ಉಪ್ಪಿ ರಕ್ಷಿತಾ ಜೊತೆ ಡೇಟಿಂಗ್ ಮಾಡ್ತಾರೆ, ಪ್ರೇಮಾ ಅವರನ್ನು ಮದುವೆ ಆಗ್ತಾರೆ
ಉಪೇಂದ್ರ ಮತ್ತು ಗುರುಕಿರಣ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಸಿಕ್ಕಾಪಟ್ಟೆ ಸೂಪರ್ ಆಗಿತ್ತು. ಕಾರ್ಯಕ್ರಮದ ಪ್ರತಿ ಸುತ್ತಿನಲ್ಲಿಯೂ ಶಿವಣ್ಣ ಜೊತೆಗೆ ಸೇರಿ ಉಪೇಂದ್ರ ಮತ್ತು ಗುರುಕಿರಣ್ ಮಜಾ ಮಾಡಿದರು. ಅದರಲ್ಲಿಯೂ ಕಾಲು ಎಳೆಯುವ ಸುತ್ತು ರಾಪಿಡ್ ಫೈರ್ ಸುತ್ತು ಕಾರ್ಯಕ್ರಮ ಹೈಲೈಟ್ ಆಗಿತ್ತು.
ಈ ಸುತ್ತಿನಲ್ಲಿ ಉಪ್ಪಿಗೆ ಶಿವಣ್ಣ ಒಂದು ಪ್ರಶ್ನೆ ಕೇಳಿದರು. ರಮ್ಯಾ, ರಕ್ಷಿತಾ ಮತ್ತು ಪ್ರೇಮಾ ಇವರಲ್ಲಿ ನೀವು ಯಾರನ್ನು ಕೊಲ್ಲುತೀರಾ, ಯಾರ ಜೊತೆಗೆ ಡೇಟಿಂಗ್ ಮಾಡುತ್ತಿರಾ, ಯಾರನ್ನು ಮದುವೆ ಆಗುತ್ತಿರಾ ಎಂದು ಕೇಳಿದರು. ಆಗ ಉಪ್ಪಿ ಯಾವ ಹೆಸರು ತೆಗೆದುಕೊಳ್ಳುವುದು ಎಂದು ಯೋಚಿಸಿ ಸೇಫ್ ಆಗಿ ಉತ್ತರ ನೀಡಲು ಏನೇನೋ ಹೇಳಿ ತಮಾಷೆ ಮಾಡಿದರು. ಆದರೆ ಶಿವಣ್ಣ ಮತ್ತೆ ಪ್ರಶ್ನೆ ಗೆ ಉತ್ತರಿಸುವಂತೆ ಹೇಳಿದರು. ಪಕ್ಕದಲ್ಲಿ ಇದ್ದ ಗುರುಕಿರಣ್ ಕೂಡ ಸುಮ್ಮನೆ ಇರಲು ಬಿಡಲಿಲ್ಲ.

ಆಗ ಉಪೇಂದ್ರ 'ನಾನು ರಮ್ಯಾ ಅವರನ್ನು ಕೊಲ್ಲುತ್ತೇನೆ, ರಕ್ಷಿತಾ ಅವರ ಜೊತೆಗೆ ಡೇಟಿಂಗ್ ಮಾಡುತ್ತೇನೆ ಹಾಗೂ ಪ್ರೇಮಾ ಜೊತೆಗೆ ಮದುವೆ ಆಗುತ್ತೇನೆ' ಎಂದು ಉತ್ತರಿಸಿದರು. ಅಂದಹಾಗೆ, ಇದು ಜಸ್ಟ್ ತಮಾಷೆಯ ಉತ್ತರ ಅಷ್ಟೆ ಆಗಿತ್ತು. ಇನ್ನು ರಮ್ಯಾ ಜೊತೆಗೆ ಉಪ್ಪಿ 'ಕಠಾರಿವೀರ ಸುರಸುಂದರಾಂಗಿ', ರಕ್ಷಿತಾ ಜೊತೆಗೆ 'ಗೋಕರ್ಣ' ಹಾಗೂ ಪ್ರೇಮಾ ಜೊತೆಗೆ 'ಉಪೇಂದ್ರ' ಹಾಗೂ ಇತ್ತೀಚಿಗೆ ಬಂದ 'ಉಪೇಂದ್ರ ಮತ್ತ ಬಾ' ಸಿನಿಮಾದಲ್ಲಿ ನಟಿಸಿದ್ದಾರೆ. ಉಪ್ಪಿ ನಿರ್ದೇಶನ 'ಓಂ' ಸಿನಿಮಾದಲ್ಲಿ ಕೂಡ ಪ್ರೇಮಾ ಅವರೇ ನಾಯಕಿ ಆಗಿದ್ದರು.


Click it and Unblock the Notifications











