For Quick Alerts
  ALLOW NOTIFICATIONS  
  For Daily Alerts

  ಜುಲೈ 10 ರಿಂದ ಉದಯ ಟಿವಿಯಲ್ಲಿ 'ಜ್ಯೋತಿ' ಧಾರಾವಾಹಿ ಪ್ರಸಾರ

  |

  ದಕ್ಷಿಣ ಭಾರತದ ಖ್ಯಾತ ಮನರಂಜನೆ ವಾಹಿನಿ ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಪ್ರಸಾರವಾಗುತ್ತಿದೆ. ಉದಯ ಟಿವಿಯಲ್ಲಿ ಜುಲೈ 10 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರೋಚಕವಾದ ಕಥೆಯುಳ್ಳ 'ಜ್ಯೋತಿ' ಧಾರಾವಾಹಿ ಪ್ರಸಾರವಾಗಲಿದೆ.

  ಇದೊಂದು ಕಾಲ್ಪನಿಕ ಕಥೆಯಾಧರಿಸಿ ತಯಾರಾಗಿದ್ದು, ಬಹಳ ರೋಚಕತೆಯಿಂದ ಕೂಡಿದೆ ಎನ್ನುವುದು ವಿಶೇಷ. ಗ್ರಾಫಿಕ್ಸ್‌ಗೆ ಹೆಚ್ಚು ಒತ್ತು ನೀಡಲಾಗಿದ್ದು, ತೆರೆಮೇಲೆ ಬಹಳ ಅದ್ಭುತವಾಗಿ ಮೂಡಿ ಬಂದಿದೆ.

  ಒಂದೊಳ್ಳೆ ಕೆಲಸಕ್ಕೆ ತಲೆ ಕೂದಲು ದಾನ ಮಾಡಿದ ನಿರೂಪಕಿ ಕಾವ್ಯ ಶಾಸ್ತ್ರಿಒಂದೊಳ್ಳೆ ಕೆಲಸಕ್ಕೆ ತಲೆ ಕೂದಲು ದಾನ ಮಾಡಿದ ನಿರೂಪಕಿ ಕಾವ್ಯ ಶಾಸ್ತ್ರಿ

  ಜ್ಯೋತಿ ಧಾರಾವಾಹಿಯಲ್ಲಿ ಸಿನಿಮಾ ನಟಿ ಮೇಘಶ್ರೀ ನಾಯಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ಜೊತೆಗೆ ಸೀಮಾ, ಸುಜಾತ, ನೀಲಾ ಮೇನನ್ ಹಾಗೂ ರಮೇಶ್ ಪಂಡಿತ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ತನ್ನ ರೂಪ ಬದಲಿಸುವ ನಾಗಕನ್ಯೆಯ ಶಕ್ತಿಯ ಅರಿವಿಲ್ಲದೆ ಹಾಗೂ ನಾಗಲೋಕದ ಒಬ್ಬಳೆ ವಾರಸದಾರಳು ಎಂಬ ಸತ್ಯ ಗೊತ್ತಿಲ್ಲದೆ 'ಜ್ಯೋತಿ' ನಾಗಲೋಕದ ಅರಮನೆಯಲ್ಲಿ ಕೆಲಸದವಳಾಗಿ ಕಾರ್ಯ ನಿರ್ವಹಿಸುತ್ತಾಳೆ. ತನ್ನ ಕುಟುಂಬದಿಂದ ಹಾಗೂ ಬೇರೆ ಕ್ಷುದ್ರ ಶಕ್ತಿಗಳಿಂದ ಕಷ್ಟಗಳನ್ನ ಅನುಭವಿಸುತ್ತಾಳೆ. ಅವಳು ಹೇಗೆ ಈ ಎಲ್ಲ ಶಕ್ತಿಗಳನ್ನ ಸೋಲಿಸಿ ತಾನು ಪ್ರೀತಿಸಿದ ಹುಡುಗನನ್ನು ಹಾಗೂ ನಾಗಲೋಕದ 'ನಾಗಮಾಣಿಕ್ಯ'ವನ್ನು ಪಡೆಯುತ್ತಾಳೆ ಎಂಬುದೇ ಜ್ಯೋತಿ ಧಾರಾವಾಹಿಯ ಕಥೆ.

  'ಜ್ಯೋತಿ' ಜುಲೈ 10 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  Udaya Tv starts new serial Jyothi from July 10th Saturday & Sunday 9.30 Pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X