twitter
    For Quick Alerts
    ALLOW NOTIFICATIONS  
    For Daily Alerts

    ಉದಯ ಟಿವಿಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವ ವಿಭಿನ್ನವಾಗಿ ಆಚರಣೆ

    By ಫಿಲ್ಮಿಬೀಟ್ ಡೆಸ್ಕ್
    |

    ಉದಯ ಟಿವಿ ಪ್ರಾರಂಭ ದಿನದಿಂದಲೂ ಹಬ್ಬಹರಿದಿನಗಳನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದೆ. ಈ ಬಾರಿಯೂ ಕನ್ನಡ ರಾಜ್ಯೋತ್ಸವವನ್ನು "ಕಸ್ತೂರಿ ನಿವಾಸ"ದ ಸೆಟ್‌ನಲ್ಲಿ ವಿಭಿನ್ನ ರೀತಿಯಿಂದ ಆಚರಿಸಿ ಕನ್ನಡದ ಹಬ್ಬದ ಸಂಚಿಕೆಗಳನ್ನು ವೀಕ್ಷಕರಿಗಾಗಿ ನೀಡುತ್ತಿದೆ. ಧಾರಾವಾಹಿ ಹೆಸರಿನಲ್ಲಿ ಕನ್ನಡದ ಕಸ್ತೂರಿ ಇದೆ. ಆದ್ದರಿಂದ ಈ ಕನ್ನಡದ ಹಬ್ಬಕ್ಕೆ ಇಡೀ "ಕಸ್ತೂರಿ ನಿವಾಸ"ದವರೆಲ್ಲ ಒಂದೆಡೆ ಸೇರಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ.

    ಕನ್ನಡ ಹಬ್ಬದ ವಿಶೇಷ ಸಂಚಿಕೆಯಲ್ಲಿ ಖುಷಿ ಮತ್ತು ರಾಘವನ ನಡುವೆ ಇರುವ ಮನಸ್ತಾಪಗಳು ಅಂತ್ಯಗೊಳ್ಳುತ್ತದೆ. ರಾಘವ ಈ ಸುಸಂದರ್ಭವನ್ನು ಉಪಯೋಗಿಸಿಕೊಂಡು ಖುಷಿಗೆ ಬಾಗಿನವನ್ನು ಕೊಟ್ಟು ರಾಜ್ಯೋತ್ಸವಕ್ಕೆ ಆಹ್ವಾನಿಸುತ್ತಾನೆ.

    "ಕಸ್ತೂರಿ ನಿವಾಸ"ದಲ್ಲಿ ವಿಭಿನ್ನವಾಗಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾರಂಗದ ಖ್ಯಾತ ಬರಹಗಾರ "ಕವಿರತ್ನ" ಎಂದೇ ಬಿರುದು ಪಡೆದಿರುವಂತಹ ವಿ.ನಾಗೇಂದ್ರ ಪ್ರಸಾದ್ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿರುವುದು ಇನ್ನಷ್ಟು ಮೆರಗು ನೀಡಿದೆ.

     Udaya TV Will Celebrate Kannada Rajyothsava Differently

    ನಾಗೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಈಡೀ ತಂಡ ಕನ್ನಡಾಂಬೆಗೆ ಪೂಜೆಯನ್ನು ಸಲ್ಲಿಸಿ ಹಬ್ಬದ ಸಂಭ್ರಮವನ್ನು ಆರಂಭಿಸುತ್ತಾರೆ. ಕನ್ನಡದ ಬಾವುಟಗಳು, ಕರ್ನಾಟಕದ ವಿವಿಧ ಜಿಲ್ಲೆಯ ವೇಷಭೂಷಣಗಳು ಮತ್ತು ಕನ್ನಡ ನಾಡಿನ ನಾನಾ ರೀತಿಯ ಭಕ್ಷ್ಯ ಭೋಜನಗಳನ್ನು ತಯಾರಿಸಿ ನಾಡು ನುಡಿ ಬಿಂಬಿಸುವ ವಾತಾವರಣ "ಕಸ್ತೂರಿ ನಿವಾಸ"ದ ಸೆಟ್‌ನಲ್ಲಿ ವಿಜೃಂಭಿಸಲಾರಂಭಿಸಿದೆ.

    ವಿಶೇಷ ಅತಿಥಿ ನಾಗೇಂದ್ರ ಪ್ರಸಾದ್‌ 'ಕಸ್ತೂರಿ ನಿವಾಸ' ತಂಡಕ್ಕೆ ರಾಜ್ಯೋತ್ಸವದ ವಿಶೇಷವಾಗಿ ಒಂದಿಷ್ಟು ಚಟುವಟಿಕೆಗಳನ್ನು ನೀಡಿ ಕನ್ನಡದ ಬಗ್ಗೆ ಮಾಹಿತಿ ನೀಡಿ ಹಾಗೆ ಒಂದಿಷ್ಟು ಮನರಂಜನೆಯನ್ನು ನೀಡುತ್ತಾರೆ.

     Udaya TV Will Celebrate Kannada Rajyothsava Differently

    "ಅತಿ ಹೆಚ್ಚು ಕನ್ನಡ ಪರ ಹೋರಾಟಗಳಲ್ಲಿ ಭಾಗವಹಿಸಿದ ಹೆಮ್ಮೆ ನನ್ನ ಬೆನ್ನಿಗಿದೆ. ಕನ್ನಡದ ಮೊದಲ ಖಾಸಗಿ ವಾಹಿನಿ ಎಂದೇ ಪ್ರಖ್ಯಾತಿ ಪಡೆದಿರುವ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಕಸ್ತೂರಿ ನಿವಾಸ" ಧಾರಾವಾಹಿಗೆ ಕನ್ನಡದ ಜಂಗಮರಾಗಿ ಬರುವುದು ನನಗೆ ಹೆಮ್ಮೆ ತರುವ ವಿಚಾರ" ಎಂದು ವಿ. ನಾಗೇಂದ್ರ ಪ್ರಸಾದ್‌ ಅಭಿಪ್ರಾಯ ಪಟ್ಟಿದ್ದಾರೆ.

    ಇಡೀ "ಕಸ್ತೂರಿ ನಿವಾಸ"ದ "ಉಸಿರಿರುವವರೆಗೂ ಹಸಿರಾಗಲಿ ಕನ್ನಡ" ಎಂದು ಸಾರುವ ಸಂಚಿಕೆಗಳು ಇದೇ ನವೆಂಬರ್‌ 1 ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

    English summary
    Udaya Tv will celebrate Kannada Rajyothsava differently on November 01. Udaya Tv celebrating Rajyothsava from many years.
    Thursday, October 28, 2021, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X