'ಕಾಮಿಡಿ ಟಾಕೀಸ್' ಗ್ರಾಂಡ್ ಫಿನಾಲೆಯಲ್ಲಿ ಮುಖ್ಯ ಅತಿಥಿ ಆದ ಉಪೇಂದ್ರ
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ಈಗ ಅಂತಿಮ ಹಂತ ತಲುಪಿದೆ. ಕಾರ್ಯಕ್ರಮದ ಗ್ರಾಂಡ್ ಫಿನಾಲೆಯ ಚಿತ್ರೀಕರಣ ಈಗಾಗಲೇ ನೆಡೆದಿದ್ದು, ಅದರ ಪ್ರಸಾರ ಮಾತ್ರ ಬಾಕಿ ಇದೆ.
ನಟಿ ರಚಿತಾ ರಾಮ್ ಮತ್ತು ಸೃಜನ್ ಲೋಕೇಶ್ ಕಾಂಬಿನೇಶನ್ ನಲ್ಲಿ ಬಂದ 'ಕಾಮಿಡಿ ಟಾಕೀಸ್' ಕಾರ್ಯಕ್ರಮ ಪ್ರಾರಂಭದಲ್ಲಿ ಗಮನ ಸೆಳೆಯಿತಾದರೂ ಬರು ಬರುತ್ತಾ ಬೋರ್ ಹೊಡೆಸಿತು. ಕಾರ್ಯಕ್ರಮ ಕ್ಲಿಕ್ ಆಗುವ ಮುಂಚೆಯೇ ಮುಂಕಾಯ್ತು. ಅಂದಹಾಗೆ, ಈಗ ಈ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮದ ಗ್ರಾಂಡ್ ಫಿನಾಲೆಗೆ ನಟ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅತಿಥಿ ಆಗಿದ್ದಾರೆ.

ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ ಅವರ ಈ ಮಹಾ ಸಂಚಿಕೆಯ ಶೂಟಿಂಗ್ ನಿನ್ನೆ ನಡೆದಿದೆ. 'ಹೋಮ್ ಮಿನಿಸ್ಟರ್' ಸಿನಿಮಾದ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಿದ್ದ ಉಪ್ಪಿ ಅಲ್ಲಿಂದ ಬಂದ ಬಳಿಕ 'ಕಾಮಿಡಿ ಟಾಕೀಸ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು ಸದ್ಯದಲ್ಲಿಯೇ 'ಕಾಮಿಡಿ ಟಾಕೀಸ್' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಪ್ರಸಾರದ ದಿನಾಂಕ ತಿಳಿಯಲಿದೆ.


Click it and Unblock the Notifications