿದು ವೀಕ್ಷಕರು ಖುಷ್

ಅನಿರುದ್ಧ್ ಅವರ ಜೋಡಿಯಾಗಿ ನಟಿಸಲು ಕನ್ನಡದ ಕಿರುತೆರೆ ನಟಿ ಅಶ್ವಿನಿ ವಾಪಸ್ ಆಗಿದ್ದಾರೆ. ನಟಿಯನ್ನು ಪ್ರೋಮೋದಲ್ಲಿ ನೋಡಿದ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ. ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಅಶ್ವಿನಿ ಕಿರುತೆರೆಯಲ್ಲಿ ಕಮಾಲ್ ಮಾಡಿದ್ದರು. ಇವರು ಕನ್ನಡ ಮಾತ್ರವಲ್ಲದೇ, ತೆಲುಗು ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ನಟಿ ಅಶ್ವಿನಿ ಅವರು ಈಗ ಸೂರ್ಯವಂಶ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುದ್ದುಲಕ್ಷ್ಮೀ, ಅನುರಾಗ ಸಂಗಮ, ಕುಲವಧು, ಗಿರಿಜಾ ಕಲ್ಯಾಣ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ತೆಲುಗಿನಲ್ಲಿ ಮಟ್ಟಿಗಾಜಲು ಎಂಬ ಧಾರಾವಾಹಿ ಮೂಲಕ ಹಿಟ್ ಆಗಿದ್ದರು.

udaya tv sooryavamsha and mynaa serials

ನಾಯಕಿಯಾಗಿ ಮಿಂಚಲಿರುವ ಅಶ್ವಿನಿ

ಇನ್ನು ನಾಯಕಿ ಪಾತ್ರದಲ್ಲಿ ಅತಿ ಹೆಚ್ಚಾಗಿ ನಟಿಸಿರುವ ಅಶ್ವಿನಿ ಅವರು ನೆಗೆಟಿವ್ ಶೇಡ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಅಶ್ವಿನಿ ಅವರು ಶಶಿಕಲಾ ಎಂಬ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದರು. ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಹಾಗೂ ಅನು ಸಿರಿಮನೆ ಜೋಡಿ ಫೇಮಸ್ ಆದಂತೆಯೇ ಈಗ ಸೂರ್ಯವಂಶ ಧಾರಾವಾಹಿಯಲ್ಲಿ ಅನಿರುದ್ಧ್ ಮತ್ತು ಅಶ್ವಿನಿ ಜೋಡಿ ಮಿಂಚುವುದು ಪಕ್ಕಾ ಆಗಿದೆ. ಧಾರಾವಾಹಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದು, ಧಾರಾವಾಹಿ ಯಾವಾಗ ಪ್ರಸಾರ ಕಾಣುತ್ತೆ ಎಂಬ ಪ್ರಶ್ನೆಗೆ ಉತ್ತರ ಸದ್ಯಕ್ಕೆ ಇಲ್ಲ.

udaya tv sooryavamsha and mynaa serials

ಮೈನಾ ಧಾರಾವಾಹಿ ಇದೇ ತಿಂಗಳು ಶುರು

ಉದಯ ಟಿವಿಯಲ್ಲಿ ಮತ್ತೊಂದು ಧಾರಾವಾಹಿ ಪ್ರಾರಂಭವಾಗುತ್ತಿದ್ದು, ಅದೇ ಮೈನಾ. ಕಲರ್ಸ್ ಕನ್ನಡದಲ್ಲಿ ಮೂಡಿ ಬಂದ ಲಕ್ಷಣ ಧಾರಾವಾಹಿ ನಾಯಕಿ ನಟಿ ವಿಜಯಲಕ್ಷ್ಮೀ ಅವರು ಮೈನಾ ಧಾರಾವಾಹಿಗೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರೋಮೋವನ್ನು ಪ್ರಸಾರ ಮಾಡಿ ಆಗಿದ್ದು, ಫೆಬ್ರವರಿ 19 ರಿಂದ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ಈ ಧಾರಾವಾಹಿಯಲ್ಲಿ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಅರುಣ್ ಕುಮಾರ್ ಅಲಿಯಾಸ್ ಕುಳ್ಳಾ ಸಿಂಗಮ್, ನಟಿ ಅಪೂರ್ವಶ್ರೀ, ನಟಿ ಮಾನಸಿ ಜೋಷಿ ಸೇರಿದಂತೆ ಹಲವರು ನಟಿಸಿದ್ದಾರೆ.

More from Filmibeat

English summary
Udaya Tv sooryavamsha and maina serials promo released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X