ಇಂದಿನಿಂದ ಕನ್ನಡದ ಮತ್ತೊಂದು ಅದ್ಧೂರಿ ಧಾರಾವಾಹಿ ಶುರು
'ಶನಿ ಹಾಗೂ 'ಮಹಾ ಕಾಳಿ' ನಂತರ ಕನ್ನಡದಲ್ಲಿ ಮತ್ತೊಂದು ಅದ್ದೂರಿ ಧಾರಾವಾಹಿ ನಿರ್ಮಾಣ ಆಗಿದೆ. 'ಉಘೇ ಉಘೇ ಮಾದೇಶ್ವರ' ಸೀರಿಯಲ್ ಇಂದಿನಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
ಮಲೆ ಮಾದೇಶ್ವರರು ಅಸಂಖ್ಯಾತ ಭಕ್ತರನ್ನು ಹೊಂದಿದ್ದಾರೆ. ಬಾಲ್ಯದಲ್ಲಿಯೇ ದೈವಿಕ ಶಕ್ತಿ ಪ್ರದರ್ಶಿಸಿ ಕಾಡು ಸೇರುವ ಮಾದೇಶ್ವರರು ಸಂನ್ಯಾಸ ದೀಕ್ಷೆ ಪಡೆದು ದುಷ್ಟರನ್ನು ಸಂಹರಿಸುತ್ತಾರೆ. ಕೊನೆಗೆ ಶ್ರವಣನನ್ನು ಸಂಹಾರ ಮಾಡಿ ಬೆಟ್ಟ ಸೇರಿತ್ತಾರೆ. ಅದು ಸ್ಥಳ ಇಂದಿಗೂ ಮಾದೇಶ್ವರನ ಬೆಟ್ಟ ಎಂದು ಖ್ಯಾತಿ ಗಳಿಸಿದೆ. ಈ ಮೂಲಕ ಇಂತಹ ಅದ್ಬುತ ಕಥೆ ಧಾರಾವಾಹಿಯನ್ನು ರೂಪದಲ್ಲಿ ತರಲಾಗುತ್ತಿದೆ.
'ಸೈನಿಕ', 'ಅಂಬರೀಶ' ಸೇರಿದಂತೆ ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಶ್ ಸುಖಧಾರೆ ಸಾರಥ್ಯದಲ್ಲಿ ಈ ಧಾರಾವಾಹಿ ಬರುತ್ತಿದೆ. ಈ ಕಥೆಯನ್ನು ಅವರೇ ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.

ಇಂದಿನಿಂದ ಈ ಧಾರಾವಾಹಿ ಒಂದು ಗಂಟೆಗಳ ಕಾಲ ಪ್ರಸಾರ ಆಗಲಿದೆ. ಶನಿವಾರ ಹಾಗೂ ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಈ ಸಂಚಿಕೆಗಳು ಪ್ರಸಾರ ಆಗಲಿದೆ.


Click it and Unblock the Notifications











