ಮತ್ತೆ 'ಪುಟ್ಮಲ್ಲಿ'ಯಾದ ನಟಿ ಉಮಾಶ್ರೀ
'ಪುಟ್ನಂಜ' ಸಿನಿಮಾದ 'ಪುಟ್ಮಲ್ಲಿ ಪಾತ್ರ ಯಾರೂ ಮರೆಯಲು ಸಾಧ್ಯವಿಲ್ಲ. ಈ ಪಾತ್ರ ಉಮಾಶ್ರೀ ವೃತ್ತಿ ಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದು. ಇದೀಗ ಉಮಾಶ್ರೀ ಮತ್ತೆ 'ಪುಟ್ಮಲ್ಲಿ'ಯಾಗತ್ತಿದೆ.
ಉಮಾಶ್ರೀ 'ಪುಟ್ಮಲ್ಲಿ' ಆಗುತ್ತಿದ್ದಾರೆ ಎಂದ ತಕ್ಷಣ ಮತ್ತೆ ಸಿನಿಮಾ ಮಾಡುತ್ತಿದ್ದಾರೆಯೇ ಎನ್ನುವ ಕುತೂಹಲ ಮೂಡುತ್ತದೆ. ಆದರೆ, ಉಮಾಶ್ರೀ ಈಗ 'ಪುಟ್ಮಲ್ಲಿ' ಆಗಿರುವುದು ಕಿರುತೆರೆಗಾಗಿ. ರಾಜಕೀಯದ ಕೆಲಸಗಳ ನಡುವೆ ನಟನೆ ಕಡಿಮೆ ಮಾಡಿದ್ದ ಉಮಾಶ್ರೀ ಇದೀಗ ಮತ್ತೆ ಕಿರುತೆರೆ ಬಂದಿದ್ದಾರೆ.
ಸ್ಟಾರ್ ಸುವರ್ಣಯಲ್ಲಿ 'ಆರತಿಗೊಬ್ಬ ಕೀರ್ತಿಗೊಬ್ಬ' ಎನ್ನುವ ಹೊಸ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಉಮಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕನ ತಾಯಿ ಪಾತ್ರ ಅವರದ್ದಾಗಿದೆ. ಮೊದಲು ಈ ಪ್ರಾಜೆಕ್ಟ್ ಒಪ್ಪಿಕೊಳ್ಳಲು ಹಿಂದೇಟು ಹಾಕಿದ್ದ ಉಮಾಶ್ರೀ ಕಥೆ ಇಷ್ಟ ಆಗಿ ಒಪ್ಪಿಕೊಂಡರಂತೆ.

ಪರಿಣಿಕ ಪ್ರೊಡಕ್ಷನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. 'ಅಗ್ನಿಸಾಕ್ಷಿ' ಖ್ಯಾತಿಯ ಮೈಸೂರು ಮಂಜು ಸೀರಿಯಲ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ, ಮೇಘನಾ ಶೆಣೈ, ಧನ್ಯಾ ನಟಿಸುತ್ತಿದ್ದಾರೆ. ಡಿಸೆಂಬರ್ 23 ರಿಂದ ಈ ಹೊಸ ಧಾರಾವಾಹಿ ಪ್ರಸಾರ ಆಗಲಿದೆ.
ಅಂದಹಾಗೆ, ಈ ಹಿಂದೆ 'ಮುಸ್ಸಂಜೆ', 'ಕಿಚ್ಚು', 'ಅಮ್ಮನಿನಾಗಿ' ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದು, ಇದೀಗ ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಮತ್ತೆ ಉಮಾಶ್ರೀ ಅಭಿಮಾನಿಗಳ ಅವರ ನಟನೆಯನ್ನು ನೋಡಬಹುದಾಗಿದೆ.


Click it and Unblock the Notifications











