ಕನ್ನಡ ಕಿರುತೆರೆಯಲ್ಲಿ 'ಶ್ರೀಮದ್ ರಾಮಾಯಣ' ಮಹಾ ಕಾವ್ಯ; ಎಲ್ಲಿ? ಯಾವಾಗ?
ಕನ್ನಡ ಕಿರುತೆರೆಯಲ್ಲಿ ವಿನೂತ ಪ್ರಯೋಗಗಳು ಆಗುತ್ತಿವೆ. ಆದರೆ, ದುಬಾರಿ ವೆಚ್ಚದಲ್ಲಿ 'ರಾಮಾಯಣ', 'ಮಹಾಭಾರತ'ದಂತಹ ಮಹಾ ಕಾವ್ಯಗಳನ್ನು ತೆರೆಮೇಲೆ ತರುವ ಪ್ರಯತ್ನ ಎಂದಿಗೂ ಆಗಿಲ್ಲ. ಆದರೆ, ಹಿಂದಿ ಕಿರುತೆರೆಯಲ್ಲಿ ಈಗಾಗಲೇ ಇಂತಹ ಸಾಕಷ್ಟು ಪ್ರಯತ್ನಗಳು ನಡೆದು ಹೋಗಿವೆ.
ಇಂತಹದ್ದೇ ಮಹಾ ಕಾವ್ಯದಂತಹ ಮೆಗಾ ಸೀರಿಯಲ್‌ಗಳನ್ನು ಕನ್ನಡದಲ್ಲಿ ನೋಡಬೇಕೆಂಬುದು ಕಿರುತೆರೆ ವೀಕ್ಷಕರ ಆಸೆ. ಆದರೆ, ಆಸೆ ಸದ್ಯಕ್ಕೆ ಈಡೇರುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಸಾರಿ ಹೇಳುವ ಮಹಾ ಕಾವ್ಯ ರಾಮಾಯಣದ ಹೊಸ ಆಯಾಮದಲ್ಲಿ ತೋರಿಸಲಾಗುತ್ತಿದೆ. ಉದಯ ಟಿವಿಯಲ್ಲಿ 'ಶ್ರೀಮದ್ ರಾಮಾಯಣ' ಧಾರಾವಾಹಿ ಪ್ರಸಾರ ಆಗಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಅಂದ್ಹಾಗೆ 'ಶ್ರೀಮದ್ ರಾಮಾಯಣ' ಹಿಂದಿ ಭಾಷೆಯಿಂದ ಕನ್ನಡ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಭಾಷೆ ಅರ್ಥ ಆಗದವರಿಗೆ ಕನ್ನಡದಲ್ಲಿಯೇ ಈ ಬಿಗ್ ಬಜೆಟ್ ಧಾರಾವಾಹಿಯನ್ನು ವೀಕ್ಷಣೆ ಮಾಡಬಹುದಾಗಿದೆ. 2024ರ ಆರಂಭದಲ್ಲಿಯೇ 'ಶ್ರೀಮದ್ ರಾಮಾಯಣ' ಮಹಾ ಧಾರಾವಾಹಿಯನ್ನು ಹಿಂದಿಯ ಸೋನಿ ಸಂಸ್ಥೆ ಪ್ರಸಾರ ಮಾಡಿತ್ತು. ಆರಂಭದಲ್ಲಿ ಈ ಧಾರಾವಾಹಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೇ ಧಾರಾವಾಹಿಯನ್ನು ಉದಯ ಟಿವಿ ಮೇ 20 ರಿಂದ ಸಂಜೆ 6 ಗಂಟೆಗೆ ಪ್ರಸಾರ ಮಾಡುತ್ತಿದೆ. 'ಶ್ರೀಮದ್ ರಾಮಾಯಣ' ಹಿಂದಿ ವೀಕ್ಷಕರು ಇರುವ ಏರಿಯಾಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. 'ಶ್ರೀಮದ್ ರಾಮಾಯಣ'ದ ನಿರೂಪಣೆ ಶೈಲಿ, ಅದ್ಧೂರಿ ಮೇಕಿಂಗ್ ವೀಕ್ಷಕರನ್ನು ಸೆಳೆದಿದೆ.
ರಾಮಾಯಣ ಭಾರತೀಯ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಅದ್ಭುತ ಮಹಾಗ್ರಂಥ. ಮಹಾಪುರುಷ ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿಟ್ಟುಕೊಂಡಿದ್ದಾರೆ. ರಾಮರಾಜ್ಯದ ಪರಿಕಲ್ಪನೆಯ ಕನಸು ಇಂದಿಗೂ ಕಾಣುತ್ತಿದ್ದಾರೆ. ರಾಮಾಯಣದಲ್ಲಿ ರಾಮ ಹಾಗೂ ಸೀತೆಯ ಪವಿತ್ರ ಪ್ರೇಮ, ರಾಮನ ಧರ್ಮ ಪಾಲನೆ ಸೇರಿದಂತೆ ಹಲವು ಕುತೂಹಲಕರ ಸಂಗತಿಗಳಿವೆ.

'ಶ್ರೀಮದ್ ರಾಮಾಯಣ' ಧಾರಾವಾಹಿಯನ್ನು ಹೊಸ ದೃಷ್ಟಿಕೋನದಿಂದ ಪ್ರಸಾರ ಮಾಡಲು ಸಿದ್ಧವಾಗಿದೆ. ರಾಮಾಯಣವನ್ನು ಹೊಸ ಆಯಾಮದಿಂದ ತೋರಿಸುವ ಮೂಲಕ ಕಿರುತೆರೆ ವೀಕ್ಷಕರಿಗೆ ಹೊಸ ಅನುಭವವನ್ನು ನೀಡಲು ಹೊರಟಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು ಮತ್ತು ವೈವಿಧ್ಯಮಯ ನಟರ ತಂಡವು ಈ ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಿದೆ.
ಈ ಧಾರಾವಾಹಿಯನ್ನು ವೀಕ್ಷಿಸುವ ವೀಕ್ಷಕರಿಗೆ ಭರ್ಜರಿ ಬಹುಮಾನ ಗೆಲ್ಲುವ ಅವಕಾಶವಿದೆ. ಪ್ರತಿ ಸಂಚಿಕೆಯಲ್ಲಿ 250 ವೀಕ್ಷಕರಿಗೆ ಒಟ್ಟು ಸೇರಿಸಿದ 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಉದಯ ಟಿವಿ ಕೊಟ್ಟಿದೆ. 'ಶ್ರೀಮದ್ ರಾಮಾಯಣ' ವೀಕ್ಷಿಸಿದ ಬಿಳಿಕ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದರೆ, ಅದೃಷ್ಟಶಾಲಿ 250 ವೀಕ್ಷಕರಿಗೆ ಪ್ರತಿ ಸಂಚಿಕೆಗೆ ತಲಾ 1000 ರೂ. ನಗದು ಬಹುಮಾನ ನೀಡಲಾಗುತ್ತೆ.


Click it and Unblock the Notifications











