'ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ

By Harshitha

ಎಲ್ಲರಂತೆ ದೊಡ್ಡ ದೊಡ್ಡ ಆಸೆಗಳನ್ನ ಹೊತ್ತು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ಉಪೇಂದ್ರ. ನಟನಾಗಿ, ಸಹ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ, ನಾಯಕ ನಟನಾಗಿ ಹಂತ ಹಂತವಾಗಿ ಬೆಳೆದ ಉಪೇಂದ್ರ ಈಗ 'ರಿಯಲ್ ಸ್ಟಾರ್' ಅಂತಲೇ ಜನಪ್ರಿಯ.

ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ಕಿಚ್ಚ ಸುದೀಪ್ ಗೆ ಉಪೇಂದ್ರ ಪರಿಚಯ. 23 ವರ್ಷಗಳ ಸ್ನೇಹ ಹೊಂದಿರುವ ಸುದೀಪ್ ಮತ್ತು ಉಪೇಂದ್ರ ನಿನ್ನೆ 'ಬಿಗ್ ಬಾಸ್' ವೇದಿಕೆಯಲ್ಲಿ ಒಂದಾದ್ರು. [ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?]

ಸುದೀಪ್ ಜೊತೆ ಹರಟುತ್ತಾ ಉಪೇಂದ್ರ ತಮ್ಮ ಮನದಾಳವನ್ನು ಬಿಚ್ಚಿಟ್ಟರು. 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಉಪೇಂದ್ರ ಏನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

'ನಾನು ಝೀರೋ'

'ನಾನು ಝೀರೋ'

''ನನಗೆ ಗೊತ್ತು ನಾನು ಏನಿಲ್ಲ ಅಂತ. ನೀವು ಹೇಳ್ತಿದ್ದೀರಾ ಏನೇನಿಲ್ಲಾ ಅಂತ. ನಿಜ ಹೇಳ್ಬೇಕಂದ್ರೆ ನಾನು ಯಾವಾಗ್ಲೂ ಝೀರೋ ಆಗೇ ಇರ್ತೀನಿ. ಅದರೊಳಗೆ ಭಗವಂತ ಕೊಡ್ತಾನೆ, ನಾನು ಏನೋ ಬರೀತೀನಿ ಅಷ್ಟೆ'' - ಉಪೇಂದ್ರ

ಟರ್ನಿಂಗ್ ಪಾಯಿಂಟ್

ಟರ್ನಿಂಗ್ ಪಾಯಿಂಟ್

''ಎಲ್ಲರ ತರಹನೇ ಚಿಕ್ಕವಯಸ್ಸಲ್ಲಿ ನನಗೆ ಮುಗ್ಧತೆ ಜಾಸ್ತಿ. ಸ್ಕೂಲ್ ಗೆ ಹೋಗೋದು, ಬರೋದು ಅಷ್ಟೆ. ಆದ್ರೆ, ಸಣ್ಣ ಚೇಂಜಸ್ ಆಗಿದ್ದು ಅಂದ್ರೆ ಮಕ್ಕಳ ಕೂಟದಲ್ಲಿ ಒಂದು ಡ್ರಾಮಾ ಕಾಂಪಿಟೇಷನ್ ಗೆ ನಾನು ಸೆಲೆಕ್ಟ್ ಆಗಿದ್ದೆ. 'ಕಾಂಪೌಂಡರ್ ಗುಂಡ' ಅಂತ ನಾಟಕ. ಮೊದಲ ಬಾರಿ ಸ್ಟೇಜ್ ಮೇಲೆ ಬಂದಿದ್ದು ನಾನು. ಎಲ್ಲರೂ ಚಪ್ಪಾಳೆ ತಟ್ಟಿದ್ರು. ಏನ್ ಮಾತಾಡಿದ್ರೂ ಖುಷಿ ಪಡೋರು. ಅಲ್ಲಿ ನನಗೆ ಅನ್ಸಿದ್ದು ನನ್ನ ಒಳಗೆ ಏನೋ ಇದೆ ಅಂತ. ಸ್ಟೇಜ್ ಮೇಲೆ ಹೀರೋ ಆಗ್ಬಿಟ್ಟೆ ಅವತ್ತು. ಆಗಿನ್ನೂ ಏಳನೇ ಕ್ಲಾಸ್'' - ಉಪೇಂದ್ರ

ಹೀರೋ ಆಗ್ಬೇಕು!

ಹೀರೋ ಆಗ್ಬೇಕು!

''ಹೀರೋ ಆಗಿ ಜನರಿಗೆ ಒಳ್ಳೆಯದು ಮಾಡಬೇಕು ಅನ್ಸಿತ್ತು. ಪಾಪ್ಯುಲರ್ ಆಗ್ಬೇಕಂದ್ರೆ ಹೀರೋ ಆಗ್ಬೇಕು. ಹೀರೋ ಆಗ್ಬೇಕಂದ್ರೆ ಸಿನಿಮಾಗೆ ಬರ್ಬೇಕು. ಅವಾಗ ನನ್ನ ಎಲ್ಲರೂ ನೋಡ್ತಾರೆ ಅಂತ ಅಂದುಕೊಂಡು ಸಿನಿಮಾ ಫೀಲ್ಡ್ ಗೆ ಬಂದೆ'' - ಉಪೇಂದ್ರ

ಹೀರೋ ಬೇಡ ಸಾರ್!

ಹೀರೋ ಬೇಡ ಸಾರ್!

''ಮೊದಲು ಕಾಶೀನಾಥ್ ಸರ್ ನಂಗೆ ಒಂದು ಪಾತ್ರ ಕೊಟ್ಟರು. ಅವಾಗ ಆ ಚಿತ್ರದಲ್ಲಿ ನನ್ನನ್ನ ನಾನು ನೋಡಿಕೊಂಡು ಹೀರೋ ಆಗೋದು ಬೇಡ ಅಂದುಕೊಂಡಿದ್ದೆ. ಯಾಕಂದ್ರೆ ನನ್ನ ಹಲ್ಲು ಹಾಗಿತ್ತು'' - ಉಪೇಂದ್ರ

ಹಲ್ಲಿಗೆ ಕ್ಲಿಪ್!

ಹಲ್ಲಿಗೆ ಕ್ಲಿಪ್!

''ನಂತರ ಆಕ್ಟಿಂಗ್ ಬಿಟ್ಬಿಟ್ಟು ಬರೆಯೋದರ ಮೇಲೆ ಗಮನ ಕೊಟ್ಟೆ. ಮಧ್ಯದಲ್ಲಿ ಫ್ರೆಂಡ್ ಒಬ್ಬ ಹೇಳ್ದ ಕ್ಲಿಪ್ ಹಾಕೋಳ್ಳೋ ಅಂತ. ಗೊತ್ತಿಲ್ದೆ ಕ್ಲಿಪ್ ಹಾಕೊಂಡೆ ಹಲ್ಲು ಒಳಗೆ ಹೋಯ್ತು'' - ಉಪೇಂದ್ರ

ಹೀರೋ ಆಗುವ ಅವಕಾಶ

ಹೀರೋ ಆಗುವ ಅವಕಾಶ

''ಓಂ' ಸಿನಿಮಾ ಆದ್ಮೇಲೆ ನನಗೆ ಹೀರೋ ಆಗುವುದಕ್ಕೆ ಒಂದು ಆಫರ್ ಬಂತು. ಅಲ್ಲಿಂದ ನನ್ನ ಒಳಗೆ ಇರುವ ಕಥೆಗಳು ಹೊರಗೆ ಬರುವುದಕ್ಕೆ ಶುರುವಾಯ್ತು'' - ಉಪೇಂದ್ರ

'ಎ' ಕಥೆ ಏನು?

'ಎ' ಕಥೆ ಏನು?

''ನಾನು ಹೊರಗಡೆ ನೋಡಿ ಸಿನಿಮಾ ಮಾಡಿಲ್ಲ. ನನ್ನ ಒಳಗಡೆ ನೋಡಿ ಸಿನಿಮಾ ಮಾಡಿದ್ದೀನಿ. 'ಎ' ಲವ್ ಸ್ಟೋರಿ ಮಾಡ್ಬೇಕು ಅಂತ ಮಾಡ್ದೆ. ಲವ್ ಅಂದ್ರೆ ಏನು ಅಂತಾನೇ ಗೊತ್ತಿಲ್ಲ ನಂಗೆ. ಜೀವನದ ಜಂಜಾಟದಲ್ಲಿ ಲವ್ ಇದ್ಯಾ, ಇಲ್ವಾ ಅಂತ ಅಂದುಕೊಂಡೇ ಕಥೆ ಆಯ್ತು ಅದು'' - ಉಪೇಂದ್ರ

'ಉಪೇಂದ್ರ' ಕಥೆ ಏನು?

'ಉಪೇಂದ್ರ' ಕಥೆ ಏನು?

''ಅದಾದ್ಮೇಲೆ ಸ್ಟಾರ್ ಡಮ್. ಎಲ್ಲರೂ ನನ್ನ ಗುರುತಿಸ್ತಾಯಿದ್ದಾರೆ ಅಂದಾಗ ಅಲ್ಲೂ ಹುಡುಕಾಟ ಶುರುವಾಯ್ತು. ಇದೆಲ್ಲಾ ಸತ್ಯನಾ ಅಂತ ಯೋಜನೆ ಮಾಡುವಾಗಲೇ ಮೂರು ಕ್ಯಾರೆಕ್ಟರ್ ಹೊಳೆದದ್ದು ಒಂದು ಜವಾಬ್ದಾರಿ, ಇನ್ನೊಂದು ನಮ್ಮ ಸಂತೋಷಕ್ಕೆ, ಮತ್ತೊಂದು... ಹೀಗೆ ಮೂರು ಕ್ಯಾರೆಕ್ಟರ್ ನ ಮೂರು ಹುಡುಗಿಯರಾಗಿ ಮಾಡ್ದೆ. ಕೊನೆಗೆ ಎಲ್ಲಾ ಬಿಟ್ಟು ಹೋಗ್ತಾನೆ. ಬಿಟ್ಟು ಹೋದಾಗ ಅವನಿಗೆ ಖುಷಿ ಆಗುತ್ತೆ ಅಂತ'' - ಉಪೇಂದ್ರ

ನಿಜ ಜೀವನದಲ್ಲಿ ಆಗ್ಲಿಲ್ಲ!

ನಿಜ ಜೀವನದಲ್ಲಿ ಆಗ್ಲಿಲ್ಲ!

''ಸಿನಿಮಾದಲ್ಲಿ ಬಿಟ್ಟು ಹೋದೆ. ರಿಯಲ್ ಲೈಫ್ ನಲ್ಲಿ ಬಿಟ್ಟು ಹೋಗೋಕೆ ಆಗ್ಲಿಲ್ಲ. ನಮ್ಮೊಳಗೆ ತೃಪ್ತಿ ಇಲ್ಲ ಅಂತ ಅನಿಸೋಕೆ ಶುರುವಾದಾಗ, 'ಸೂಪರ್' ಸಿನಿಮಾ ಮಾಡ್ದೆ. ಪ್ರೆಸೆಂಟ್ ನಲ್ಲಿ ಬದುಕಬೇಕು ಅಂತ 'ಉಪ್ಪಿ-2' ಸಿನಿಮಾ ಮಾಡ್ದೆ'' - ಉಪೇಂದ್ರ

ನಾನು ಸದಾ ಬ್ಲ್ಯಾಂಕ್

ನಾನು ಸದಾ ಬ್ಲ್ಯಾಂಕ್

''ನೀವೆಲ್ಲಾ ಅಂದುಕೊಂಡಿರಬಹುದು ನಾನು ತುಂಬಾ ಯೋಚನೆ ಮಾಡ್ತಿರ್ತೀನಿ ಅಂತ. ಆದ್ರೆ ನಾನು ಮೋಸ್ಟ್ ಆಫ್ ದಿ ಟೈಮ್ ಬ್ಲ್ಯಾಂಕ್ ಆಗಿರ್ತೀನಿ'' - ಉಪೇಂದ್ರ

ಹೆಂಡತಿಯ ಗಂಡ!

ಹೆಂಡತಿಯ ಗಂಡ!

''ಎಲ್ಲರೂ ಹೇಳ್ತಾರೆ 'ನಾನು' ತರಹ ಇರ್ಬೇಕು ಅಂತ. ಆದ್ರೆ ಅದು ಆಗಲ್ಲ. ಈಗ ನಾನು ನಾನಲ್ಲ. ನನ್ನ ಹೆಂಡತಿಯ ಗಂಡ. ಎರಡು ಮಕ್ಕಳ ತಂದೆ. 'ನಾನವನಲ್ಲ...ನಾನವನಲ್ಲ'' - ಉಪೇಂದ್ರ

ಲವ್ ಅಂದ್ರೆ ಏನು?

ಲವ್ ಅಂದ್ರೆ ಏನು?

'ಲವ್ ಅನ್ನೋದು ಇಲ್ಲ ಅಂತಿದ್ದೆ'. ಆದ್ರೆ ನಂತರ ಗೊತ್ತಾಗಿದ್ದು ಲವ್ ಅನ್ನೋದು ಈಸ್ಕೊಳ್ಳೋದು ಅಲ್ಲ ಕೊಡುವುದು.

ಪ್ರೀತಿ ಇದೆ!

ಪ್ರೀತಿ ಇದೆ!

''ಎ' ಸಿನಿಮಾದಲ್ಲಿ ಪ್ರೀತಿ ಇಲ್ಲ ಅಂತ ಹೇಳಿದ್ದೆ. ಕೊನೆಯಲ್ಲಿ ಪ್ರೀತಿ ಇದೆ ಅಂತ ತೋರಿಸಿದ್ದೆ. ಆದ್ರೆ, ಜನಕ್ಕೆ ಸ್ಟ್ರಾಂಗ್ ಆಗಿ ಹೋಗಿದ್ದು ಪ್ರೀತಿ ಇಲ್ಲ ಅಂತ. ಪ್ರೀತಿ ಇಲ್ಲ ಅಂತ ಹೇಳಿ ಲವ್ ಮ್ಯಾರೇಜ್ ಆದರು ಅಂತ ಎಲ್ಲರೂ ಮಾತನಾಡಿಕೊಂಡರು'' - ಉಪೇಂದ್ರ

More from Filmibeat

English summary
Kannada Actor Real Star Upendra spoke about his movies and thoughts during a chit-chat with Sudeep in Super Sunday with Sudeep (Bigg Boss Kannada-3) show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X