For Quick Alerts
  ALLOW NOTIFICATIONS  
  For Daily Alerts

  250ನೇ ಸಂಚಿಕೆಯತ್ತ ಉದಯ ವಾಹಿನಿಯ 'ಜೋ ಜೋ ಲಾಲಿ'

  By Harshitha
  |

  ಇಬ್ಬರು ಅಮ್ಮಂದಿರ ಪ್ರೀತಿಯ ಕಥೆ ಎಂದು ಹೇಳುತ್ತಾ, ಅಮ್ಮಂದಿರ ಕಥೆಯನ್ನ 2017 ರಲ್ಲಿ ಉದಯ ಟಿವಿ ಹೊತ್ತು ತಂದ ಧಾರಾವಾಹಿ 'ಜೋ ಜೋ ಲಾಲಿ'. ಟೈಟಲ್ ಸಾಂಗ್ ನಿಂದಲೇ ಜನಮನಗೆದ್ದ ಈ ಧಾರಾವಾಹಿ ಇದೀಗ 250 ಕಂತುಗಳನ್ನ ಪೂರೈಸಿದೆ. ರುಕ್ಮಿಣಿ, ಮಾಧವ, ರಾಧಾ, ಪ್ರೀತಂ... ಈ ನಾಲ್ಕು ಜನರ ಬದುಕಲ್ಲಿ ನಡೆಯುವ ತಿರುವುಗಳು ರುಕ್ಮಿಣಿ ರಾಧಾರನ್ನ ಬೆಸೆಯುವ ಕರುಳ ಬಳ್ಳಿಯ ನಂಟು 'ಜೋ ಜೋ ಲಾಲಿ'ಯ ಕಥಾ ಹಂದರ.

  ಮಕ್ಕಳಿಲ್ಲದ ರುಕ್ಮಿಣಿ ಮಾಧವ, ಬಾಡಿಗೆ ತಾಯಿ ಮುಖಾಂತರ ಮಗುವನ್ನು ಪಡೆಯುತ್ತಾರೆ. ಹೂವಿನಂತಹ ಮನಸ್ಸಿರುವ ರಾಧಾ, ತನ್ನ ತಾಯಿ ಮತ್ತು ಪ್ರೀತಿಸಿದ ಪ್ರೀತಂ ನ ಪ್ರಾಣ ಉಳಿಸೋಕೆ ಬಾಡಿಗೆ ತಾಯಿ ಆಗುವ ನಿರ್ಧಾರ ಮಾಡುತ್ತಾಳೆ. ಹೆತ್ತ ತಾಯಿಯಾಗಿ ಮಗುವಿನ ಜೊತೆಗೆ ಮಮಕಾರ ಬೆಳೆಸಿಕೊಂಡಿರುವ ರಾಧಾ, ಇಷ್ಟು ವರ್ಷ ಕಾದು ಮಡಿಲಲ್ಲಿ ಮಗುವನ್ನು ಕಾಣುವ ಆಸೆಯಲ್ಲಿ ರುಕ್ಮಿಣಿ, ಇದರ ನಡುವೆ ವಿಲನ್ ಮಹೇಶ್ವರಿ ಕುತಂತ್ರಗಳು... ಈ ರೀತಿ ಸೆಂಟಿಮೆಂಟ್ಸ್, ತಿರುವುಗಳನ್ನ ಹೊತ್ತು ತರುವ 'ಜೋ ಜೋ ಲಾಲಿ' ಯಶಸ್ವಿಯಾಗಿ 250 ಕಂತುಗಳನ್ನ ಪೂರೈಸಿದೆ.

  'ಜೋ ಜೋ ಲಾಲಿ'ಯಲ್ಲಿ ಪ್ರತಿಭಾವಂತ ಕಲಾವಿದರ ಬಳಗವೇ ಇದೆ. ಜ್ಯೋತಿ ರೈ, ನಾರಾಯಣ ಸ್ವಾಮಿ, ನಯನ ಶೆಟ್ಟಿ, ದೇವಯ್ಯ, ಕೃಷ್ಣ ನಾಡಿಗ್, ಮಹಾಲಕ್ಷ್ಮಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮುಂದೆ ಓದಿರಿ....

  ಭಾವನಾತ್ಮಕ ಬರವಣಿಗೆ

  ಭಾವನಾತ್ಮಕ ಬರವಣಿಗೆ

  ಅಲ್ಲಲ್ಲಿ ಬರುವ ಕವನಗಳು, ರೋಮ್ಯಾಂಟಿಕ್ ದೃಶ್ಯಗಳು, ಛಾಯಾಚಿತ್ರ ನೋಡುವ ಅನುಭವ ಕೊಡುವ 'ಜೋ ಜೋ ಲಾಲಿ' ಭಾವನಾತ್ಮಕ ಬರವಣಿಗೆಗೆ ಒಂದು ಸವಾಲೆಂದು ಹೇಳುತ್ತಾರೆ 'ಜೋ ಜೋ ಲಾಲಿ'ಯ ಸಂಭಾಷಣೆಕಾರ ಚೈತ್ರಿಕಾ ಹೆಗಡೆ.

  ಉದಯ ಟಿವಿಯಲ್ಲಿ ಬರಲಿದೆ ಹೊಸ ಧಾರಾವಾಹಿ 'ಕಣ್ಮಣಿ' ಉದಯ ಟಿವಿಯಲ್ಲಿ ಬರಲಿದೆ ಹೊಸ ಧಾರಾವಾಹಿ 'ಕಣ್ಮಣಿ'

  ತಿರುವುಗಳಿಂದ ಕೂಡಿರುವ ಧಾರಾವಾಹಿ

  ತಿರುವುಗಳಿಂದ ಕೂಡಿರುವ ಧಾರಾವಾಹಿ

  ಅಂತೂ ರುಕ್ಮಿಣಿ ಮಡಿಲಿಗೆ ಮಗು ಬಂದಾಯಿತು. ರುಕ್ಮಿಣಿಗೆ ಕೊಟ್ಟ ಮಗು ತಾನು ಹೆತ್ತ ಮಗು ಎಂಬುದು ರಾಧಾಳಿಗೆ ತಿಳಿಯುತ್ತಾ? ರಾಧಾ ಪ್ರೀತಂ ಮದುವೆಯಾಗ್ತಾರಾ? ರಾಧಾ ಮಾಧವನಿಗೆ ಎರಡನೇ ಹೆಂಡ್ತಿಯಾಗ್ತಾಳಾ? ಹೀಗೆ ಕೇಳಿ ಬರುವ ಪ್ರಶ್ನೆಗಳಿಗೆ ಮುಂದೆ ಸಾಕಷ್ಟು ತಿರುವುಗಳು ಇವೆ.

  ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಸೀರಿಯಲ್ ಮಹಾಸಂಚಿಕೆಗಳ ಮಹಾಪೂರಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಸೀರಿಯಲ್ ಮಹಾಸಂಚಿಕೆಗಳ ಮಹಾಪೂರ

  ನಿರ್ದೇಶಕ ತ್ರಿಶೂಲ್ ಬಾಯಿಂದ ಬಂದ ಮಾತು

  ನಿರ್ದೇಶಕ ತ್ರಿಶೂಲ್ ಬಾಯಿಂದ ಬಂದ ಮಾತು

  ಕಥೆ, ಸಂಭಾಷಣೆಗೆ ಬಣ್ಣ ಹಚ್ಚಿ ರೂಪ ಕೊಡುವುದೇ ನಿರ್ದೇಶಕರು. 'ಜೋ ಜೋ ಲಾಲಿ' ಧಾರಾವಾಹಿಯ ಹಲವಾರು ವಿಶೇಷತೆಗಳಲ್ಲಿ ಮುಖ್ಯವಾದುದು, ವಿಭಿನ್ನ ಬೆಳಕಿನಲ್ಲಿ ಚಿತ್ರೀಕರಿಸುವ ಮಾದರಿ ಹಾಗೂ ದೃಶ್ಯಗಳನ್ನ ಸುಂದರವಾಗಿ ಕಟ್ಟಿಕೊಡುವ ರೀತಿ. ಇದಕ್ಕೆ ಕಾರಣಕರ್ತರಾಗಿರುವ ನಿರ್ದೇಶಕರು ತ್ರಿಶೂಲ್, ''ಜೋ ಜೋ ಲಾಲಿ ನನ್ನ ವೃತ್ತಿ ಬದುಕಿನ ಒಂದು ಪ್ರಮುಖ ಘಟ್ಟ. ತಾಯಿ ಮಗುವಿನ ಸಂಬಂಧವಿದೆ, ಪ್ರಾಣಕಿಂತ ಹೆಚ್ಚು ಪ್ರೀತಿಸುವ ಜೋಡಿಯಿದೆ, ಆದರ್ಶವೆಂಬಂತಿರುವ ದಂಪತಿಯಿದ್ದಾರೆ, ಹೀಗೆ ಬೇರೆ ಬೇರೆ ಸಂಬಂಧಗಳು, ಎಲ್ಲವನ್ನೂ ಒಗ್ಗೂಡಿಸಿ ಸನ್ನಿವೇಶಗಳನ್ನ ಮಾಡೋದೆ ಒಂದು ಖುಷಿ'' ಎನ್ನುತ್ತಾರೆ.

  ನಾರಾಯಣ ಸ್ವಾಮಿ ಹೇಳಿದಿಷ್ಟು

  ನಾರಾಯಣ ಸ್ವಾಮಿ ಹೇಳಿದಿಷ್ಟು

  "ನನ್ನ 19 ವರ್ಷದ ವೃತ್ತಿ ಜೀವನದಲ್ಲಿ ನನಗೆ ಸಿಕ್ಕಂತ ಬಹಳ ಅಚ್ಚುಮೆಚ್ಚಿನ ಪಾತ್ರ. ಪ್ರತಿ ದೃಶ್ಯ ಮಾಡೋವಾಗಲೂ ಖುಷಿ, ಮುಂದೇನಾಗುತ್ತೆ ಅನ್ನೋ ಕಾತುರತೆ ನಮ್ಮ ಸೆಟ್ ಅಲ್ಲಿ ಇದ್ದೇ ಇರುತ್ತೆ, ಈ ಧಾರಾವಾಹಿ ಜನರ ಮನಸ್ಸಿನಲ್ಲಿ ಪ್ರಭಾವ ಬೀರಿದೆ ಅಂದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಂತೆ. 250 ಕಂತುಗಳು ಮುಗಿಸಿದ್ದೀವಿ, ಹೀಗೆ ನಿಮ್ಮ ಪ್ರೀತಿ ಜೋ ಜೋ ಜೊತೆಗಿರಲಿ'' ಎನ್ನುತ್ತಾರೆ ಮಾಧವನ ಪಾತ್ರ ನಿರ್ವಹಿಸುತ್ತಿರುವ ನಾರಾಯಣಸ್ವಾಮಿ.

  ನಯನಾ ಶೆಟ್ಟಿ ಹೇಳುವುದೇನು.?

  ನಯನಾ ಶೆಟ್ಟಿ ಹೇಳುವುದೇನು.?

  ''ಹಾಸ್ಯ ಧಾರಾವಾಹಿ ಮುಖಾಂತರ ಪರಿಚಿತಳಾದವಳು ನಾನು. ಮೊದಲಿಗೆ ಈ ಪಾತ್ರ ಹೇಗೋ ಏನೋ ಅನ್ನೋ ಭಯ ಕಾಡ್ತಿತ್ತು. ಆದರೆ, ರಾಧಾಳ ಪಾತ್ರ ನನಗೆ ಅರಿವಿಲ್ಲದೆ ನನ್ನೊಳಗೆ ವೈಬ್ರೇಷನ್ ಸೃಷ್ಟಿಸಿದೆ. ಆ ಕಡೆಗೆ ಆಟಾವಾಡಿಕೊಂಡು, ಪ್ರೀತಿಸಿದವನ ಜೊತೆಗೆ ಖುಷಿಯಲ್ಲಿರುವ ಹುಡುಗಿ, ಮತ್ತೊಂದೆಡೆ ಬಾಡಿಗೆ ತಾಯಿಯಾಗಿ ಮೌನಿಯಾಗ್ತಾ ಜವಾಬ್ದಾರಿ ಹೊರುತ್ತಾಳೆ, ಹೀಗೆ ಎರಡು ಶೇಡ್ ನಲ್ಲಿ ನಟಿಸೋಕೆ ಖುಷಿಯಾಗುತ್ತೆ. ಅಳುವ ದೃಶ್ಯಗಳಲ್ಲಿ ಎಷ್ಟೋ ಸಲ ನಿಜವಾಗಲೂ ಭಾವುಕಳಾಗಿ ಅತ್ತಿರೋದುಂಟು'' ಎನ್ನುತ್ತಾರೆ ರಾಧಾ ಪಾತ್ರ ಮಾಡುತ್ತಿರುವ ನಯನಾಶೆಟ್ಟಿ.

  ಜ್ಯೋತಿ ರೈ ಏನಂತಾರೆ.?

  ಜ್ಯೋತಿ ರೈ ಏನಂತಾರೆ.?

  ''ತಾಯ್ತನದ ಪಾತ್ರಗಳನ್ನ ಈ ಮುಂಚೆ ಅಭಿನಯಿಸಿದ್ದೀನಿ, ಆ ಪಾತ್ರಗಳಲ್ಲಿ ಪ್ರಬುದ್ಧತೆ ಇತ್ತು. ಆದರೆ ಜ್ಯೋತಿ ರೈ ರುಕ್ಮಿಣಿಯಾಗಿದ್ದು ಹೊಸ ಹೆಜ್ಜೆ. ರುಕ್ಮಿಣಿ ತುಂಬ ಸೂಕ್ಷ್ಮ, ಮಗುವಿನ ವಿಚಾರ ಬಂದಾಗ ಅಳುಮುಂಜಿ. ಅತ್ತಿಗೆ ಕೆಟ್ಟವರು ಅಂತ ಗೊತ್ತಿದ್ದರೂ, ಅವರನ್ನ ನಂಬುವಷ್ಟು ಮುಗ್ಧೆ. ನನಗೆ ಈ ಪಾತ್ರ ಇಷ್ಟ ಆಗಿದ್ದೇ ಇಲ್ಲಿ. ಮಾಧವನ ಬಗ್ಗೆ ರುಕ್ಮಿಣಿಗಿರುವ ಪ್ರೀತಿ, ಮಗುವನ್ನು ಕಂಡಾಗ ಅವಳಿಗೆ ಆಗುವ ಆನಂದ ಹೀಗೆ ಹೇಳುತ್ತಾ ಹೋದರೆ ನೂರೆಂಟು. ರುಕ್ಮಿಣಿ ಪಾತ್ರ ಬಹಳ ಸ್ಪೆಷಲ್" ಎನ್ನುತ್ತಾರೆ ಜ್ಯೋತಿ ರೈ.

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  'ಜೋ ಜೋ ಲಾಲಿ'ಯ 250ನೇ ಸಂಚಿಕೆ ಸೋಮವಾರದಿಂದ ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  JO JO laali, story of two mothers, launched in 2017 in Udaya TV happen to be a successful show in Kannada television. JO JO laali which attracted audience, Now successfully completes 250 episodes. 250ನೇ ಸಂಚಿಕೆಯತ್ತ ಉದಯ ವಾಹಿನಿಯ 'ಜೋ ಜೋ ಲಾಲಿ'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X