twitter
    For Quick Alerts
    ALLOW NOTIFICATIONS  
    For Daily Alerts

    ಉಪೇಂದ್ರ ಸಿಎಂ ಆದ್ರೆ ಮಾಡೋ ಮೊದಲ ಕೆಲಸ ಏನು ಗೊತ್ತಾ?

    By Bharath Kumar
    |

    Recommended Video

    ಉಪೇಂದ್ರ ಸಿಎಂ ಆದ್ರೆ ಮಾಡೋ ಮೊದಲ ಕೆಲಸ ಏನು ಗೊತ್ತಾ? | Filmibeat Kannada

    ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹೊಸ ರಾಜಕೀಯ ಪಕ್ಷದ ಮೂಲಕ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಬಲ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಯಾರಿ ಮಾಡುತ್ತಿರುವ ಉಪ್ಪಿ ಚೊಚ್ಚಲ ಬಾರಿಗೆ ವಿಧಾನ ಸೌಧ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದಾರೆ.

    ಈಗಾಗಲೇ ಉಪ್ಪಿ ಪಾರ್ಟಿಯ ಪ್ರಣಾಳಿಕೆ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದೆ. ಒಂದು ವೇಳೆ ಉಪೇಂದ್ರ ಗೆದ್ದು ಮುಖ್ಯಮಂತ್ರಿಯಾದ್ರೆ......? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ.

    ಈ ಪ್ರಶ್ನೆ ಸ್ವತಃ ಉಪೇಂದ್ರ ಅವರೇ ಉತ್ತರಿಸಿದ್ದಾರೆ. ಉಪೇಂದ್ರ ಏನಾದರೂ ಮುಖ್ಯಮಂತ್ರಿಯಾದರೇ, ಮೊದಲು ಮಾಡುವ ಕೆಲಸ ಏನು ಎಂದು ಬಹಿರಂಗಪಡಿಸಿದ್ದಾರೆ. ಏನದು? ಮುಂದೆ ಓದಿ.....

    ಉಪ್ಪಿಯ ಮೊದಲ ಕೆಲಸ

    ಉಪ್ಪಿಯ ಮೊದಲ ಕೆಲಸ

    ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉಪ್ಪಿ ಪಕ್ಷ ಬಹುಮತದಿಂದ ಗೆದ್ದು ಮುಖ್ಯಮಂತ್ರಿ ಆದರೇ, ಮೊದಲ ವಿಧಾನಸೌದಕ್ಕೆ ಬಾಗಿಲು ಹಾಕ್ತಾರಂತೆ. ಹೌದು, ಅಚ್ಚರಿಯಾದ್ರು ಈ ತ್ಯವನ್ನ ನಂಬಲೇಬೇಕು.

    ಯಾರಿ ನಂ.1 ಶೋನಲ್ಲಿ ಉಪ್ಪಿ

    ಯಾರಿ ನಂ.1 ಶೋನಲ್ಲಿ ಉಪ್ಪಿ

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಟಾಕ್ ಶೋ ಯಾರೀ ನಂ.1 ಕಾರ್ಯಕ್ರಮದಲ್ಲಿ ಉಪೇಂದ್ರ ಅತಿಥಿಯಾಗಿದ್ದರು. ಈ ವೇಳೆ ಶಿವಣ್ಣ ನೀವು ಮುಖ್ಯಮಂತ್ರಿಯಾದ್ರೆ ಮಾಡುವ ಮೊದಲ ಕೆಲಸವೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉಪ್ಪಿ ''ವಿಧಾನಸೌದಕ್ಕೆ ಬಾಗಿಲು ಹಾಕ್ತೀನಿ'' ಎಂದಿದ್ದಾರೆ.

    ಉಪ್ಪಿ ಹೊಸ ಚಿತ್ರದ ಟೈಟಲ್ ಏನು ಗೊತ್ತಾ?

    ಉಪ್ಪಿ ಹೊಸ ಚಿತ್ರದ ಟೈಟಲ್ ಏನು ಗೊತ್ತಾ?

    ಉಪ್ಪಿ ಹೊಸ ಸಿನಿಮಾದಲ್ಲಿ ಅಭಿನಯಿಸಿದ್ರೆ, ಆ ಚಿತ್ರದ ಟೈಟಲ್ ಗೆ ಯಾವ ಚಿಹ್ನೆ ಇಡುತ್ತೀರಾ ಎಂದು ಶಿವಣ್ಣ ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಪ್ಪಿ ''ಎರಡು ಬೆರಳಗಳನ್ನ ಮೇಲತ್ತಿ ರಾಜಕೀಯ ವ್ಯಕ್ತಿಗಳಂತೆ ಸಹ್ನೆ ಮಾಡಿ ತೋರಿಸಿದರು.

    ಫೆಬ್ರವರಿ 25 ರಿಂದ ಆರಂಭ

    ಫೆಬ್ರವರಿ 25 ರಿಂದ ಆರಂಭ

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾರಥ್ಯದಲ್ಲಿ ಆರಂಭವಾಗಲಿರುವ ಯಾರಿ ನಂ . 1 ಕಾರ್ಯಕ್ರಮ ಇದೇ ಫೆಬ್ರವರಿ 25 ರಿಂದ ಪ್ರತಿ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

    English summary
    Actor and politician Upendra has been the guest for the No. 1 Talk Show. programme hosted by hatrick hero Shivarajkumar.
    Tuesday, February 20, 2018, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X