400 ಸಂಚಿಕೆಗಳನ್ನು ಪೂರೈಸಿದ 'ಜೋ ಜೋ ಲಾಲಿ' ಧಾರಾವಾಹಿ
24 ವರ್ಷಗಳಿಂದ ನಿಮ್ಮ ಉದಯ ಟಿವಿ ವೀಕ್ಷಕರನ್ನು ರಂಜಿಸುತ್ತಿದೆ. ವಿಭಿನ್ನ ಧಾರಾವಾಹಿಗಳಿಂದ ಜನಮಾನಸದಲ್ಲಿ ನೆಲೆ ಮಾಡಿದೆ. 'ಜೈ ಹನುಮಾನ್', 'ಬ್ರಹ್ಮಾಸ್ತ್ರ', 'ಕಣ್ಮಣಿ', 'ಕಾವೇರಿ', 'ಮಾನಸ ಸರೋವರ', 'ಮಾಯಾ', 'ನಂದಿನಿ'... ಹೀಗೆ ಸಾಲು ಸಾಲು ಜನಪ್ರಿಯ ಧಾರಾವಾಹಿಗಳನ್ನ ನೀಡುತ್ತಾ ಮುನ್ನಡೆಯುತ್ತಿದೆ.
ಇದೇ ಪಟ್ಟಿಯಲ್ಲಿರುವ ಮತ್ತೊಂದು ಧಾರಾವಾಹಿ 'ಜೋ ಜೋ ಲಾಲಿ' ಇಂದು 400 ಸಂಚಿಕೆಗಳನ್ನ ಪೂರೈಸಿದೆ. ಹೆಸರೇ ಹೇಳುವ ಹಾಗೆ ಇದು ತಾಯಿ ಮಗುವಿನ ಬಾಂಧವ್ಯದ ಕಥೆ. ಬಾಡಿಗೆ ತಾಯಿಯಿಂದ ಮಗುವನ್ನ ಪಡೆದುಕೊಳ್ಳುವ ದಂಪತಿಗಳ ಬದುಕಲ್ಲಿ ಆಗುವ ಘಟನೆಗಳೇ 'ಜೋ ಜೋ ಲಾಲಿ'ಯ ಕಥಾ ಸಾರಾಂಶ.
ರುಕ್ಮಿಣಿ ಮಾಧವ ಆದರ್ಶ ದಂಪತಿಗಳು. ಅವರ ಬದುಕನ್ನ ಸರ್ವನಾಶ ಮಾಡುವ ಪಣ ತೊಟ್ಟು ನಿಂತವಳು ರುಕ್ಮಿಣಿ ಅತ್ತಿಗೆ ಮಹೇಶ್ವರಿ. ಸನ್ನಿವೇಶಗಳ ಬಂಧಿಯಾಗಿ ರಾಧಾ ಬಾಡಿಗೆ ತಾಯಿ ಆಗುತ್ತಾಳೆ. ತನ್ನ ಮಗು ರುಕ್ಮಿಣಿ ಮಡಿಲಲ್ಲಿ ಇರುವುದು ಗೊತ್ತಾಗಿ, ಮಗುವಿನ ವ್ಯಾಮೋಹದಿಂದ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಎಲ್ಲಾ ಸರಿಯಿದೆ ಅನ್ನುವಾಗಲೇ, ರಾಧಾಳನ್ನ ಅಸ್ತ್ರವಾಗಿಸಿಕೊಂಡು ಕಟ್ಟು ಕಥೆ ಕಟ್ಟಿ ರುಕ್ಮಿಣಿ ಮಾಧವನ ಸಂಬಂಧವನ್ನ ಮುರಿಯುತ್ತಾಳೆ. ರಾಧಾ-ಮಾಧವನ ನಡುವೆ ಅಕ್ರಮ ಸಂಬಂಧವಿದೆಯೆಂದು ನಂಬುವ ರುಕ್ಮಿಣಿ ಮಾಧವನಿಗೆ ವಿಚ್ಛೇದನ ಪತ್ರ ಕಳಿಸುತ್ತಾಳೆ. ರುಕ್ಮಿಣಿ ಮಾಧವ ಒಂದಾಗುತ್ತಾರಾ?, ಬಾಡಿಗೆ ತಾಯಿಯಾದ ರಾಧಾ ತ್ಯಾಗಕ್ಕೆ ಬೆಲೆ ಸಿಗುತ್ತಾ? ಮಹೇಶ್ವರಿ ಮೋಸಕ್ಕೆ ತೆರೆ ಬೀಳುತ್ತಾ? ಇವೆಲ್ಲದಕ್ಕೂ ಉತ್ತರ 'ಜೋ ಜೋ ಲಾಲಿ'ಯ ಮುಂದಿನ ಸಂಚಿಕೆಗಳು ನೀಡಲಿವೆ. ಮುಂದೆ ಓದಿರಿ...

ಖುಷಿ ಆಗುತ್ತೆ ಎಂದ ನಾರಾಯಣಸ್ವಾಮಿ
'‘ರುಕ್ಮಿಣಿ ಮಾಧವ ಏಕೆ ದೂರವಾದ್ರು? ಮಾಧವನನ್ನು ನೋಡಿದ್ರೆ ಪಾಪ ಅನ್ನಿಸುತ್ತೆ ಅಂತ ಹಲವಾರು ಜನ ಹೇಳೋದು ಕೇಳಿ ಖುಷಿಯಾಗುತ್ತೆ, ಸಾರ್ಥಕತೆಯ ಭಾವ ಮೂಡುತ್ತೆ‘' ಎನ್ನುತ್ತಾರೆ 'ಜೋ ಜೋ ಧಾರಾವಾಹಿ'ಯ ನಾಯಕ ನಾರಾಯಣಸ್ವಾಮಿ.

ಜ್ಯೋತಿ ರೈ ಏನಂದ್ರು.?
'‘ಮುಂಚೆ ಮಗುವಿಗಾಗಿ ಅಳುತ್ತಿದ್ದೆ, ಈಗ ಮಗು ಮತ್ತೆ ಮಾಧವನಿಗೋಸ್ಕರ ಅಳುತ್ತಿದ್ದೀನಿ'' ಎನ್ನುತ್ತಾರೆ ರುಕ್ಮಿಣಿ ಪಾತ್ರಧಾರಿ ಜ್ಯೋತಿ ರೈ.

ನಯನಾ ಶೆಟ್ಟಿ ಹೀಗಂದ್ರು
''ರಾಧಾ ಅನ್ನೋ ಪಾತ್ರವೇ ಬಹಳ ವಿಶೇಷ ನನಗೆ. ಅವಳು ಮಾಡುವ ತ್ಯಾಗ, ಅವಳ ತಾಳ್ಮೆ , ಅವಳ ಛಲ ಎಲ್ಲವೂ ವಿಶೇಷ. ಈ ಪಾತ್ರ ಮಾಡಿರೋದಕ್ಕೆ ಬಹಳ ತೃಪ್ತಿ ನನಗೆ ಸಿಕ್ಕಿದೇ'' ಎನ್ನುತ್ತಾರೆ ರಾಧಾ ಪತ್ರ ವಹಿಸಿರುವ ನಯನಾ ಶೆಟ್ಟಿ.

ಚೈತ್ರಿಕಾ ಹೆಗಡೆ ಏನಂತಾರೆ.?
''ಮೊದಲ ಎಪಿಸೋಡ್ ನಿಂದಲೂ ಈ ಧಾರಾವಾಹಿಗೆ ಬರೆಯೋದು ಒಂದು ರೀತಿಯ ಖುಷಿ, ತಾಯಿ ಮಗುವಿನ ಸಂಬಂಧದ ಧಾರಾವಾಹಿ, ಬರೀ ಭಾವನಾತ್ಮಕ ಮತ್ತು ವಿಷಾದದ ಮಾತುಗಳನ್ನೇ ಬರಿಬೇಕೇನೋ ಅಂದ್ಕೊಂಡೆ. ಆದರೆ, ಪ್ರೀತಿಯ ಎಳೆ, ಭಗ್ನ ಪ್ರೇಮ, ದ್ವೇಷದ ತಾಪವೊಂದೆಡೆ, ಮಗು ಮತ್ತು ತಾಯಿಯ ಮಮತೆಯ ಮಾತುಗಳು ಬರೆಯಲು ಅವಕಾಶ ಮಾಡಿಕೊಡ್ತು ಜೋ ಜೋ ಲಾಲಿ'' ಎನ್ನುತ್ತಾರೆ ಚೈತ್ರಿಕಾ ಹೆಗಡೆ, ಬರಹಾಗಾರರು.

ಕಥೆಗಾರರು ಹೇಳುವುದೇನು.?
ಯಾವುದೇ ಧಾರಾವಾಹಿ ಆದರೂ, ಕೂತೂಹಲ ಮೂಡಿಸುವ ಕಥೆ ಬಹಳ ಮುಖ್ಯ. ಮಾಧವ ರುಕ್ಮಿಣಿಗೆ ಯಾಕಿಷ್ಟು ಕಾಟ ಕೊಡ್ತಿರಾ ಅನ್ನೋ ಪ್ರಶ್ನೆಗೆ ‘'ಮುಂದಿನ ತಿರುವುಗಳು ಎಲ್ಲದಕ್ಕೂ ಉತ್ತರ'' ಅಂತ ನಸು ನಕ್ಕು ಹೇಳುತ್ತಾರೆ ಶೇಖರ್, ಜೋ ಜೋ ಲಾಲಿಯ ಕಥೆಗಾರರು.

ನಿರ್ದೇಶಕರು ಹೇಳಿದಿಷ್ಟು
''ಒಳ್ಳೆಯದು ಇದ್ದ ಮೇಲೆ ಕೆಟ್ಟದ್ದು ಇರಲೇಬೇಕು, ಒಮ್ಮೊಮ್ಮೆ ಮಹೇಶ್ವರಿ ಅಟ್ಟಹಾಸ ನನಗೆ ಸಿಟ್ಟು ತರುತ್ತೆ, ಅಷ್ಟು ಹತ್ತಿರವಾಗಿದೆ ಈ ಧಾರಾವಾಹಿ ನನಗೆ'' ಅಂತ ಹೇಳುತ್ತಾರೆ ಶ್ರೀನಿವಾಸ್, ಜೋ ಜೋ ಲಾಲಿ ನಿರ್ದೇಶಕರು.

ಪ್ರಸಾರ ಯಾವಾಗ.?
ವೀಕ್ಷಕರನ್ನ ಸೆರೆಹಿಡಿದು, 400 ಕಂತುಗಳನ್ನ ಪೂರೈಸಿ ಮುನ್ನುಗುತ್ತಿದೆ 'ಜೋ ಜೋ ಲಾಲಿ', ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











