Don't Miss!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಓಂ 2' ಬರುತ್ತಾ..? ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್!
Recommended Video
'ಓಂ' ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಸಿನಿಮಾ. ಉಪೇಂದ್ರ ಅವರ ತಲೆಗೆ, ಶಿವಣ್ಣನ ಕಲೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು 'ಓಂ' ಸಿನಿಮಾದಿಂದ. ಆದರೆ ಈಗ 'ಓಂ 2' ಬರುತ್ತಾ ಎಂಬ ಕುತೂಹಲ ಹುಟ್ಟಿದೆ.
'ಓಂ 2' ಸಿನಿಮಾದ ಬಗ್ಗೆ ಫೇಸ್ ಬುಕ್ ನಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ನಟ ಉಪೇಂದ್ರ. ಉಪೇಂದ್ರ ನಿನ್ನೆ ಶಿವಣ್ಣನೊಂದಿಗೆ ತೆಗೆದ ಒಂದು ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದರು. ಅದರ ಜೊತೆಗೆ 'Om 2 coming ?' ಎಂದು ಬರೆದು ಎಲ್ಲರ ತಲೆಗೆ ಹುಳ ಬಿಟ್ಟಿದ್ದರು.
ಹಾಗಾದ್ರೆ, ಉಪೇಂದ್ರ ಈಗ ಮತ್ತೆ ಶಿವರಾಜ್ ಕುಮಾರ್ ಜೊತೆ ಸೇರಿ 'ಓಂ 2' ಸಿನಿಮಾ ಮಾಡುತ್ತಾರ..? ಉತ್ತರ ಮುಂದಿದೆ ಓದಿ...
ಶಿವಣ್ಣನ ಶೋಗೆ ಉಪ್ಪಿ ಅತಿಥಿ
ನಟ ಶಿವರಾಜ್ ಕುಮಾರ್ ಸ್ಟಾರ್ ಸುವರ್ಣ ವಾಹಿನಿಗೆ ಒಂದು ಹೊಸ ಟಾಕ್ ಶೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ಈ ಕಾರ್ಯಕ್ರಮದ ಮೊದಲ ಅತಿಥಿ ಆಗಿ ನಟ ಉಪೇಂದ್ರ ಭಾಗಿಯಾಗಿದ್ದಾರೆ.
ನಂ 1 ಯಾರಿ ವಿತ್ ಶಿವಣ್ಣ
ನಂ 1 ಯಾರಿ ವಿತ್ ಶಿವಣ್ಣ ? ಸ್ಟಾರ್ ಸುವರ್ಣ ವಾಹಿನಿಯ ಹೊಸ ಟಾಕ್ ಶೋ. ತೆಲುಗಿನಲ್ಲಿ ಇದೇ ಕಾರ್ಯಕ್ರಮವನ್ನು ನಟ ರಾಣಾ ದಗ್ಗುಬಾಟಿ ನಡೆಸಿಕೊಂಡುತ್ತಿದ್ದಾರೆ. ಕನ್ನಡದ ಈ ಹೊಸ ಕಾರ್ಯಕ್ರಮದ ಮೂಲಕ ಮತ್ತೆ ಶಿವಣ್ಣ ಕಿರುತೆರೆಗೆ ಮರಳಿದ್ದಾರೆ.
'ಓಂ 2' ?
ಈ ಕಾರ್ಯಕ್ರಮದ ಶೂಟಿಂಗ್ ವೇಳೆ ಉಪೇಂದ್ರ, ಶಿವಣ್ಣನ ಜೊತೆಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ 'Om 2 coming ?' ಎಂದು ಉಪ್ಪಿ ಬರೆದಿದ್ದಾರೆ. ಇದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತೆ ಆಗಿದೆ.
'ಓಂ' ಚಿತ್ರದ ಆಡಿಯೋ ಬಿಡುಗಡೆಯ ಈ ಫೋಟೋ ಹಿಂದಿನ ಕಥೆ ಕೇಳಿ...
ಸಾಕಷ್ಟು ಜನರ ಕಮೆಂಟ್ಸ್
ಉಪೇಂದ್ರ ಅವರ ಈ ಫೋಟೋ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ''ಮತ್ತೆ ಶಿವಣ್ಣನಿಗೆ ಉಪೇಂದ್ರ ನಿರ್ದೇಶನ ಮಾಡಲಿ.. 'ಓಂ 2' ಸಿನಿಮಾ ಬರಲಿ'' ಎಂದು ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.
ಸ್ನೇಹಿತರ ಜೊತೆಯಲ್ಲಿ ನಿಮ್ಮ ಮನೆ ಅಂಗಳಕ್ಕೆ ಶಿವರಾಜ್ ಕುಮಾರ್
ಸಾಧ್ಯತೆ ತುಂಬ ಕಡಿಮೆ
'Om 2 coming ?' ಎಂದು ಬರೆದಿರುವ ಉಪ್ಪಿ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದ್ದಾರೆ. ಆದರೆ 'ಓಂ 2' ಸಿನಿಮಾ ಬರುವ ಸಾಧ್ಯತೆ ತುಂಬ ಕಡಿಮೆ ಇದೆ. ಯಾಕೆಂದರೆ ಉಪೇಂದ್ರ ಸದ್ಯ ಸಿನಿಮಾ ಬಿಟ್ಟು ಪ್ರಜಾಕೀಯದ ಕೆಲಸದಲ್ಲಿ ಬಿಜಿ ಇದ್ದಾರೆ. ಇತ್ತ ಶಿವಣ್ಣನ ಸಿನಿಮಾಗಳ ದೊಡ್ಡ ಲಿಸ್ಟ್ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ 'ಓಂ 2' ಎಂಬ ಹೆಸರಿಗೆ ಅಷ್ಟೇ ಒಳ್ಳೆಯ ಕಥೆ ಬೇಕಾಗಿದೆ.