For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ರವರ ಅಚ್ಚುಮೆಚ್ಚಿನ ನಿರ್ದೇಶಕ ಯಾರು ಗೊತ್ತಾ.?

  By Harshitha
  |

  ತಾಯಿ ಸೆಂಟಿಮೆಂಟ್, ರೌಡಿಸಂ, ಪ್ರೀತಿ... ಈ ಮೂರು ಅಂಶಗಳನ್ನು ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟವರು ನಿರ್ದೇಶಕ 'ಜೋಗಿ' ಪ್ರೇಮ್.

  ಗಾಂಧಿನಗರದಲ್ಲಿ ಹ್ಯಾಟ್ರಿಕ್ ಡೈರೆಕ್ಟರ್ ಅಂತಲೇ ಕರೆಯಿಸಿಕೊಳ್ಳುವ ಪ್ರೇಮ್ ರವರ ಅಚ್ಚುಮೆಚ್ಚಿನ ನಿರ್ದೇಶಕ ಯಾರಿರಬಹುದು ಹೇಳಿ.? 'ಜೋಗಿ' ಪ್ರೇಮ್ ರವರ ಫೇವರಿಟ್ ಡೈರೆಕ್ಟರ್ ಬೇರೆ ಯಾರೂ ಅಲ್ಲ, ಕ್ರೇಜಿ ಸ್ಟಾರ್ ವಿ.ರವಿಚಂದ್ರನ್.!

  ಹೌದು, ಹಾಗಂತ ಸ್ವತಃ ಪ್ರೇಮ್ ಹೇಳಿಕೊಂಡಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

  ಕ್ರೇಜಿಸ್ಟಾರ್ ಅವರ 'RP' ಚಿತ್ರದ ಡೈಲಾಗ್ ಗಳ ಹವಾ ನೋಡ್ರಪ್ಪಾಕ್ರೇಜಿಸ್ಟಾರ್ ಅವರ 'RP' ಚಿತ್ರದ ಡೈಲಾಗ್ ಗಳ ಹವಾ ನೋಡ್ರಪ್ಪಾ

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಅಚ್ಚುಮೆಚ್ಚಿನ ನಿರ್ದೇಶಕ ರವಿಚಂದ್ರನ್ ಅಂತ ಪ್ರೇಮ್ ಹೇಳಿದರು.

  'ಪ್ರೇಮಲೋಕ' ಸೃಷ್ಟಿಸಿದ ದೇವರು... 'ರಣಧೀರ'... ಯಾರಿಗೂ 'ಅಂಜದ ಗಂಡು'... ಕರುನಾಡಿನ 'ಮಲ್ಲ'... ಸ್ಯಾಂಡಲ್ ವುಡ್ ನ 'ದಿ ರಿಯಲ್ ಶೋ ಮ್ಯಾನ್' ನಮ್ಮ ನಿಮ್ಮೆಲ್ಲರ ನೆಚ್ಚಿನ ರವಿಮಾಮ... ಕ್ರೇಜಿ ಸ್ಟಾರ್ ವಿ.ರವಿಚಂದ್ರನ್.

  ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ.! ಯಾಕೆ.?ಒಂದುವರೆ ವರ್ಷ ಪ್ರೇಮ್ ವಾಟ್ಸ್ ಆಪ್ ನಲ್ಲಿ ಇರಲಿಲ್ಲ.! ಯಾಕೆ.?

  ನಟನೆ ಜೊತೆಗೆ 'ಪ್ರೇಮಲೋಕ', 'ರಣಧೀರ', 'ಕಿಂದರಿ ಜೋಗಿ', 'ಶಾಂತಿ ಕ್ರಾಂತಿ', 'ಮನೆ ದೇವ್ರು', 'ಚಿನ್ನ', 'ಪುಟ್ನಂಜ', 'ಸಿಪಾಯಿ', 'ಚೆಲುವ', 'ಪ್ರೀತ್ಸೋದ್ ತಪ್ಪಾ', 'ಏಕಾಂಗಿ', 'ಮಲ್ಲ', 'ಹಠವಾದಿ' ಸೇರಿದಂತೆ ಹಲವು ಸಿನಿಮಾಗಳಿಗೆ ಅಕ್ಷನ್ ಕಟ್ ಹೇಳಿರುವ ರವಿಚಂದ್ರನ್, 'ಜೋಗಿ' ಪ್ರೇಮ್ ರವರಿಗೆ ಸ್ಫೂರ್ತಿ ಅಂತೆ.!

  English summary
  Kannada Director Jogi Prem revealed in 'No.1 Yari with Shivanna' program that V.Ravichandran is his Favorite Director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X