'ಓಂ 2' ಸಿನಿಮಾಗೆ ದರ್ಶನ್, ಸುದೀಪ್, ಯಶ್ ರಲ್ಲಿ ಯಾರು ಹೀರೋ?

By Naveen

ಕನ್ನಡ ಚಿತ್ರರಂಗದ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಸಿನಿಮಾ 'ಓಂ'. 'ಓಂ' ಸಿನಿಮಾವನ್ನು ಇಂದು ಚಿತ್ರಮಂದಿರದಲ್ಲಿ ಹಾಕಿದರು ಓಡುತ್ತದೆ. ಅಷ್ಟರ ಮಟ್ಟಿಗೆ ಶಕ್ತಿ ಹೊಂದಿರುವ ಸಿನಿಮಾ ಅದು. 23 ವರ್ಷಗಳ ಹಿಂದಿನ 'ಓಂ' ಸಿನಿಮಾದ ಖದರ್ ಇಂದಿಗೂ ಕಡಿಮೆ ಆಗಿಲ್ಲ. ಅದರ ಜೊತೆಗೆ 'ಓಂ 2' ಸಿನಿಮಾ ಕೂಡ ಬರುತ್ತದೆಯಾ ಎನ್ನುವ ಸುದ್ದಿ ಹಾಗಾಗೆ ಹರಿದಾಡುತ್ತದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ನಟ ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿಯೇ ಉಪ್ಪಿ 'ಓಂ 2' ಸಿನಿಮಾದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ. ಅದರ ಜೊತೆಗೆ ಆ ಸಿನಿಮಾದ ನಾಯಕ ಯಾರು? ಶಿವಣ್ಣನ ಬದಲು ದರ್ಶನ್, ಸುದೀಪ್, ಯಶ್ ರಲ್ಲಿ ಯಾರಾದರು ಈ ಚಿತ್ರದ ನಾಯಕ ಆಗುತ್ತಾರ ಎನ್ನುವ ಪ್ರಶ್ನೆಗೆ ಸಹ ಉತ್ತರ ನೀಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿ ಮತ್ತು viu (ಮಿಯು) ಅಪ್ ನಲ್ಲಿ ಪ್ರಸಾರ ಆಗುತ್ತಿರುವ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯ ಅತಿಥಿಯಾಗಿ ಉಪೇಂದ್ರ ಮತ್ತು ಗುರುಕಿರಣ್ ಆಗಮಿಸಿದ್ದರು. ಈ ವೇಳೆ 'ಓಂ 2' ಸಿನಿಮಾದ ಬಗ್ಗೆ ಉಪ್ಪಿ ಮಾತನಾಡಿದ್ದಾರೆ. ಮುಂದೆ ಓದಿ...

ಫೇಸ್ ಬುಕ್ ಪೋಸ್ಟ್

ಫೇಸ್ ಬುಕ್ ಪೋಸ್ಟ್

ಕಾರ್ಯಕ್ರಮದ ಆಟದ ನಡುವೆ ಶಿವಣ್ಣ ಒಂದು ಚಾಲೆಂಜ್ ಹಾಕಿದರು. ಉಪೇಂದ್ರಗೆ 'ನೀವು ನಿಮ್ಮ ಫೇಸ್ ಬುಕ್ ಖಾತೆಯಲ್ಲಿ 'ಓಂ 2' ಎಂದು ನಮ್ಮಿಬ್ಬರ ಫೋಟೋವನ್ನು ಹಾಕಬೇಕು' ಎಂದರು. ಅದೇ ರೀತಿ ಉಪೇಂದ್ರ ಅವರ ಫೇಸ್ ಬುಕ್ ಖಾತೆಯಲ್ಲಿ ಶಿವಣ್ಣನ ಜೊತೆಗೆ ಕ್ಲಿಕ್ಕಿಸಿದ ಫೋಟೋ ಹಾಕಿ 'ಓಂ 2 ಕಮಿಂಗ್ ?' ಎಂದು ಬರೆದುಕೊಂಡಿದ್ದರು.

'ಓಂ 2' ಸಿನಿಮಾ ಬರುತ್ತೆ

'ಓಂ 2' ಸಿನಿಮಾ ಬರುತ್ತೆ

ಫೇಸ್ ಬುಕ್ ಪೋಸ್ಟ್ ನಲ್ಲಿಯೂ 'ಓಂ 2' ಜೊತೆಗೆ '?' ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದ ಉಪೇಂದ್ರ ತಲೆಗೆ ಹುಳ ಬಿಟ್ಟದರು. ಆದರೆ ಕಾರ್ಯಕ್ರಮ ಕೊನೆಯಲ್ಲಿ ಶಿವಣ್ಣ 'ಓಂ 2' ಬರುವ ಬಗ್ಗೆ ಸರಿಯಾಗಿ ಹೇಳಿದರು. ಉಪೇಂದ್ರ ಕೂಡ 'ಓಂ 2' ಮಾಡಲು ಓಕೆ ಎಂದು ಬಿಟ್ಟರು.

ಅನೇಕ ಬಾರಿ ಚರ್ಚೆ ಆಗಿದೆ

ಅನೇಕ ಬಾರಿ ಚರ್ಚೆ ಆಗಿದೆ

ಶಿವಣ್ಣ ಹೇಳುವ ಪ್ರಕಾರ ಉಪೇಂದ್ರ ಅವರ ಜೊತೆಗೆ 'ಓಂ 2' ಸಿನಿಮಾದ ಬಗ್ಗೆ ಈ ಹಿಂದೆಯೇ ಅನೇಕ ಬಾರಿ ಚರ್ಚೆ ಆಗಿದೆಯಂತೆ. ಉಪೇಂದ್ರ ಬಳಿ ಕೆಲವು ಕಥೆ ಇದ್ದು, ಮನಸು ಮಾಡಿದ್ದರೆ 'ಓಂ 2' ಸಿನಿಮಾ ಮಾಡುತ್ತೇವೆ ಎಂದು ಉಪ್ಪಿಗೆ ಶಿವಣ್ಣ ವಿಶ್ವಾಸ ತುಂಬಿದರು.

ದರ್ಶನ್, ಸುದೀಪ್, ಯಶ್

ದರ್ಶನ್, ಸುದೀಪ್, ಯಶ್

ಕಾರ್ಯಕ್ರಮ ರಾಪಿಡ್ ಫೈರ್ ಸುತ್ತಿನಲ್ಲಿಯೂ 'ಓಂ 2' ಬಗ್ಗೆ ಶಿವಣ್ಣ ಒಂದು ಪ್ರಶ್ನೆ ಹೇಳಿದರು. 'ದರ್ಶನ್, ಸುದೀಪ್, ಯಶ್ ರಲ್ಲಿ 'ಓಂ 2'ಗೆ ನಾಯಕನಾಗಿ ಯಾರನ್ನು ಆಯ್ಕೆ ಮಾಡುತ್ತೀರಾ?' ಎಂದು ಕೇಳಿದರು. ಅದಕ್ಕೆ ಉಪ್ಪಿ ''ಶಿವಣ್ಣ..ಶಿವಣ್ಣ..ಶಿವಣ್ಣ..'' ಎಂದು ''ಓಂ ಶಿವಣ್ಣನಿಗೆ ಮಾತ್ರ'' ಅಂತ ಹೇಳಿದರು.

ಲಾಂಗ್ ಹಿಡಿದ ಉಪ್ಪಿ

ಲಾಂಗ್ ಹಿಡಿದ ಉಪ್ಪಿ

ಸಿಕ್ಕಾಪಟ್ಟೆ ಮಜಾ ಇದ್ದ ಈ ಕಾರ್ಯಕ್ರಮದಲ್ಲಿ ಶಿವಣ್ಣನ ರೀತಿ ಉಪೇಂದ್ರ ಲಾಂಗ್ ಹಿಡಿದು ಪೋಸ್ ಕೊಟ್ಟರು. ಶಿವಣ್ಣ ಜೊತೆ ಸೇರಿ ಉಪೇಂದ್ರ ಕಾರ್ಯಕ್ರಮದ ತುಂಬ ಸಖತ್ ಏಂಜಾಯ್ ಮಾಡಿದರು.

More from Filmibeat

English summary
Real star Upendra spoke about 'Om 2' movie in Star Suvarna's new show 'No1 yari with Shivanna'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X