ಓಟಿಟಿಗೆ ಬರಲ್ವಾ ರಿಯಲ್ ಸ್ಟಾರ್ 'ಯುಐ'? ಅಭಿಮಾನಿಗಳಲ್ಲಿ ಗೊಂದಲ

ಉಪೇಂದ್ರ ನಿರ್ದೇಶಿಸಿ ನಟಿಸಿದ 'ಯುಐ' ಸಿನಿಮಾ ಕ್ರಿಸ್‌ಮಸ್ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡಿದ್ದು ಸುಳ್ಳಲ್ಲ. ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿ ಕೂಡ ಸಿನಿಮಾ ಒಳ್ಳೆ ಗಳಿಕೆ ಕಂಡಿತ್ತು. 2024ರಲ್ಲಿ ವಿಶ್ವದಾದ್ಯಂತ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎಂಬ ದಾಖಲೆ ತನ್ನದಾಗಿಸಿಕೊಂಡಿತ್ತು.

ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಪೈಪೋಟಿ ನಡುವೆಯೂ 'ಯುಐ' ದರ್ಬಾರ್ ಜೋರಾಗಿತ್ತು. 25 ದಿನಗಳ ಪೂರೈಸಿ ಸಿನಿಮಾ ಸಕ್ಸಸ್ ಕಂಡಿತ್ತು. ಬಹುತೇಕ ಚಿತ್ರಮಂದಿಗಳಲ್ಲಿ ಉಪ್ಪಿ ಸಿನಿಮಾ ಪ್ರದರ್ಶನ ಮುಕ್ತಾಯವಾಗಿದೆ. ಓಟಿಟಿಯಲ್ಲಿ ಯಾವಾಗ ಸಿನಿಮಾ ರಿಲೀಸ್ ಎಂದು ಸಾಕಷ್ಟು ಜನ ಕಾಯುತ್ತಿದ್ದಾರೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದ್ದರಿಂದ ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದಾರೆ.

Upendra starrer UI movie to make TV debut before streaming on OTT

ಕೆ. ಪಿ ಶ್ರೀಕಾಂತ್ ಹಾಗೂ ಜಿ. ಮನೋಹರ್ 'ಯುಐ' ಚಿತ್ರ ನಿರ್ಮಾಣ ಮಾಡಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದ ಸಾಧು ಕೋಕಿಲ, ಅಚ್ಯುತ್‌ ಕುಮಾರ್ ಹಾಗೂ ಆರ್ಮುಗ ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಸಿನಿಮಾದೊಳಗಿನ ಸಿನಿಮಾ ಕಥೆಯನ್ನು ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಹೇಳಿದ್ದಾರೆ. ತಾವೇ ನಿರ್ದೇಶಿಸಿದ 'ನಾಮ'(UI) ಚಿತ್ರ ಯಾವೆಲ್ಲಾ ರಾದ್ಧಾಂತ ಸೃಷ್ಟಿಸುತ್ತೆ, ಕೊನೆಗೆ ತಲೆಕೆಡಿಸಿಕೊಂಡ ಉಪೇಂದ್ರ ಯಾವ ನಿರ್ಧಾರಕ್ಕೆ ಬರ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ.

10 ವರ್ಷಗಳ ಬಳಿಕ ಉಪ್ಪಿ ನಿರ್ದೇಶನಕ್ಕೆ ಮರಳಿದ್ದರಿಂದ ಸಹಜವಾಗಿಯೇ ಸಿನಿಮಾ ಕುತೂಹಲ ಮೂಡಿಸಿತ್ತು. ಆದರೆ ಚಿತ್ರ ಬಿಡುಗಡೆ ಬಳಿಕ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಕೆಲವರಿಗೆ ಅದ್ಭುತ, ರಿಯಲ್ ಸ್ಟಾರ್ ಮಾರ್ಕ್ ಸಿನಿಮಾ ಎನಿಸಿದರೆ ಉಳಿದವರಿಗೆ ಬೇಸರ ಮೂಡಿಸಿತ್ತು. ಮನರಂಜನೆ ಇಲ್ಲದೇ ಉಪೇಂದ್ರ ಏನೇನೋ ಹೇಳೋಕೆ ಪ್ರಯತ್ನಿಸಿದ್ದಾರೆ ಎಂದುಬಿಟ್ಟರು. ಇನ್ನು 'ಯುಐ' ಬಂದ 5 ದಿನಕ್ಕೆ ಕಿಚ್ಚನ 'ಮ್ಯಾಕ್ಸ್' ಸಿನಿಮಾ ತೆರೆಗೆ ಬಂದಿತ್ತು. ಆಗ ಪ್ರೇಕ್ಷಕರ ಫೋಕಸ್ ಅತ್ತ ಕಡೆ ತಿರುಗಿತು. ಹಾಗಾಗಿ 'ಯುಐ' ಮ್ಯಾಜಿಕ್ ಅಷ್ಟಾಗಿ ನಡೆಯಲಿಲ್ಲ.

ಇನ್ನು 'ಯುಐ' ಸಿನಿಮಾ ಓಟಿಟಿ ರಿಲೀಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಸನ್‌ ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಳಿಕ ಚಿತ್ರತಂಡವೇ ಅದಕ್ಕೆ ಸ್ಪಷ್ಟನೆ ನೀಡಿತ್ತು. ಓಟಿಟಿ ರಿಲೀಸ್ ಬಗ್ಗೆ ನಾವೇ ಮಾಹಿತಿ ನೀಡುತ್ತೇವೆ ಎಂದಿದ್ದರು. ಆದರೆ ಈಗ ದಿಢೀರನೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಬಗ್ಗೆ ಪ್ರೋಮೊ ಬಂದಿದೆ.

'ಯುಐ' ಸಿನಿಮಾ ತೆರೆಕಂಡ 40 ದಿನಕ್ಕೆ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಹಾಗಿದ್ದರೆ ಓಟಿಟಿಗೆ ಕಥೆಯೇನು? ಎನ್ನುವ ಗೊಂದಲ ಶುರುವಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಓಟಿಟಿಯಲ್ಲಿ ರಿಲೀಸ್ ಆಗುತ್ತದೆ. ಆ ಬಳಿಕವೇ ಟಿವಿಯಲ್ಲಿ ಪ್ರೀಮಿಯರ್ ಆಗುತ್ತದೆ. ಆದರೆ 'ಯುಐ' ಸಿನಿಮಾ ವಿಚಾರದಲ್ಲಿ ಏನಾಗ್ತಿದೆ ಎಂದು ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.

ಇಷ್ಟೊತ್ತಿಗೆ ಸಿನಿಮಾ ಓಟಿಟಿಗೆ ಬರಬೇಕಿತ್ತು. ಅಥವಾ ಓಟಿಟಿಗೆ ಬಂದಮೇಲೆ ಟಿವಿಗೆ ಬರಬೇಕು ಅಲ್ಲವೇ? ಇದ್ಯಾಕೆ ಏಕಾಏಕಿ ಟಿವಿಯಲ್ಲಿ ಸಿನಿಮಾ ಪ್ರಸಾರ ಮಾಡುವ ಬಗ್ಗೆ ಪ್ರೋಮೊ ಬಂತು ಎಂದು ಹುಬ್ಬೇರಿಸಿದ್ದಾರೆ. ಈ ವಾರ ಓಟಿಟಿಗೆ ಸಿನಿಮಾ ಬರುತ್ತಾ? ಆ ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಾ? ಎಂದು ತಲೆಕೆಡಿಸಿಕೊಂಡಿದ್ದಾರೆ. ಓಟಿಟಿ ಸ್ಟ್ರೀಮಿಂಗ್ ಆಗುವುದಾದರೆ ಯಾವಾಗ? ಯಾವ ಪ್ಲಾಟ್‌ಫಾರ್ಮ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.

ಕೆಲವೊಮ್ಮೆ ಓಟಿಟಿ ಸಂಸ್ಥೆಗಳು ಚಿತ್ರದ ರೈಟ್ಸ್ ಕೊಂಡುಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಇರುತ್ತದೆ. ಅಂತಹ ಸಮಯದಲ್ಲಿ ನೇರವಾಗಿ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗುತ್ತವೆ. ಆದರೆ 'ಯುಐ' ಸಿನಿಮಾ ವಿಚಾರದಲ್ಲಿ ಏನಾಗುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. ಶೀಘ್ರದಲ್ಲೇ ಈ ಗೊಂದಲಕ್ಕೆ ತೆರೆಗೆ ಬೀಳಲಿದೆ.

More from Filmibeat

English summary
Upendra's UI Movie to premiere on TV first before OTT release;
Read more about: ui upendra sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X