For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟಲ್ಲಿ ಉಪೇಂದ್ರ

  By Rajendra
  |
  'ಕನ್ನಡದ ಕೋಟ್ಯಾಧಿಪತಿ' ಹಾಟ್ ಸೀಟಲ್ಲಿ ಈ ಬಾರಿ ರಿಯಲ್ ಸ್ಟಾರ್ ಉಪೇಂದ್ರ ಕೂರುತ್ತಿದ್ದಾರೆ. ಅದು ಎಷ್ಟು ಕೋಟಿ ಗೆಲ್ಲುತ್ತಾರೋ ಏನೋ ಗೊತ್ತಿಲ್ಲ. ಏಪ್ರಿಲ್ 1ರಂದು ಕೋಟ್ಯಾಧಿಪತಿ ಹಾಟ್ ಸೀಟಲ್ಲಿ ಕೂರಲಿದ್ದು ಆ ಎಫಿಸೋಡ್ ಚಿತ್ರೀಕರಣ ಅಂದೇ ನಡೆಯಲಿದೆ.

  ಈಗಾಗಲೆ ಆಕ್ಷನ್ ಕ್ವೀನ್ ಮಾಲಾಶ್ರೀ ಹಾಗೂ ಪ್ರಭುದೇವ ಅವರೊಂದಿಗಿನ ಎಪಿಸೋಡ್ ಗಳು ಚಿತ್ರೀಕರಣವಾಗಿವೆ. ಪ್ರಭುದೇವ ಎಪಿಸೋಡ್ ಏಪ್ರಿಲ್ 3ರಂದು ಪ್ರಸಾರವಾಗಲಿದೆ. ಕೋಟ್ಯಾಧಿಪತಿ ಜೊತೆಗಿನ ಮಾಲಾಶ್ರೀ ಕಾರ್ಯಕ್ರಮ ಯುಗಾದಿ ಹಬ್ಬಕ್ಕೆ ಮೂಡಿಬರಲಿದೆ.

  ಈಟಿವಿ ಕನ್ನಡ ವಾಹಿನಿಯ ಬಿಗ್ ಹಾಗೂ ಸುವರ್ಣ ವಾಹಿನಿಯ ಕೋಟ್ಯಾಧಿಪತಿ ಕಾರ್ಯಕ್ರಮಗಳು ಒಂದೇ ಸಂಜೆ ಸ್ಲಾಟ್ ನಲ್ಲಿರುವ ಕಾರಣ 'ನಾನಾ ನೀನಾ' ಎಂಬಂತಾಗಿದೆ. ಅತ್ತ ಸುದೀಪ್ ಇತ್ತ ಪುನೀತ್ ಇಬ್ಬರ ನಡುವೆ ಕಿರುತೆರೆಯಲ್ಲೂ ಬಿಗ್ ಫೈಟ್ ಶುರುವಾಗಿದೆ.

  ಇನ್ನು ಉಪೇಂದ್ರ ಜೊತೆಗಿನ ಕೋಟ್ಯಾಧಿಪತಿ ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಉಪ್ಪಿಗೆ ಪುನೀತ್ ಏನು ಪ್ರಶ್ನೆ ಕೇಳ್ತಾರೆ ಎಷ್ಟಕ್ಕೆ ಉತ್ತರ ಕೊಡ್ತಾರೆ ಎಷ್ಟು ಗೆಲ್ತಾರೆ ಎಂಬ ಕುತೂಹಲವಿದ್ದೇ ಇದೆ. (ಏಜೆನ್ಸೀಸ್)

  English summary
  Real Star Upendra soon to appear on Puneet Rajkumar's Kannadada Kotyadhipati season 2. Kannadada Kotyadhipati is the biggest ever reality show on Kannada Television offering the biggest prize money of Rs.1,00,00,000/- (Rupees One Crore) in the Kannada GEC space.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X