ಉದಯ ಟಿವಿಯಲ್ಲಿ ವಾರವೆಲ್ಲಾ ಯುಗಾದಿ ಸಂಭ್ರಮ

ಹೊಸ ವರ್ಷಕ್ಕೆ ಹೊಸ ಹರುಷವು ಮರಳಿ ಬಂದಿದೆ, ಸಡಗರ, ಸಂಭ್ರಮದೊಂದಿಗೆ ಯುಗಾದಿ. ನಿಮ್ಮ ನೆಚ್ಚಿನ ಉದಯ ಟಿವಿ ಈ ಯುಗಾದಿ ಹಬ್ಬವನ್ನು ವಾರವಿಡೀ ವಿಶೇಷ ಸಂಚಿಕೆಗಳೊಂದಿಗೆ ಆಚರಿಸುತ್ತಿದೆ.

ಎಪ್ರಿಲ್ 1, ಸೋಮವಾರದಂದು ಕ್ಯೂಟ್ ಲವ್ ಸ್ಟೋರಿ 'ಸೇವಂತಿ' ಮಹಾಸಂಚಿಕೆ. ಮದುವೆಯೇ ಆಗಬಾರದೆಂದಿರುವ ನಾಯಕ ಅರ್ಜುನನಿಗೆ ಮನೆಯವರ ಒತ್ತಾಯಕ್ಕೆ ಬಂದ ಮದುವೆ ಪ್ರಸ್ತಾಪದಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕುತ್ತಿರುತ್ತಾನೆ. ಅದೇ ಸಮಯದಲ್ಲಿ ಸಂಕಷ್ಟದಲ್ಲಿರುವ ನಾಯಕಿ ಸೇವಂತಿ ಅವನ ಬಳಿ ಸಹಾಯ ಬೇಡಿ ಬರುತ್ತಾಳೆ. ಇದೇ ಸಂದರ್ಭವನ್ನು ಬಳಸಿಕೊಳ್ಳುವ ಅರ್ಜುನ್, ಸಹಾಯ ಮಾಡುವ ನೆಪದಲ್ಲಿ ಅವಳನ್ನೇ ತನ್ನ ಜೊತೆ ಒಂದು ವರ್ಷಕ್ಕೆ ಒಪ್ಪಂದದ ಮದುವೆಯಾಗುವಂತೆ ಪ್ರಸ್ತಾಪಿಸುತ್ತಾನೆ.

Ugadi special programme in udaya tv

ಯುಗಾದಿ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಂಡಿದ್ದಾಗ ಅರ್ಜುನ್ನನ್ನು ವೈಯಕ್ತಿಕವಾಗಿ ದ್ವೇಷಿಸುತ್ತಿರುವ ಸೇವಂತಿ ದ್ವಂದ್ವ ಮನಸ್ಥಿತಿಯಲ್ಲಿರುತ್ತಾಳೆ. ಹಬ್ಬದ ದಿನದಂದು ಸೇವಂತಿಗೆ ಅರ್ಜುನ್ ಮದುವೆ ವಿಷಯದಲ್ಲಿ ಒಂದು ಗಟ್ಟಿ ನಿರ್ಧಾರ ತೆಗದುಕೊಳ್ಳುವ ಸಂದರ್ಭ ಬರುತ್ತದೆ. ಅರ್ಜುನನ ಜೊತೆ ಒಪ್ಪಂದದ ಮದುವೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಯಾವುದು ಎಂಬ ಕುತೂಹಲ ಹೊತ್ತು ತರುತ್ತಿದೆ, ಈ ಯುಗಾದಿ ವಿಶೇಷದ 'ಸೇವಂತಿ' ಮಹಾಸಂಚಿಕೆ ಇದೇ ಸೋಮವಾರ ರಾತ್ರಿ 7:30ರಿಂದ 8:30ಕ್ಕೆ ಪ್ರಸಾರವಾಗಲಿದೆ.

ಎಪ್ರಿಲ್ 2, ಮಂಗಳವಾರದಂದು ಎಲ್ಲರ ಮನಗೆದ್ದ ಕೌಟುಂಬಿಕ ಧಾರಾವಾಹಿ 'ದೇವಯಾನಿ' ಮಹಾಸಂಚಿಕೆ. ಈ ಯುಗಾದಿ ಹಬ್ಬವು ದೇವಯಾನಿ-ಶ್ರೀವತ್ಸ ಮನೆಯಲ್ಲಿ ಬಾಡಿಹೋಗಿರುವ ಹಳೆಯ ಸಂಬಂಧಗಳನ್ನು ಮತ್ತೆ ಚಿಗುರುವಂತೆ ಮಾಡಲಿದೆ. ಗಂಡನ ಮನೆ ಬಿಟ್ಟು ತವರಿಗೆ ಬಂದ ನಾದಿನಿ ಶಾಂಭವಿಯನ್ನು ಅವಳ ಗಂಡ ಸಂದೇಶ್ನೊಂದಿಗೆ ಜೊತೆಗೂಡಿಸಲು ದೇವಯಾನಿ ನಿರ್ಧರಿಸುತ್ತಾಳೆ.

ಹಬ್ಬದ ಸಂಪ್ರದಾಯಗಳನ್ನು ಪಾಲಿಸಿಕೊಂಡು ಸಂಭ್ರಮ-ಸಡಗರದ ಜೊತೆ ಒಂದಿಷ್ಟು ತುಂಟಾಟ ಮಾಡುತ್ತಾ ಹಬ್ಬದ ಆಚರಣೆ ನಡೆಯುವುದರ ಜೊತೆ ದೇವಯಾನಿಗೆ ಶಾಂಭವಿ- ಸಂದೇಶರ 8ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಷಯ ತಿಳಿದು, ದೇವಯಾನಿ ಸಂದೇಶ್ ನನ್ನು ಮನೆಗೆ ಕರೆಸಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾಳೆ. ಅಂದು ಬೇರೆಯಾದ ದಂಪತಿಗಳನ್ನು ದೇವಯಾನಿ ಒಂದು ಮಾಡುವುದರಲ್ಲಿ ಯಶಸ್ವಿಯಾಗುತ್ತಾಳಾ ಎಂಬ ಕುತೂಹಲದೊಂದಿಗೆ ʼದೇವಯಾನಿʼ ಮಹಾಸಂಚಿಕೆ ಇದೇ ಮಂಗಳವಾರ ರಾತ್ರಿ 7:00ರಿಂದ 8:00ಕ್ಕೆ ಪ್ರಸಾರವಾಗಲಿದೆ

Ugadi special programme in udaya tv

ಎಪ್ರಿಲ್ 3, ಬುಧವಾರದಂದು ಕರುಳ ಬಳ್ಳಿಯ ವಾತ್ಸಲ್ಯದ ಕತೆ 'ಜೋ ಜೋ ಲಾಲಿ' ಮಹಾಸಂಚಿಕೆ. ಖಾಯಿಲೆಯಿಂದ ನರಳುತ್ತಿರುವ ರುಕ್ಮಿಣಿ, ತಾನು ಸಾಯುವ ಮುಂಚೆ ತನ್ನ ಗಂಡ ಮಾಧವನಿಗೆ ಮರುಮದುವೆ ಮಾಡಿಸಿ ಅವನ ಹಾಗೂ ತನ್ನ ಮಗುವಿನ ಜೀವನ ಸುಭದ್ರಗೊಳಿಸಬೇಕೆಂದು ಹೆಣಗಾಡುತ್ತಿರುತ್ತಾಳೆ. ಯುಗಾದಿಯ ದಿನ, ಮಾಧವನ ಹುಟ್ಟುಹಬ್ಬವೂ ಇರುವುದರಿಂದ ಆ ಸಂಭ್ರಮದ ನಡುವೆ ಈ ಸತ್ಯ ತಿಳಿದ ಮಾಧವನ ಮನಸಿನ ಹೊರಳಾಟ ಮನೆಯವರಿಗೆ ತಿಳಿದು, ಅದರಿಂದ ರುಕ್ಮಿಣಿಯ ಖಾಯಿಲೆ ವಿಚಾರವೂ ಎಲ್ಲರಿಗೂ ತಿಳಿದುಬಿಡುತ್ತದೆಯೇ ಎಂಬ ಕುತೂಹಲದಿಂದ ಕತೆ ಸಾಗುವ 'ಜೋಜೋ ಲಾಲಿ' ಮಹಾಸಂಚಿಕೆ ಇದೇ ಬುಧವಾರ ಸಂಜೆ 6:30 ರಿಂದ 7:30ಕ್ಕೆ ಪ್ರಸಾರವಾಗಲಿದೆ.

ಎಪ್ರಿಲ್ 4, ಗುರುವಾರದಂದು ಸ್ನೇಹ-ದ್ವೇಷ, ತಂತ್ರ-ಮಂತ್ರಗಳಿಂದ ತನ್ನ ಮಾಯಾಜಾಲಕ್ಕೆ ನೋಡುಗರನ್ನು ಸೆಳೆದ 'ನಂದಿನಿ' ಧಾರಾವಾಹಿಯ ಮಹಾಸಂಚಿಕೆ. ಹಬ್ಬದ ದಿನ ಶ್ರೀಮಂತ ಉದ್ಯಮಿಯಾದ ನಾಯಕ ವಿರಾಟ್ನ ಹುಟ್ಟುಹಬ್ಬವೂ ಇರುವುದರಿಂದ ನಗರದ ಎಲ್ಲಾ ಪ್ರಮುಖ ಮುಖಂಡರು, ಪ್ರಖ್ಯಾತ ವ್ಯಕ್ತಿಗಳೆಲ್ಲರನ್ನೂ ಸಂಜೆ ಅದ್ದೂರಿ ರಸದೌತಣಕ್ಕೆ ಆಗಮಿಸಿರುತ್ತಾರೆ. ಈ ಔತಣಕೂಟದಲ್ಲಿ ಜನನಿ ಕುಟುಂಬ ಮತ್ತು ನೀಲಿ ಕುಟುಂಬವೂ ಭಾಗವಹಿಸುತ್ತದೆ.

Ugadi special programme in udaya tv

ಎಲ್ಲಾ ಸಂಭ್ರಮದ ಆಚರಣೆಯ ನಡುವೆ ನೀಲಿ ವಿರಾಟ್ನ ಪ್ರೀತಿ ಬಯಸಿದರೆ ಅವನ ಮನಸ್ಸು ಜನನಿಗೆ ಸೋಲುತ್ತದೆ. ಇದನ್ನು ತಿಳಿದ ನೀಲಿ ಜನನಿಯ ಮೇಲೆ ಕಿಡಿಕಾರಿ ಅವಳಿಗೆ ಶಿಕ್ಷಿಸುವ ಪಣ ತೊಡುತ್ತಾಳೆ. ಈ ನಿಟ್ಟಿನಲ್ಲಿ ಅವಳ ಯೋಜನೆ ಏನು ಮತ್ತು ಅದು ಫಲಿಸಿದಲ್ಲಿ ಜನನಿಗಾಗುವ ಅನಾಹುತವನ್ನು ವಿರಾಟ್ನಿಂದ ತಪ್ಪಿಸಲಾಗುತ್ತದೆಯೇ ಎಂಬ ಕುತೂಹಲ ಹೊತ್ತು ತರಲಿದೆ 'ನಂದಿನಿ' ಮಹಾಸಂಚಿಕೆ, ಇದೇ ಗುರುವಾರ ರಾತ್ರಿ 8:30ರಿಂದ 9:30ಕ್ಕೆ.

ಎಪ್ರಿಲ್ 5, ಶುಕ್ರವಾರದಂದು ಮನುಜನ ಸಹಜ ಮನಸುಗಳ ದ್ವಂದ್ವಗಳನ್ನೆತ್ತಿ ಹಿಡಿದ ʼಮಾನಸ ಸರೋವರʼ ಮಹಾಸಂಚಿಕೆ. ಚಿಂತನ್ನ ಪಡೆಯಲು ಎಲ್ಲಾ ಕೆಟ್ಟ ಮಾರ್ಗಗಳನ್ನೂ ಹಿಡಿದು ಕಡೆಗೂ ಸೋತು ಹತಾಶಳಾದ ಶರಧಿಗೆ, ತನ್ನ ಮನದ ಆಸೆಯನ್ನು ಕಡೆಗೂ ಪೂರೈಸಿಕೊಳ್ಳಲು ಕೈಜೋಡಿಸಿದ್ದು 'ನ್ಯೂರಲ್ ಬ್ರೇಕ್ಡೌನ್' ಎಂಬ ಮನೋರೋಗ. ತನ್ನ ಭ್ರಮೆಯಲ್ಲಿ ಚಿಂತನ್ನನ್ನು ಮದುವೆಯಾಗಿದ್ದೇನೆಂದು ಭ್ರಮಿಸಿ ತನಗೆ ತಾನೇ ತಾಳಿಕಟ್ಟಿಕೊಂಡು ಬಂದ ಈಕೆಯ ಮನಸ್ಥಿತಿಗೆ ತಕ್ಕಂತೆ ಮನೆಯವರಿಗೆಲ್ಲಾ ನಾಟಕವಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ.

Ugadi special programme in udaya tv

ಇಂತಹ ಸಮಯದಲ್ಲಿ ಯುಗಾದಿ ಹಬ್ಬ ಬಂದಾಗ ಚಿಂತನ್-ಸುನಿಧಿ ಜೊತೆಯಾಗಿ ಹಬ್ಬ ಆಚರಿಸಬೇಕೆಂಬ ವಾಸಂತಿಯ ಹಂಬಲಕ್ಕೆ ಶರಧಿ ಮುಳ್ಳಾಗಬಾರದೆಂದು ಎಲ್ಲರೂ ನಿರ್ಧರಿಸಿ ಅವಳ ಕಣ್ತಪ್ಪಿಸಿ ಹಬ್ಬ ಆಚರಿಸುವ ನಿರ್ಧಾರ ಕೈಗೊಳ್ಳುತ್ತಾರೆ. ಅಂತೆಯೇ ಶರಧಿಗೆ ತಿಳಿಯದಂತೆ ಚಿಂತನ್-ಸುನಿಧಿ ಜೊತೆಯಾಗಿ ಪೂಜೆ ಮಾಡುತ್ತಾರೆಯೇ? ಶರಧಿಗೆ ತಿಳಿದು ಬಂದಲ್ಲಿ ಆಗುವ ಅನಾಹುತಗಳೇನು ಎಂಬ ಕುತೂಹಲದೊಂದಿಗೆ ಇದೇ ಶುಕ್ರವಾರ ರಾತ್ರಿ 9:30 ರಿಂದ 10:30 ಕ್ಕೆ ತಪ್ಪದೇ ನೋಡಿ 'ಮಾನಸ ಸರೋವರ' ಮಹಾಸಂಚಿಕೆ. ಈ ಯುಗಾದಿ ಹಬ್ಬದಂದು ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ವಾರವಿಡೀ ಮನರಂಜನೆಯ ಸಂಭ್ರಮಾಚರಣೆ. ಸೋಮವಾರದಿಂದ ಶುಕ್ರವಾರದವರೆಗೆ ನೀವೂ ಪಾಲ್ಗೊಳ್ಳಿ.

More from Filmibeat

English summary
A special episodes will be telecasting on Udaya TV serials in Ugadi festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X