ಮುಂಬೈ ಸ್ಫೋಟ ಅಮೆರಿಕಾ ಚಾನಲ್‌ಗಳಲ್ಲಿ ಲೈವ್ ಕವರೇಜ್

ಎಂಎಸ್‌ಎನ್‌ಬಿಸಿ, ಸಿಎನ್‌ಎನ್, ಫಾಕ್ಸ್, ಎಬಿಸಿ ಇನ್ನಿತರೆ ಟಿವಿ ವಾಹಿನಿಗಳು ಮುಂಬೈ ಸ್ಫೋಟದ ದೃಶ್ಯಗಳನ್ನು ಅಮೆರಿಕಾದಲ್ಲೇ ನಡೆದಷ್ಟೆ ಪ್ರಾಧಾನ್ಯತೆ ನೀಡಿದರು. ಉಗ್ರರ ದುಷ್ಕೃತ್ಯಕ್ಕೆ ಈ ಸ್ಫೋಟಗಳು ಸ್ಪಷ್ಟ ನಿದರ್ಶನ ಎಂದು ವಾಹಿನಿಗಳು ಅಭಿಪ್ರಾಯಪಟ್ಟವು.
ಭಾರತದ ಸಿಎನ್‌ಎನ್ ಐಬಿಎನ್ ಸಹಾಯ ಪಡೆದು ಸಿಎನ್‌ಎನ್ ಹಾಗೂ ಎನ್‌ಡಿಟಿವಿ ಸಹಾಯ ಪಡೆದು ಎಂಎಸ್‌ಎನ್‌ಬಿಸಿ ಟಿವಿ ವಾಹಿನಿಗಳು ಮುಂಬೈ ಸ್ಫೋಟದ ದೃಶ್ಯಗಳನ್ನು ನೇರ ಪ್ರಸಾರ ಮಾಡಿದ್ದು ವಿಶೇಷ. ಫಾಕ್ಸ್ ನ್ಯೂಸ್ ಭಾರತದ ಸ್ಥಳೀಯ ವಾಹಿನಿಗಳ ಮೇಲೆ ಆಧಾರಪಟ್ಟಿತ್ತು.
2008ರ ಮುಂಬೈ ಸ್ಫೋಟಗಳನ್ನು ಬುಧವಾರದ ಮುಂಬೈ ಸ್ಫೋಟ ನೆನಪಿಸುವಂತಿತ್ತು ಎಂದು ಸಿಎನ್‌ಎನ್ ವಾಹಿನಿ ಅಭಿಪ್ರಾಯಪಟ್ಟಿತು.ಸ್ಟೇಟ್ ಸೆಕ್ರೆಟರಿ ಹಿಲರಿ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉಗ್ರವಾದಿಗಳು ಈ ದುಷ್ಕೃತ್ಯ ಎಸಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್)
More from Filmibeat
English summary
Major US news networks shifted to the live coverage of the serial bomb blasts in Mumbai on Wednesday, terming it as a terrorist strike days ahead of the visit of Secretary of State Hillary Clinton to India.


Click it and Unblock the Notifications











