ಅಂತರ್ಜಾತಿ ಮದುವೆ, ಹೆತ್ತವರಿಂದಲೇ ಕಿರುಕುಳ, ಓಡಿ ಹೋದ ಪತ್ನಿ ; ಬದುಕು ಛಿದ್ರ - ಕೊನೆ ವಿಡಿಯೋ ಹಂಚಿಕೊಂಡ ಬಿಗ್‌ ಬಾಸ್ ಸ್ಫರ್ಧಿ

ಪ್ರೀತಿಗೆ ಎಲ್ಲರನ್ನು ಎಲ್ಲವನ್ನೂ ಜಯಿಸುವತಂಹ ನಿಗೂಢವಾದ ಶಕ್ತಿ ಇದೆ. ಪ್ರತಿಯೊಂದು ಧರ್ಮದಲ್ಲಿಯೂ ಪ್ರೀತಿಯ ಪರಿಕಲ್ಪನೆಗೆ ಅಪಾರವಾದ ಆದ್ಯತೆ ಇದೆ. ನಿಜವಾಗಿ ಪ್ರೀತಿಯ ಮೂಲಕ ಇಳಿದು ನೋಡಿದಾಗ, ಅದರ ಅರ್ಥ ಹುಡುಕುತ್ತಾ ಹೋದಾಗ ಪ್ರೀತಿ ಎನ್ನುವುದು ಮನಸಿಂದ ಬರಬೇಕೆ ಹೊರತು ಆ ಪ್ರೀತಿ ಒತ್ತಾಯಪೂರ್ವಕವಾಗಿರಬಾರದು ಎಂಬ ವಿಚಾರದ ಅರಿವು ಆಗುತ್ತೆ.

ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.

uk07-rider-s-final-message-anurag-dobhal-exposes-chilling-inter-caste-marriage-ordeal-fans-rally

ಮತ್ತೂ ಕೆಲ ಒಮ್ಮೆ ಅಂತರ್ಜಾತಿ ವಿವಾಹ ತಪ್ಪಲ್ಲ. ಇದರಿಂದಾಗಿ ಜಾತಿ-ಜಾತಿಗಳ ನಡುವಿನ ಉದ್ವಿಗ್ನತೆ ಶಮನವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಕೂಡ ಮನದ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ಮಾಡಲಾಗುತ್ತೆ. ಬದುಕೇ ಬೇಡ ಎಂಬ ಭಾವನೆ ಮನದಲ್ಲಿ ಬರುತ್ತೆ. ಉದಾಹರಣೆಗೆ ಡೋಬಾಲ್ ಅವರ ವೈಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಯೆಸ್. ಅನುರಾಗ್ ಧೋಬಾಲ್.. ಪ್ರಯಾಣ ಪ್ರಿಯ. ಯೂಟ್ಯೂಬರ್ ಮತ್ತು ಬೈಕ್ ರೈಡರ್. UK07 ರೈಡರ್ ಎಂದೇ ಉತ್ತರ ಭಾರತದಲ್ಲಿ ಜನಜನಿತರಾದವರು ಇವರು.

ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಹಿಂದಿಯ ''ಬಿಗ್ ಬಾಸ್'' ಸೀಸನ್ 17ರ ಮನೆಗೆ ಹೋಗಿದ್ದ ಅನುರಾಗ್ ಧೋಬಾಲ್‌ 2025ರ ಮೇನಲ್ಲಿ ರಿತಿಕಾ ಚೌಹಾಣ್ ಅವರ ಜೊತೆ ಮದುವೆಯಾಗಿದ್ದರು. ಮದುವೆ ಮುನ್ನ ಐದು ವರ್ಷಗಳಿಂದ ರಿತಿಕಾ ಅವರನ್ನು ಅನುರಾಗ್ ಪ್ರೀತಿ ಮಾಡುತ್ತಿದ್ದರು ಕೂಡ ಈ ವಿಷಯ ಇವರ ಹಿಂಬಾಲಕರಿಗೆ ಗೊತ್ತಾಗಿರಲಿಲ್ಲ. ಅಷ್ಟರ ಮಟ್ಟಿಗೆ ತಮ್ಮ ಸಂಬಂಧದ ಗೌಪ್ಯತೆಯನ್ನು ಅನುರಾಗ್ ಕಾಪಾಡಿಕೊಂಡಿದ್ದರು.

ಇನ್ನೂ ರಿತಿಕಾ ಕೂಡ ಸಾಮಾನ್ಯದವರಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡವರು ಇವರು. ಈ ಹಿನ್ನೆಲೆ ಕಳೆದ ಮಾರ್ಚ್‌ನಲ್ಲಿ ರಿತಿಕಾ ಜೊತೆ ಅನುರಾಗ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಾಗ ಹಲವರು ಅಚ್ಚರಿಗೀಡಾಗಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ಇವರ ನಿಶ್ಚಿತಾರ್ಥದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಕೂಡ ಆಗಿತ್ತು.

ಮದುವೆಯಾದ ನಾಲ್ಕೇ ತಿಂಗಳಿಗೆ ಇಬ್ಬರು ತಮ್ಮ ಅಭಿಮಾನಿಗಳಿಗೆ ತಾವು ತಂದೆ ತಾಯಿಯಾಗಿ ಬಡ್ತಿ ಪಡೆಯುತ್ತಿರುವುದಾಗಿ ಹೇಳಿದ್ದರು. ಖುಷಿ ಪಟ್ಟಿದ್ದರು. ಆದರೆ ಈಗ ಇವರ ಖುಷಿಗೆ ಇವರ ಮನೆಯವರೇ ಅಡ್ಡಗಾಲು ಹಾಕುತ್ತಿದ್ದಾರೆ. ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಅನುರಾಗ್ ತಮ್ಮ ಯೂಟ್ಯೂಬ್‌ನಲ್ಲಿ ''ಲಾಸ್ಟ್ ಮೆಸೇಜ್'' ಎಂದು ವಿಡಿಯೋ ಹಂಚಿಕೊಂಡಿದ್ದಾರೆ. 2 ಗಂಟೆ 18 ನಿಮಿಷ 15 ಸೆಕೆಂಡ್‌ ವರೆಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕಣ್ಣೀರು ಹಾಕಿದ್ದಾರೆ.

ಈ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಅನುರಾಗ್, ನನ್ನ ಮದುವೆಗೆ ಮನೆಯವರ ವಿರೋಧ ಇತ್ತು ಎಂದು ಹೇಳಿದ್ದಾರೆ. ನಮ್ಮದು ಅಂತರ್ಜಾತಿ ಮದುವೆಯಾದ ಕಾರಣ ಮದುವೆಗೆ ಆರು ದಿನ ಬಾಕಿ ಇದ್ದಾಗ ನನ್ನ ಹೆತ್ತವರು ಮದುವೆಗೆ ಬರಲು ನಿರಾಕರಿಸಿದರು ಎಂದು ಹೇಳಿರುವ ಅನುರಾಗ್, ಕುಲದ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆ ಸಂಬಂಧಿಕರ ಮುಂದೆ ಕೈ ಮುಗಿದು ಕ್ಷಮೆ ಕೇಳುವಂತೆ ನನ್ನ ಪೋಷಕರು ಮಾಡಿದರು, ಮಾನಸಿಕವಾಗಿ ನನಗೆ ತೀವೃ ಕಿರುಕುಳ ನೀಡಿದರು, ಮನೆಗೆ ಕೂಡ ಸೇರಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ನಾವು ಖುಷಿಯಾಗಿರಲ್ಲ, ನಿನ್ನನ್ನೂ ಖುಷಿಯಿಂದ ಇರಲು ಬಿಡುವುದಿಲ್ಲ ಎಂದು ನನಗೆ ನಿರಂತರವಾಗಿ ನನ್ನ ಹೆತ್ತವರೇ ಮಾನಸಿಕ ಹಿಂಸೆ ನೀಡುತ್ತಾ ಬಂದರು ಎಂದು ಹೇಳಿರುವ ಅನುರಾಗ್ ನನ್ನ ಸಾವಿಗೆ ನನ್ನ ಅಮ್ಮ, ಅಪ್ಪ, ಕಲಾಂ (ಸಹೋದರ) ಮತ್ತು ಶ್ರೇಯಾ ಅವರೇ ಕಾರಣ ಎಂದು ಹೇಳಿದ್ದಾರೆ.

ಇನ್ನೂ ಹೋರಾಡುವ ಶಕ್ತಿ ನನ್ನಲ್ಲಿ ಉಳಿದಿಲ್ಲ ಎಂದು ಹೇಳಿರುವ ಅನುರಾಗ್, ಈ ಮಾನಸಿಕ ಒತ್ತಡದಿಂದಾಗಿ ನಾನು ಆತ್ಮಹತ್ಯೆಗೂ ಕೂಡ ಪ್ರಯತ್ನ ಮಾಡಿದ್ದೇ ಎಂದು ಹೇಳಿದ್ದಾರೆ. ಸದ್ಯ ನಾನು ತೀವ್ರ ಖಿನ್ನತೆಯಲ್ಲಿದ್ದು, ಹಲವು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ಸಂಪೂರ್ಣವಾಗಿ ಕುಸಿದು ಹೋಗಿದ್ದೇನೆ ಎಂದು ಅವರು ನೋವು ಹಂಚಿಕೊಂಡಿದ್ದಾರೆ.

uk07-rider-s-final-message-anurag-dobhal-exposes-chilling-inter-caste-marriage-ordeal-fans-rally

ಮುಂದುವರೆದು ಈ ಕಡುಕಷ್ಟದ ಸಮಯದಲ್ಲಿ ಮನೆಯವರ ಪ್ರಭಾವಕ್ಕೊಳಗಾಗಿ, ಒತ್ತಡ ಮತ್ತು ಹಿಂಸೆಯನ್ನು ತಡೆಯಲಾಗದೇ ನನ್ನ ಪತ್ನಿ ರಿತಿಕಾ ಕೂಡ ನನ್ನಿಂದ ದೂರವಾಗಿದ್ದಾಳೆ, ಅವಳ ಪೋಷಕರ ಮನೆ ಸೇರಿದ್ದಾಳೆ ಎಂದು ಹೇಳಿರುವ ಅನುರಾಗ್ ನನ್ನ ಸಹೋದರ ಸೋಶಿಯಲ್ ಮೀಡಿಯಾದಲ್ಲಿ ಎಲ್ಲವನ್ನೂ ಬಯಲು ಮಾಡುವುದಾಗಿ ಬೆದರಿಸಿ, ತನ್ನ ಆಸ್ತಿ ಮತ್ತು ಸಾಕು ನಾಯಿಯನ್ನು ಕೂಡ ನನ್ನಿಂದ ಕಿತ್ತುಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಸದ್ಯ ಅನುರಾಗ್ ದೋಬಾಲ್ ಅವರ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಅಭಿಮಾನಿಗಳ ಆತಂಕವನ್ನು ಹೆಚ್ಚಿಸಿದೆ. "Save Anurag Dobhal" ಎಂಬ ಹ್ಯಾಶ್ ಟ್ಯಾಗ್‌ನಡಿ ಹಲವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್‌ಗಳನ್ನು ಮಾಡುತ್ತಿದ್ದು ಅನುರಾಗ್ ಅವರ ಸುರಕ್ಷತೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಅನುರಾಗ್ ಅವರನ್ನು ಉಳಿಸಿ, ಈ ಕಷ್ಟದ ಸಮಯದಲ್ಲಿ ಅವರ ಜೊತೆ ನೀವು ನಿಲ್ಲಿ ಎಂದು ಅನುರಾಗ್ ಅವರ ಪತ್ನಿ ರಿತಿಕಾ ಅವರಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಟ್ಯಾಗ್ ಮಾಡುವ ಮೂಲಕ ಅನುರಾಗ್ ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಲು ಹಲವರು ಒತ್ತಾಯಿಸುತ್ತಿದ್ದಾರೆ.

ಒಟ್ನಲ್ಲಿ ಅನುರಾಗ್ ಅವರ ಈ ಪ್ರಕರಣ ಸಮಾಜದಲ್ಲಿ ಇನ್ನೂ ಬೇರೂರಿರುವ ಅಂತರಜಾತಿ ವಿವಾಹದ ಬಗೆಗಿನ ಕೀಳರಿಮೆ ಮತ್ತು ಅದರಿಂದ ಉಂಟಾಗುವ ಮಾನಸಿಕ ಹಿಂಸೆಗೆ ಮತ್ತೊಮ್ಮೆ ಕೈಗನ್ನಡಿ ಹಿಡಿದಿದೆ. ಎಷ್ಟೇ ಫೇಮ್ ಮತ್ತು ಹಣವಿದ್ದರೂ, ಮನುಷ್ಯ ಒಂಟಿಯಾದಾಗ ಎಷ್ಟು ಅಸಹಾಯಕನಾಗುತ್ತಾನೆ ಎಂಬುದಕ್ಕೆ ಅನುರಾಗ್ ಅವರ ಈ ಸ್ಥಿತಿ ಮತ್ತೊಂದು ಉದಾಹರಣೆ.

More from Filmibeat

English summary
"They took everything from me." Bigg Boss 17 star Anurag Dobhal exposes a harrowing battle over his inter-caste marriage in a viral last vlog. Read the full story behind the torture allegations and why fans are rallying for his safety.
Read more about: ಟಿವಿ marriage bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X