ಉಗ್ರಂ ಮಂಜು VS ಚೈತ್ರಾ ಕುಂದಾಪುರ, ಮೊದಲ ದಿನವೇ ಬಿಗ್ ಬಾಸ್ ಧಗಧಗ...!

By ಪ್ರಿಯಾ ದೊರೆ

ವೀಕ್ಷಕರು ನಿರೀಕ್ಷಿಸುತ್ತಿದ್ದ ಬಿಗ್ ಬಾಸ್ ಸೀಸನ್ 11 ನಿನ್ನೆಯಿಂದಲೇ ಪ್ರಾರಂಭವಾಗಿದೆ. ವೀಕ್ಷಕರೆಲ್ಲರೂ ಕಂಟೆಸ್ಟೆಂಟ್ ಗಳನ್ನು ಕಂಡು ಖುಷಿ ಪಟ್ಟಿದ್ದಾರೆ. ಈ ಸಲದ ಬಿಗ್ ಬಾಸ್ ಮಸ್ತಾಗಿರುತ್ತೆ ಎಂದು ಊಹಿಸಿದ್ದಾರೆ. ಅದರಲ್ಲೂ ಈ ಸಲ ಬಿಗೆ ಬಾಸ್ ಹೊಸ ಥೀಮ್ ಜೊತೆಗೆ ಬಂದಿದ್ದು, ಸ್ವರ್ಗ ನರಕ ಎಂಬ ಕಾನ್ಸೆಪ್ಟ್ ವಿಶೇಷವಾಗಿದೆ. ಸ್ವರ್ಗ-ನರಕ ಎಂಬ ಕಾನ್ಸೆಪ್ಟ್ ಕಂಟೆಸ್ಟೆಂಟ್ ಗಳಲ್ಲಿ ಇರಿಸು ಮುರಿಸನ್ನು ಉಂಟು ಮಾಡಿದೆ. 10 ಮಂದಿ ಸ್ವರ್ಗಕ್ಕೆ ತೆರಳಿದ್ದು, 7 ಸ್ಪರ್ಧಿಗಳು ನರಕದಲ್ಲಿ ಇರುವಂತಾಗಿದೆ.

ಮೊದಲ ದಿನವೇ ಕಿತ್ತಾಟ

ಇದರಿಂದಲೇ ಈಗಾಗಲೇ ಸ್ಫರ್ಧಿಗಳಲ್ಲಿ ಜಗಳ ಮಾಡಲು ಕಿಡಿ ಹಚ್ಚಿದಂತಿದೆ. ಬೂದಿ ಮುಚ್ಚಿದ ಕೆಂಡಂತಿರುವ ಈ ಕಾನ್ಸೆಪ್ಟ್ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಜಗಳ ಮಾಡುವಂತೆ ಮಾಡಿದೆ. ಶೋ ಆರಂಭವಾಗಿದ್ದೇ ತಡ, ಮನೆಯಲ್ಲಿ ಜಗಳವೂ ನಡೆದು ಹೋಗಿದೆ. ಮನೆಯಲ್ಲಿ ಮೊದಲ ದಿನವೇ ಕಂಟೆಸ್ಟೆಂಟ್ ಗಳು ಜಗಳ ಮಾಡುತ್ತಿದ್ದಾರೆ. ಪ್ರೋಮೋ ನೋಡಿದ ವೀಕ್ಷಕರು ಕುತೂಹಲಗೊಂಡಿದ್ದಾರೆ. ನರಕದಲ್ಲಿರುವವರು ಬಿಸಿನೀರನ್ನು ಕೇಳಿದ್ದು, ಸ್ವರ್ಗ ವಾಸಿಗಳು ರೂಲ್ಸ್ ಇಲ್ಲ, ನಾವು ಕೊಡುವಂತಿಲ್ಲ. ಬಿಗ್ ಬಾಸ್ ಅನ್ನು ಕೇಳಲಿ ಎಂದಿದ್ದಾರೆ. ಇದರಿಂದಲೇ ಜಗಳ ಆರಂಭವಾಗಿದೆ. ನರಕದಲ್ಲಿರುವವರು ಸ್ವರ್ಗ ವಾಸಿಗಳೊಂದಿಗೆ ವೈರತ್ವ ಬೆಳೆಸಲು ಕಾರಣವಾಗಿದೆ. ಮೊದಲ ದಿನದ ಮೊದಲ ಪ್ರೊಮೋದಲ್ಲಿ ಜಗಳ ನೋಡಿ ವೀಕ್ಷಕರು ಓಹೋ ಎಂದಿದ್ದಾರೆ.

Written Update on new Bigboss season 11 1st day promo

ರೂಲ್ಸ್ ಬ್ರೇಕ್ ಮಾಡಿದ್ರಾ ಚೈತ್ರಾ..?

ಇದರೊಂದಿಗೆ ನರಕ ವಾಸಿಗಳು ಸ್ವರ್ಗಕ್ಕೆ ಬಂದು ಮನೆ ಕೆಲಸ ಮಾಡುವ ಟಾಸ್ಕ್ ಅನ್ನು ಬಿಗ್ ಬಾಸ್ ಕೊಟ್ಟಿದ್ದಾರೆ. ಹಣ್ಣನ್ನು ವಾಶ್ ಮಾಡಿ ಕಟ್ ಮಾಡಿ ಕೊಡಿ ಎಂದು ಕೇಳಿದರೆ ಚೈತ್ರಾ ಅವರು ಹಣ್ಣನ್ನು ತೆಗೆದುಕೊಂಡು ತಿಂದಿದ್ದಲ್ಲದೇ, ಜಗಳ ಶುರು ಮಾಡಿದ್ದಾರೆ. ಬಿಗ್ ಬಾಸ್ ಚೈತ್ರಾ ಅವರು ಬ್ರೇಕ್ ಮಾಡಿದ ರೂಲ್ಸ್ ಗೆ ಯಾರಿಗೆ ಶಿಕ್ಷೆ ಕೊಡುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಪ್ರೊಮೋ ನೋಡಿಯೇ ಮೊದಲ ದಿನದ ಸಂಚಿಕೆಯನ್ನು ನೋಡಲೇ ಬೇಕು ಎಂದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.

ನರಕ, ಸ್ವರ್ಗದಲ್ಲಿ ಶುರುವಾಯ್ತು ಸ್ಫರ್ಧಿಗಳ ಆಟ

ಇನ್ನು ಬಿಗ್ ಬಾಸ್ ಸೀಸನ್ 11 ರಲ್ಲಿ ಒಟ್ಟು 17 ಮಂದಿ ಸ್ಫರ್ಧಿಗಳಿದ್ದಾರೆ. ಇದರಲ್ಲಿ ಸ್ವರ್ಗಕ್ಕೆ 10 ಜನ, ನರಕಕ್ಕೆ 7 ಜನ ಎಂಟ್ರಿಕೊಟ್ಟಿದ್ದಾರೆ. ನಟಿಯರಾದ ಭವ್ಯಗೌಡ, ಯಮುನಾ ಶ್ರೀನಿಧಿ, ಹಂಸಾ, ಗೌತಮಿ ಜಾಧವ್, ಐಶ್ವರ್ಯ ಮತ್ತು ಮಂಜು, ತ್ರಿವಿಕ್ರಮ್, ಧರ್ಮ, ಧನರಾಜ್, ಜಗದೀಶ್ ಸ್ವರ್ಗದಲ್ಲಿ ಹಾಯಾಗಿದ್ದಾರೆ. ನರಕದಲ್ಲಿ ಅನುಷಾ ರೇ, ಶಿಶಿರ್, ಮಾನಸಾ, ಗೋಲ್ಡ್ ಸುರೇಶ್, ಚೈತ್ರಾ, ಮೋಕ್ಷಿತಾ, ರಂಜಿತ್ ಆಗಮಿಸಿದ್ದಾರೆ. ಬಿಗ್ ಬಾಸ್ ಮನೆಯ ಕಾನ್ಸೆಪ್ಟ್ ಜೊತೆಗೆ ಸ್ಫರ್ಧಿಗಳು ಕೂಡ ಸ್ಟ್ರಾಂಗ್ ಆಗಿದ್ದು, ಈ ಸಲದ ಆಟ ಎಲ್ಲರಲ್ಲೂ ಕೂತೂಹಲವನ್ನು ಮೂಡಿಸಿದೆ. ಅಲ್ಲದೇ, ಸ್ಫರ್ಧಿಗಳನ್ನು ನೋಡಿಯೇ ವೀಕ್ಷಕರು ಯಾರು ಯಾರು ಯಾವ ಯಾವ ವರ್ಗಕ್ಕೆ ಸೇರುತ್ತಾರೆ ಎಂದು ಗೆಸ್ ಮಾಡಲು ಶುರು ಮಾಡಿದ್ದಾರೆ.

ನನಸಾಗುತ್ತಾ ಎಲ್ಲರ ಕನಸು..?

ಎಲ್ಲರೂ ಜೀವನದಲ್ಲಿ ತಮ್ಮದೇ ರೀತಿಯಲ್ಲಿ ಕಷ್ಟವನ್ನು ಅನುಭವಿಸಿ ಬಂದವರೇ. ಬಿಗ್ ಬಾಸ್ ಕಿರೀಟವನ್ನು ತಮ್ಮದಾಗಿಸಿಕೊಳ್ಳಬೇಕು, ಈ ವೇದಿಕೆ ಮೂಲಕ ಉತ್ತಮವಾದ ಭವಿಷ್ಯವನ್ನು ಹೊಂದಬೇಕು ಎಂಬ ಕನಸ್ಸನ್ನು ಹೊತ್ತು ಬಂದಿದ್ದಾರೆ. ಆದರೆ, ಬಿಗ್ ಬಾಸ್ ನ ಸ್ವರ್ಗ ನರಕದ ಆಟದಲ್ಲಿ ಯಾರು ಎಷ್ಟು ದಿನ ಆಡುತ್ತಾರೆ. ಯಾರು ವೀಕ್ಷಕರ ಮನಸನ್ನು ಗೆಲ್ಲುತ್ತಾರೆ. ಕಿರೀಟ ಯಾರ ಪಾಲಾಗುತ್ತೆ ಎಂಬುದು ಮಾತ್ರ ಕೊನೆಯವರೆಗೂ ಕುತೂಹಲವಾಗಿರುವುದಂತೂ ಸತ್ಯ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X