'ಕೆ.ಎ.ಎಸ್' ಉಮಾಕಾಂತ್ ಗೆ 'ಕೋಟ್ಯಧಿಪತಿ'ಯಲ್ಲಿ ಕೈಕೊಟ್ಟ ಪ್ರಶ್ನೆ ಇದೇ.?
Recommended Video

'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯ ಪ್ರತಿಯೊಂದು ಸ್ಪರ್ಧಿಗಳು ವಿಶೇಷವಾಗಿ ಆಟ ಆಡ್ತಿದ್ದಾರೆ. ಅದರಲ್ಲೂ, ಶಿಕ್ಷಕರು, ಐ.ಎ.ಎಸ್ ಅಧಿಕಾರಿಗಳು, ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವ್ಯಕ್ತಿಗಳು ಹಾಟ್ ಸೀಟ್ ನಲ್ಲಿ ಕೂತರೆ ಕುತೂಹಲ ಹೆಚ್ಚಾಗುತ್ತೆ.
ಆದ್ರೆ, ಇಂತಹ ವ್ಯಕ್ತಿಗಳನ್ನ ಕೂಡ ಒಂದು ಕ್ಷಣ ಅಸಹಾಯಕರನ್ನಾಗಿಸುವ ಪ್ರಶ್ನೆಗಳು ಕೋಟ್ಯಧಿಪತಿಯಲ್ಲಿ ಕೇಳಲಾಗುತ್ತಿದೆ. ಇದು ನೋಡುಗರಿಗೆ ಸುಲಭದ ಪ್ರಶ್ನೆ ಎನಿಸಿದರೂ, ಹಾಟ್ ಸೀಟ್ ನಲ್ಲಿರು ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಂಗಿರುತ್ತೆ.
ಇಂತಹದ್ದೇ ಅನುಭವ ಎರಡನೇ ವಾರದ ಎರಡನೇ ಸ್ಪರ್ಧಿ ಉಮಾಕಾಂತ್ ಅವರಿಗೆ ಆಗಿದೆ. ಇವರು ಮೂಲತಃ ಕೆ.ಎ.ಎಸ್ ಅಫೀಸರ್ ಆಗಿದ್ದರು. ಈಗ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಿದ್ರೆ, ಉಮಾಕಾಂತ್ ಗೆದ್ದ ಹಣವೆಷ್ಟು.? ಯಾವ ಪ್ರಶ್ನೆಯಿಂದ ಇವರು ಸೋತರು ಎಂದು ತಿಳಿಯಲು ಮುಂದೆ ಓದಿ....

3.20 ಲಕ್ಷದ ಪ್ರಶ್ನೆ.?
ಇವುಗಳಲ್ಲಿ ಯಾವ ಗ್ರಹವನ್ನ ಅನ್ವೇಷಿಸಲು ಮೇ 5, 2018 ರಂದು ನಾಸಾ ಇನ್ ಸೈಟ್ ಬಾಹ್ಯಾಕಾಶ ನೌಕೆಯನ್ನ ಉಡಾವಣೆ ಮಾಡಿತು.?
A ಬುಧ
B ಶುಕ್ರ
C ಮಂಗಳ
D ಶನಿ

ಗೇಮ್ ಕ್ವಿಟ್ ಮಾಡಿ ಉಮಾಕಾಂತ್
ಈ ಪ್ರಶ್ನೆಗೆ ಉತ್ತರ ಕೊಡದ ಉಮಾಕಾಂತ್ ಅವರು ಆಟವನ್ನ ಕ್ವಿಟ್ ಮಾಡಿದರು. ಮೂರು ಲೈಫ್ ಲೈನ್ ಬಳಸಿಕೊಂಡಿದ್ದ ಅವರು ಉತ್ತರ ನೀಡದೆ ಆಟವನ್ನ ಸ್ಥಗಿತಗೊಳಿಸಿದರು.
ಸರಿಯಾದ ಉತ್ತರ: C ಮಂಗಳ

1.80 ಲಕ್ಷ ಗೆದ್ದ ಶಿಕ್ಷಕರು
ಮೂರು ಲೈಫ್ ಲೈನ್ ಬಳಸಿಕೊಂಡು ಒಂಭತ್ತು ಪ್ರಶ್ನೆಗಳಿಗೆ ಉತ್ತರ ನೀಡಿದ ಉಮಾಕಾಂತ್ ಅವರು 1.80 ಲಕ್ಷ ಗೆದ್ದುಕೊಂಡು ಹೋದರು.

'ಫಾಸ್ಟೆಸ್ಟ ಫಿಂಗ್ ಫಸ್ಟ್'ನಲ್ಲಿ ಆಯ್ಕೆಯಾದ ಉಮಾಕಾಂತ್
ಮೊದಲಿನಿಂದ ಆರಂಭಿಸಿ, ಈ ಸ್ಮಾರಕಗಳನ್ನು ಅವುಗಳ ನಿರ್ಮಾಣ ಪೂರ್ಣವಾದ ವರ್ಷದ ಅಧಾರದ ಮೇಲೆ ಅನುಕ್ರಮವಾಗಿ ಜೋಡಿಸಿ.
A ತಾಜ್ ಮಹಲ್
B ಹಂಪಿ ಕಲ್ಲಿನ ರಥ
C ಸಂಸತ್ ಭವನ
D ವಿಧಾನಸೌಧ
ವೇಗವಾಗಿ ಮತ್ತು ಸರಿಯಾಗಿ ಉತ್ತರ ನೀಡಿದ ಉಮಾಕಾಂತ್ ಆಯ್ಕೆಯಾಗಿದ್ದರು.
B ಹಂಪಿ ಕಲ್ಲಿನ ರಥ, A ತಾಜ್ ಮಹಲ್, C ಸಂಸತ್ ಭವನ, D ವಿಧಾನಸೌಧ


Click it and Unblock the Notifications











