100 ಸಂಚಿಕೆ ಪೂರೈಸಿದ 'ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ'.. ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಾ ಹೊಸ ಪಾತ್ರಗಳು..?

By ಎಸ್ ಸುಮಂತ್

ತಾಯಿ ಯಲ್ಲಮ್ಮನ ಜನ್ಮ ಮಾನವರಾಗಿ ಭೂಮಿಯ ಮೇಲೆ ಜನಿಸಿದೆ. ಅದುವೇ ರೇಣುಕೆ ಮತ್ತು ಯಲ್ಲಮ್ಮ. ರೇಣುಕೆ ಅರಮನೆಯಲ್ಲಿ ರಾಜಕುಮಾರಿಯಾಗಿ ಜನಿಸಿದ್ದರೆ, ಯಲ್ಲಮ್ಮ ಅರಮನೆಯ ಸೈನಿಕನ ಮಗಳಾಗಿ ಜನಿಸಿದ್ದಾಳೆ. ಆದರೆ ಅದೇಗೋ ಇಬ್ಬರ ಸಮಾಗಮವಾಗಿ ಆಗಿದೆ. ರೇಣುಕೆ ಎಂದರೆ ಯಲ್ಲವ್ವನಿಗೆ, ಯಲ್ಲವ್ವ ಎಂದರೆ ರೇಣುಕೆಗೆ ಮಹಾಪ್ರಾಣ.

ರೇಣುಕೆಗೆ ಯಲ್ಲವ್ವನ ಪರಿಚಯವಾದಾಗಿನಿಂದ ಒಂದಷ್ಟು ಬದಲಾವಣೆಯೂ ಆಗಿದೆ. ರೇಣುಕೆಗೆ ಯಲ್ಲವ್ವ ಒಬ್ಬಳಿದ್ದರೆ ಸಾಕು ಎಂಬಷ್ಟರಮಟ್ಟಿಗೆ ಬದಲಾವಣೆಯಾಗಿದೆ. ಇಬ್ಬರು ಪ್ರಾಣ ಸ್ನೇಹಿತೆಯರಾಗಿದ್ದಾರೆ. ಹುಟ್ಟಿದಾಗಲೂ ಕೈ ಕೈ ಮಿಲಾಯಿಸಿಕೊಂಡಿದ್ದರು. ಈಗ ಬೆಳೆದಾಗಲು ವಿಧಿ ಒಂದು ಮಾಡಿದೆ. ಸದ್ಯ ರೇಣುಕಾ ಯಲ್ಲಮ್ಮ ಧಾರಾವಾಹಿ ಹೊಸ ತಿರುವಿನೊಂದಿಗೆ ಬರಲು ಸಜ್ಜಾಗಿದೆ. ಏನದು ತಿರುವು ತಿಳಿಯುವುದಕ್ಕೆ ಮುಂದೆ ಓದಿ.

Udho Udho Shri Renuka Yellamma completed her 100th episode, and some changes were made

100 ಸಂಚಿಕೆ ಪೂರೈಸಿದ ರೇಣುಕಾ ಯಲ್ಲಮ್ಮ

ಒಂದು ಧಾರಾವಾಹಿ 100 ಸಂಚಿಕೆ ಪೂರೈಸುವುದು ಎಂದರೆ ಸುಮ್ಮ‌ನೆ ಅಲ್ಲ. ಕಥೆಯೂ ಅಷ್ಟೇ ಗಟ್ಟಿಯಾಗಿರಬೇಕು. ಜನರು ಅದನ್ನು ಇಷ್ಟಪಡಬೇಕು. ಆಗ ಮಾತ್ರ ಸಂಚಿಕೆಗಳು ಹೆಚ್ಚಾಗುತ್ತಾ ಹೋಗುವುದಕ್ಕೆ ಸಾಧ್ಯವಾಗುತ್ತದೆ. ರೇಣುಕಾ ಯಲ್ಲಮ್ಮ ಧಾರಾವಾಹಿ ಸದ್ಯ 100 ಸಂಚಿಕೆ ದಾಟಿ ಮುಂದೆ ಸಾಗುತ್ತಾ ಇದೆ. ಈಗಲೂ ಧಾರಾವಾಹಿ ಸಾಕಷ್ಟು‌ ಕುತೂಹಲವನ್ನು ಮೂಡಿಸುತ್ತದೆ. ಯಾಕಂದ್ರೆ, ಇದು ಯಲ್ಲಮ್ಮನ ಆಶೀರ್ವಾದ ಇರುವ ಹುಡುಗಿಯರ ಕಥೆಯಾಗಿದೆ.

ರೇಣುಕೆ-ಯಲ್ಲಮ್ಮನನ್ನು ಮೆಚ್ಚಿದ ಜನ

ಪ್ರತಿ ವಾರ ಧಾರಾವಾಹಿಗಳ ರೇಟಿಂಗ್ ಪಾಯಿಂಟ್ ಬರುತ್ತೆ. ಸದ್ಯ ಇದು ಧಾರಾವಾಹಿಗಳ ಸ್ಪರ್ಧೆ ಇರುವ ಸಮಯ. ಇರುವ ಮನರಂಜನಾ ವಾಹಿನಿಗಳು ಒಂದಕ್ಕಿಂತ ಒಂದರಂತೆ ಅದ್ಭುತವಾಗಿರುವ ಧಾರಾವಾಹಿಗಳನ್ನು ನೀಡುತ್ತಾ ಹೋಗುತ್ತಾರೆ. ಅಷ್ಟು ಧಾರಾವಾಹಿಗಳಿಗೆ ಕಾಂಪಿಟ್ ಮಾಡಬೇಕಿರುತ್ತದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ರೇಣುಕಾ ಯಲ್ಲಮ್ಮ ಧಾರಾವಾಹಿ ಟಿಆರ್‌ಪಿಯಲ್ಲಿ ಒಳ್ಳೆ ರೇಟಿಂಗ್ ಸಿಕ್ಕಿದೆ. ದೇವರ ಬಗೆಗಿನ ಕಥೆಗಳು ಎಂದರೆ ಎಲ್ಲಾ ವರ್ಗದ ಜನರಿಗೂ ಹಿಡಿಸುತ್ತದೆ. ಭಕ್ತಿ ಬರುತ್ತದೆ. ದೇವರ ಬಗ್ಗೆ ತಿಳಿಯುವ ಕುತೂಹಲ ಮೂಡುತ್ತದೆ. ಹೀಗಾಗಿಯೇ 'ರೇಣುಕಾ ಯಲ್ಲಮ್ಮ' ಧಾರಾವಾಹಿ ನಂಬರ ಒನ್ ಆಗಿದೆ.

ನೂರರ ಹಾದಿಯಲ್ಲಿ ಬದಲಾವಣೆ ಏನು..?

ಧಾರಾವಾಹಿಯ ಕಥೆ ಕಾಲ ಕಾಲಕ್ಕೆ ಬದಲಾವಣೆಯನ್ನು ಪಡೆಯಬೇಕಾಗುತ್ತದೆ. ಪಾತ್ರಗಳು ಸೇರುತ್ತಾ ಹೋಗುತ್ತದೆ. ಸಂಭಾಷಣೆಯಲ್ಲೂ ಬದಲಾವಣೆ ಕಾಣಬಹುದಾಗುತ್ತದೆ. ಧಾರಾವಾಹಿ ಯಶಸ್ಸು ಪಡೆಯುವುದಕ್ಕೆ ಇಷ್ಟೆಲ್ಲಾ ಸರ್ಕಸ್ ಮಾಡಲೇಬೇಕಾಗುತ್ತದೆ. ಆಗಲೇ ನೋಡುಗರಿಗೂ ಕುತೂಹಲ ಹುಟ್ಟುವುದು. ಈಗ ನೂರರ ಸಂಚಿಕೆ ದಾಟಿರುವ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಬೇರೆ ಆಯಾಮಕ್ಕೆ ತಿರುಗಲಿದೆ ಎನ್ನುತ್ತಿವೆ ಕಿರುತೆರೆ ಮೂಲಗಳು. ಹೊಸ ಹೊಸ ಪಾತ್ರಗಳ ಪರಿಚಯವಾಗಲಿದೆ. ರೇಣುಕೆಗೆ ಮತ್ತು ಯಲ್ಲಮ್ಮನಿಗೆ ಒಂದು ಅಗೋಚರ ಶಕ್ತಿ ಇದೆ. ಅದು ಕನಸಲ್ಲಿ ಮಾತ್ರ ನೆನಪಾಗುತ್ತಾ ಇರುತ್ತೆ. ಇನ್ನು ಮುಂದೆ ಆ ಶಕ್ತಿಯ ಪ್ರದರ್ಶನವೂ ಆಗಬಹುದು.

Udho Udho Shri Renuka Yellamma completed her 100th episode, and some changes were made

ರೇಣುಕೆಯನ್ನು ಕಾಪಾಡುತ್ತಾಳಾ ಯಲ್ಲಮ್ಮ..?

ರೇಣುಕೆ ನಿಂತ ನೀರಲ್ಲ ಎಂದು ಈಗಾಗಲೇ ಜ್ಯೋತಿಷಿಗಳು ತಿಳಿಸಿ ಹೋಗಿದ್ದಾರೆ. ಅದರಂತೆ ರೇಣುಕೆ ಕೂಡ ನನಗೆ ಅರಮನೆ ಇಷ್ಟವಿಲ್ಲ ಎಂದೇ ವಾದಿಸುತ್ತಾಳೆ. ರೇಣುಕೆ ಅರಮನೆ ತೊರೆಯುವ ಸಮಯ ಹತ್ತಿರವಾಗಿದೆ. ಅದಕ್ಕೆ ಅರಮನೆಯಲ್ಲಿ ಅವಳನ್ನು ಕೂಡಿ ಹಾಕಿದ್ದಾರೆ. ಆ ಕಡೆ ಯಲ್ಲಮ್ಮ ಸ್ನೇಹಿತೆಗಾಗಿ ಬೆಟ್ಟದ ಮೇಲೆ ಬೆಂಕಿ ಹಾಕಿ ಕಾಯುತ್ತಿದ್ದಾಳೆ. ಕೂಡಿ‌ ಹಾಕಿರುವುದಕ್ಕೆ ರೇಣುಕೆಯ ಕೋಪ ಜಾಸ್ತಿ ಆಗಿದೆ. ಇಬ್ಬರ ಭೇಟಿ ಹೇಗೆ..? ಇಲ್ಲಿಂದಾನೇ ಹೊಸ ಹಾದಿ ಶುರುವಾಗುತ್ತಾ ಎಂಬ ಕುತೂಹಲ ನೋಡುಗರಿಗಿದೆ.

More from Filmibeat

English summary
Udho Udho Shri Renuka Yellamma completed her 100th episode, and some changes were made. Here is the details about 100 episode special,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X