ಉಪೇಂದ್ರ ಪ್ರಕಾರ ಪುಟ್ಟಣ್ಣ ಕಣಗಾಲ್ ನಂಬರ್ 1 ಡೈರೆಕ್ಟರ್
ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಒಬ್ಬ ನಟನಾಗಿ ಎಷ್ಟು ಜನರು ಇಷ್ಟ ಪಡುತ್ತಾರೋ ಅದಕ್ಕೆ ಡಬಲ್ ಜನರು ಅವರನ್ನು ಒಬ್ಬ ನಿರ್ದೇಶಕನನ್ನಾಗಿ ಇಷ್ಟ ಪಡುತ್ತಾರೆ. ಉಪೇಂದ್ರ ಎಲ್ಲ ಇಂದಿನ ಎಲ್ಲ ಯುವ ನಿರ್ದೇಶಕರಿಗೆ ಮಾದರಿ ಆಗಿರುವ ಡೈರೆಕ್ಟರ್. ಆದರೆ ಇಂತಹ ವಿಭಿನ್ನ ನಿರ್ದೇಶಕನ ಪ್ರಕಾರ ಕನ್ನಡದಲ್ಲಿ ನಂಬರ್ ಡೈರೆಕ್ಟರ್ ಅಂದರೆ ಅದು ಪುಟ್ಟಣ್ಣ ಕಣಗಾಲ್ ಅವರು.
ಹೌದು, ನಟ ಉಪೇಂದ್ರ ಮತ್ತು ಗುರುಕಿರಣ್ ಸದ್ಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಶಿವರಾಜ್ ಕುಮಾರ್ ಪುಟ್ಟಣ್ಣ ಕಣಗಾಲ್
ಶಂಕರ್ ನಾಗ್, ಕಾಶೀನಾಥ್, ದೋರೆ ಭಗವಾನ್ ಎಂದು ನಾಲ್ಕು ನಿರ್ದೇಶಕರ ಹೆಸರನ್ನು ಹೇಳಿ ಇವರಿಗೆ ರಾಂಕ್ ನೀಡಿ ಎಂದು ಹೇಳಿದರು. ಆಗ ಉಪೇಂದ್ರ ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನು ಮೊದಲು ತೆಗೆದುಕೊಂಡು ಅವರು ನಂಬರ್ 1 ನಿರ್ದೇಶಕ ಎನ್ನುವುದನ್ನು ಮತ್ತೆ ಸಾಬೀತು ಮಾಡಿದರು.

ಉಳಿದಂತೆ, ಶಂಕರ್ ನಾಗ್ ಅವರನ್ನು ಎರಡನೇ ಹೆಸರನ್ನಾಗಿ, ತಮ್ಮ ಗುರು ಕಾಶೀನಾಥ್ ಅವರನ್ನು ಮೂರನೇ ಹೆಸರನ್ನಾಗಿ ಮತ್ತು ದೋರೆ ಭಗವಾನ್ ಅವರನ್ನು ನಾಲ್ಕನೇ ಹೆಸರನ್ನಾಗಿ ತೆಗೆದುಕೊಂಡರು. ಅಂದಹಾಗೆ, ಈ ನಾಲ್ಕು ಶ್ರೇಷ್ಠ ನಿರ್ದೇಶಕರ ಪೈಕಿ ಉಪೇಂದ್ರ ಕಾಶೀನಾಥ್ ಅವರ ಜೊತೆಗೆ ಕೆಲಸ ಮಾಡಿದ್ದಾರೆ. ಶಂಕರ್ ನಾಗ್ ಅವರ ಒಂದು ಸಿನಿಮಾಗೆ ಸಹ ಉಪೇಂದ್ರ ಅವರು ಸಂಭಾಷಣೆ ಬರೆದಿದ್ದರು.


Click it and Unblock the Notifications











