For Quick Alerts
  ALLOW NOTIFICATIONS  
  For Daily Alerts

  'ಒಗ್ಗರಣೆ ಡಬ್ಬಿ'ಯಲ್ಲಿ ಉಪ್ಪಿಯ 'ಉಪ್ಪಿಟ್ಟು' ವಿಶೇಷ

  By Harshitha
  |

  ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ 'ಒಗ್ಗರಣೆ ಡಬ್ಬಿ'. ಗೃಹಿಣಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮದಲ್ಲಿ ತಯಾರಿಸಲಾದ ಖಾದ್ಯಗಳ ಪುಸ್ತಕವೂ ಸೂಪರ್ ಹಿಟ್ ಆಗಿದೆ. ಈ ಯಶಸ್ವಿ ಪುಸ್ತಕದ ಮೂರನೇ ಸಂಚಿಕೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.

  ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ 'ಒಗ್ಗರಣೆ ಡಬ್ಬಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ' ಕಾರ್ಯಕ್ರಮದ ಚಿತ್ರೀಕರಣ ಸಂದರ್ಭದಲ್ಲಿ ಉಪೇಂದ್ರ ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು. [ಜೀ ಕನ್ನಡ 'ಒಗ್ಗರಣೆ ಡಬ್ಬಿ' ಘಮಲಿಗೆ 500ರ ಸಂಭ್ರಮ]

  ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂಚಿಕೆಯಲ್ಲಿ ಉಪೇಂದ್ರ ಅವರೇ ಸ್ವತಃ ಉಪ್ಪಿಟ್ಟು ತಯಾರಿಸಿದ್ದು ವಿಶೇಷ. ಆ ಬಳಿಕ ಮಾತನಾಡಿದ ಉಪೇಂದ್ರ 'ಅಡುಗೆ ಅನ್ನೋದು ಬ್ರಹ್ಮ ವಿದ್ಯೆ. ಅದೂ ಒಂದು ಕಲೆ. ಊಟವನ್ನು ನಾನು ಎಂಜಾಯ್ ಮಾಡ್ತೀನಿ. ಮಾಮೂಲಿಯಾಗಿ ಅಡುಗೆ ಹೇಗೆ ಇದ್ದರೂ ಉಪ್ಪಿನಕಾಯಿ, ಸಾಂಬಾರುಗಳನ್ನು ಸೇರಿಸಿ ನಾನೇ ಒಂದು ರುಚಿ ಕ್ರಿಯೇಟ್ ಮಾಡಿಕೊಳ್ತೀನಿ'' ಅಂತಾರೆ.

  ಈ ವಿಶೇಷ ಕಾರ್ಯಕ್ರಮ ವರಮಹಾಲಕ್ಷ್ಮಿ ಹಬ್ಬದ ಶುಕ್ರವಾರದಂದು ಮಧ್ಯಾಹ್ನ 1 ರಿಂದ 2 ಘಂಟೆಯ ವರೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Kannada Actor Upendra has prepared Uppittu in Zee Kannada's famous 'Oggarane Dabbi' program. This episode will telecast on Varamahalakshmi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X