ಡಿವೋರ್ಸ್‌ಗಿಂತ ಮೊದಲೇ ನನ್ನ ಗಂಡನ ಮತ್ತೊಂದು ಮದುವೆಯಾಗಿತ್ತು; ದುರಂತ ಅಂದರೆ ಅವಳು ನನ್ನ ಸ್ನೇಹಿತೆ-ಜಾಹ್ನವಿ ಕಣ್ಣೀರು

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬಂದಿದ್ದಾರೆ. ಪರಸ್ಪರ ಮುಖ ನೋಡಲು ಕೂಡ ಥೂ ಅಸಹ್ಯ ಎಂದುಕೊಂಡವರು ಇದ್ದಾರೆ.

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಬಹುತೇಕರ ಬದುಕಿನಲ್ಲಿ ಲವ್‌ಗಿಂತ ಹೆಚ್ಚು ಅಹಂಗೆ ಬೆಲೆ ಇರುತ್ತೆ. ದಾಂಪತ್ಯದಲ್ಲಿ ಜಗಳ..ಮನಸ್ತಾಪ.. ಸರ್ವೇ ಸಾಮಾನ್ಯವಾಗಿರುತ್ತೆ. ಎಷ್ಟೇ ಜತನದಿಂದ ಆ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಮಾಡಿದರು ಕೂಡ ಅದು ಸಾಧ್ಯವಾಗುವುದೇ ಇಲ್ಲ. ಬದಲಿಗೆ ಈ ಸಾಲಿನಲ್ಲಿರುವ ಕೆಲವರು ಒಂದಿಲ್ಲೊಂದು ರೀತಿಯಲ್ಲಿ ನರಕಯಾತನೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾರೆ. ಉದಾಹರಣೆಗೆ ''ಗಿಚ್ಚಿ ಗಿಲಿ ಗಿಲಿ ಜಾಹ್ನವಿ''.

Ultimate Betrayal BBK 12 s Jhanvi Reveals Ex-Husband Married Her Friend Before Divorce

ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ''ಅಧಿಪತ್ರ'' ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಆದರೆ.. ಆ ನಂತರ ಇವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ''ಯುವ ಸರ್ಕಾರ'' ಎಂಬ ಚಿತ್ರ ಒಂದರಲ್ಲಿ ಜಾಹ್ನವಿ ಅಭಿನಯಿಸಿದ್ದಾರೆ. ಈ ಚಿತ್ರ ಅದ್ಯಾವ ಕಾಲಕ್ಕೆ ಬಿಡುಗಡೆಯಾಗುತ್ತೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಜಾಹ್ನವಿ ಅವರ ವ್ಯೆಯಕ್ತಿಕ ಜೀವನದ ಕುರಿತು ಹಲವರಲ್ಲಿ ಮೊದಲಿಂದ ಕುತೂಹಲ ಇದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹತ್ತು ಹಲವು ಸಂದರ್ಶನಗಳಲ್ಲಿ ಜಾಹ್ನವಿ ಅವರಿಗೆ ಅವರ ಮದುವೆ- ವಿಚ್ಚೇದನದ ಕುರಿತು ಪ್ರಶ್ನೆ ಕೇಳಲಾಗಿದೆ. ಹೀಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಜಾಹ್ನವಿ ಕೂಡ ಚೂರು ಬೇಸರ ಮಾಡಿಕೊಳ್ಳದೇ ಉತ್ತರವನ್ನು ಕೊಟ್ಟಿದ್ದಾರೆ.

ಬಹುಶಃ ಇಂತಹ ಪ್ರಶ್ನೆಗಳಿಂದ ಮತ್ತೆ ಅದಕ್ಕೆ ನೀಡುವ ಉತ್ತರದಿಂದ ತಮಗೆ ಪ್ರಚಾರ ಸಿಗುತ್ತೆ ಎನ್ನುವ ಪರಿಜ್ಞಾನ, ಜಾಹ್ನವಿ ಅವರಿಗೆ ಪದೇ ಪದೇ ತಮ್ಮ ಸಾಂಸಾರಿಕ ವಿಚಾರವನ್ನು ಪ್ರಸ್ತಾಪ ಮಾಡುವಂತೆ ಮಾಡುತ್ತಿದೆಯಾ ಗೊತ್ತಿಲ್ಲ.?

Ultimate Betrayal BBK 12 s Jhanvi Reveals Ex-Husband Married Her Friend Before Divorce

ಆದರೆ.. ಸದ್ಯ ತಮ್ಮ ವಿಚ್ಚೇದನದ ವಿಷಯವನ್ನೇ ಜಾಹ್ನವಿ ''ಬಿಗ್ ಬಾಸ್‌'' ನಲ್ಲಿ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಜಾಹ್ನವಿ ಅವರ ನಡೆ ಮತ್ತು ನುಡಿ.

ಹೌದು, ಅಸಲಿಗೆ ''ಬಿಗ್ ಬಾಸ್'' ಮನೆಯನ್ನು ಪ್ರವೇಶ ಮಾಡಿದ ಮೊದಲ ದಿನದಂದೇ ಸುದೀಪ್ ಎದುರು ತಮ್ಮ ಮದುವೆ- ಡಿವೋರ್ಸ್ ಕುರಿತು ಜಾಹ್ನವಿ ಮಾತನಾಡಿದ್ದರು. ಆ ನಂತರ ''ಬಿಗ್ ಬಾಸ್'' ಮನೆಯ ಜಿಮ್ ಏರಿಯಾದಲ್ಲಿ ಮಲ್ಲಮ್ಮ ಜೊತೆ ಜಾಹ್ನವಿ ಮತ್ತು ಕಾಕ್ರೋಚ್‌ ಸುಧಿ ಎದುರು ಕೂಡ ತಮ್ಮ ನೋವನ್ನು ಜಾಹ್ನವಿ ಹಂಚಿಕೊಂಡಿದ್ದರು. ಈಗ ಮತ್ತೊಮ್ಮೆ ತಮ್ಮ ವಿಚ್ಚೇದನದ ಕುರಿತು ಜಾಹ್ನವಿ ಮಾತನಾಡಿದ್ದಾರೆ.

ಹಬ್ಬದ ಸಂಭ್ರಮದಲ್ಲಿ ಸಂಜೆ 04-5ಕ್ಕೆ ಈ ಕುರಿತು ಮನೆಯ ಸದಸ್ಯರ ಎದುರು ಮಾತನಾಡಿರುವ ಜಾಹ್ನವಿ, ಸುಮ್ಮನೆ ಏನು ಗೊತ್ತಾ..? ನಮ್ಮದು ಟ್ರೆಡಿಷನಲ್ ಫ್ಯಾಮಿಲಿ. ಹೀಗಾಗಿ ಹೊರಗಡೆ ಏನಾದರೂ ಅಂತಾರೆ ಅಂತ ಇಬ್ಬರನ್ನೂ ಒಂದು ಮಾಡಿ, ಒಂದು ಮಾಡಿ.. ಕಳಿಸೋರು ಎಂದು ಹೇಳಿದ್ದಾರೆ.

ಮುಂದುವರೆದು ಆದರೆ ಆ ನಂತರ ಅದೊಂದೇನೋ ಆಯ್ತು. ಆಯ್ತಾ.. ಆಗನಮ್ಮ ಮನೆಯಲ್ಲಿಯೇ ಅಯ್ಯೋ ಇಷ್ಟೆಲ್ಲಾಆದ ಮೇಲೆ ಬೇಡ ಅಂತ ಹೇಳಿದರು ಎಂದು ಹೇಳಿರುವ ಜಾಹ್ನವಿ ಇನ್ನೂ ಅಧಿಕೃತವಾಗಿ ಡಿವೋರ್ಸ್ ಆಗಿರಲಿಲ್ಲ ಆದರೆ ಎರಡು ಎರಡೂವರೆ ವರ್ಷ ದೂರನೇ ಇದ್ವಿ. ಏನಾದರೂ ಬದಲಾಗಬಹುದೇನೋ ಅಂತ ನಾವು ಕೂಡ ಕಾಯ್ತಿದ್ವಿ ಎಂದು ಹೇಳಿದ್ದಾರೆ.

ಆ ನಂತರ ಅಧಿಕೃತವಾಗಿ ವಿಚ್ಚೇದನ ಆಯ್ತು. ಆಗ ಡಿವೋರ್ಸ್ ಆಗುವ ಮುಂಚೆಯೇ ಅವರಿಗೆ ಮದುವೆ ಆಗಿ ಮಗು ಇದ್ದ ವಿಚಾರ ನನಗೆ ಗೊತ್ತಾಯ್ತು ಎಂದು ಹೇಳಿರುವ ಜಾಹ್ನವಿ ಅವರು ಮದುವೆಯಾಗಿದ್ದು ಬೇರೆ ಯಾರು ಅಲ್ಲ ಬದಲಿಗೆ ನನ್ನ ಫ್ರೆಂಡ್‌ನ್ನೇ ಎಂದು ಹೇಳಿದ್ದಾರೆ. ಎರಡು-ಎರಡೂವರೆ ವರ್ಷ ಡಿವೋರ್ಸ್ ಮುಂಚೆ ನಾವು ದೂರ ಇದ್ದಾಗ ಇದೆಲ್ಲವೂ ಆಗಿದೆ, ನನಗೆ ಕೇಳಿ ಶಾಕ್ ಆಯ್ತು ಎಂದು ಹೇಳಿರುವ ಜಾಹ್ನವಿ ಅವಳು ನನ್ನ ಫ್ರೆಂಡ್‌. ನನ್ನ ಜೊತೆಯಲ್ಲಿಯೇ ಇದ್ದವಳು. ಇವರಿಗೆ ಹೇಗೆ ಕನೆಕ್ಟ್ ಆದಳೋ? ಮದುವೆಯಾಗಿ, ಮಗುನೂ ಇದ್ಯಾ? ಇದೆಲ್ಲಾ ನೋಡಿದಾಗ ಒಂದು ರೀತಿ ಸಿನಿಮಾ ಸ್ಟೋರಿಯಂತೆ ನನಗೆ ಭಾಸವಾಯ್ತು ಎಂದು ಹೇಳಿದ್ದಾರೆ.

ಚೆನ್ನಾಗಿರಲಿ.. ಅದೆಲ್ಲಾ ಹಣೆಬರಹ ಅಷ್ಟೇ. ಇವರ ಜೊತೆ ಇಷ್ಟೇ ದಿನ ಸಂಸಾರ ಮಾಡಬೇಕು ಅಂತ ಇರುತ್ತೆ. ಎಷ್ಟೇ ಒಂದು ಮಾಡೋಕೆ ಪ್ರಯತ್ನ ಪಟ್ಟರೂ ಆಗಲ್ಲ.ಬೇಜಾರಾಗುತ್ತೆ ಎಂದು ಹೇಳಿರುವ ಜಾಹ್ನವಿ, ತಮ್ಮ ವ್ಯೆಯಕ್ತಿಕ ಜೀವನದ ಈ ವಿಚಾರ ಹಂಚಿಕೊಂಡು ಭಾವುಕರಾಗಿದ್ದಾರೆ. ಆ ನಂತರ ಕಣ್ಣೀರು ಹಾಕಿದ್ದಾರೆ. ಆಗ ಮನೆಯ ಇತರೆ ಸ್ಫರ್ಧಿಗಳು ಬಿಡಿ.. ಬಿಡಿ.. ಟಾಪಿಕ್ ಕ್ಲೋಸ್ ಮಾಡೋಣ ಎಂದು ಬೇರೆ ವಿಷಯದತ್ತ ಹೊರಳಿದ್ದಾರೆ.

More from Filmibeat

English summary
Bigg Boss Kannada 12's Jhanvi exposes a shocking secret: her ex-husband married a friend while they were still legally together. Get the full story.
Read more about: jhanvi divorce bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X