ಗಂಡನ ಅಕ್ರಮ ಸಂಬಂಧಕ್ಕೆ ಕಣ್ಣೀರಾದ ಬಿಗ್‌ಬಾಸ್ ಸ್ಪರ್ಧಿ, ಸಾಕ್ಷಿ ತೋರಿಸಿ ಬಿಕ್ಕಿ ಬಿಕ್ಕಿ ಅತ್ತ ಚೆಲುವೆ
ನಿಜಾ .. ಯಾರಿಗೆ ಎಲ್ಲಿ, ಹೇಗೆ ಅದೃಷ್ಟ ಒಲಿಯುತ್ತದೆ ಎಂಬುದನ್ನು ಯಾರಿಂದನೂ ಊಹಿಸಲು ಸಾಧ್ಯ ಇಲ್ಲ. ಆದರೆ.. ಬಣ್ಣದ ಈ ಪ್ರಪಂಚದಲ್ಲಿ ಒಮ್ಮೊಮ್ಮೆ ಸಿಕ್ಕ ಈ ದಿಢೀರ್ ಜನಪ್ರಿಯತೆ.. ಯಶಸ್ಸು.. ಹೊರ ಜಗತ್ತಿಗೆ ಅದ್ಭುತವೆನ್ನುವಂತೆ ಕಾಣಿಸುತ್ತೆ. ರಾತ್ರೋರಾತ್ರಿ ಲಕ್ಷಾಂತರ ಫಾಲೋವರ್ಸ್.. ಕೈತುಂಬಾ ಹಣ.. ಸ್ಟಾರ್ ಡಮ್ ಸಿಕ್ಕಾಗ ಅದೃಷ್ಟದ ಬಲದಿಂದ ಖ್ಯಾತಿಯ ಶಿಖರಕ್ಕೇರಿದವರಿಗೆ ತಮ್ಮ ಬದುಕು ಬದಲಾದಂತೆ ಭಾಸವಾಗುತ್ತದೆ.
ಮತ್ತೊಂದೆಡೆ ನೋಡುಗರ ವಲಯದಲ್ಲಿ ವ್ಹಾ ಎಂಥಾ ಲಕ್ ಗುರು ಎಂಬ ಉದ್ಘಾರವೂ ಕೇಳಿ ಬರುತ್ತೆ. ಆದರೆ, ವಾಸ್ತವದಲ್ಲಿ ಕಥೆ ಅಲ್ಲಿ ಬೇರೆಯದ್ದೇ ಇರುತ್ತೆ. ಯಾಕೆಂದರೆ ದಿಢೀರ ಆಗಿ ಬಂದ ಹಣ ಮತ್ತು ಖ್ಯಾತಿ ಹಲವು ಬಾರಿ ನೆಮ್ಮದಿಗೆ ಕೊಳ್ಳಿ ಇಡುತ್ತೆ. ಹಣ-ಕೀರ್ತಿ-ಯಶಸ್ಸು ಇದೆಲ್ಲರಿಂದ ಅಹಂಕಾರದ ಅಮಲು ನೆತ್ತಿಗೆರುತ್ತೆ. ದಶಕಗಳ ಕಾಲ ಬೆಸೆದಿದ್ದ ಸಂಬಂಧದ ಅಡಿಪಾಯ ಕ್ಷಣ ಮಾತ್ರದಲ್ಲಿ ಅಲುಗಾಡಲು ಶುರುವಾಗುತ್ತೆ. ಬಡತನದಲ್ಲಿ ಜೊತೆ ಇದ್ದವರಿಗೆ ಶ್ರೀಮಂತಿಕೆ ಬಂದ ನಂತರ ಹಳೆಯದೆಲ್ಲ ಮರೆತು ಹೋಗುತ್ತೆ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಹಣಕ್ಕೆ ಸಂಬಂಧಗಳನ್ನು ಮುರಿಯುವ ಶಕ್ತಿ ಇದೆ. ಹಣದ ಹಿಂದೆ ಓಡುವವರಲ್ಲಿ ಹಣ ಸಿಕ್ಕಾಗ ಹಿಂದೆ ಇದ್ದ ನಿಷ್ಠೆ ಮತ್ತು ಪ್ರಾಮಾಣಿಕತೆ ಮಾಯವಾಗುತ್ತೆ. ಸಂಬಂಧದಲ್ಲಿ ಸಮಾನತೆ ಹೋಗಿ ''ಅಧಿಕಾರ'' ಮತ್ತು ''ಹಣದ ಮದ'' ಮನೆ ಮಾಡಿದಾಗ, ಪ್ರೀತಿ ಎಂಬುದು ಕೇವಲ ಹೆಸರಿಗಷ್ಟೇ ಉಳಿಯುತ್ತದೆ. ಉದಾಹರಣೆಗೆ ಚಂದ್ರಿಕಾ ದೀಕ್ಷಿತ್ ಅವರ ವ್ಯೆಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.
ಹೌದು, ಚಂದ್ರಿಕಾ ದೀಕ್ಷಿತ್ ..ದೆಹಲಿಯ ವಡಾ ಪಾವ್ ಗರ್ಲ್ ಎಂದೇ ಜನಜನಿತರಾದವರು. ಹೆಚ್ಚೇನು ಇಲ್ಲ. ಎರಡು-ಮೂರು ವರ್ಷದ ಹಿಂದೆ ಬದುಕಿನ ಬಂಡಿಯನ್ನ ಎಳೆಯಲು ಇವರು ಹರಸಾಹಸ ಮಾಡುತ್ತಿದ್ದರು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ಹಲವು ವರ್ಷಗಳಿಂದ ವಡಾ-ಪಾವ್ ಮಾರುತ್ತಿದ್ದರು.
ಹೀಗೆ ಅದೊಂದು ದಿನ ಚಂದ್ರಿಕಾ ವಡಾ-ಪಾವ ಮಾರುತ್ತಿದ್ದಾಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇಲ್ಲಿಂದ ಚಂದ್ರಿಕಾ ದೀಕ್ಷಿತ್ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯ್ತು.ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು.
ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು. ಇಷ್ಟೇ ಅಲ್ಲ ಬೀದಿಯಲ್ಲಿದ್ದ ಚಂದ್ರಿಕಾ ಆ ನಂತರ ''ಬಿಗ್ ಬಾಸ್'' ಮನೆಗೆ ಕೂಡ ಹೋದರು. 2024ರ ''ಬಿಗ್ ಬಾಸ್'' ಓಟಿಟಿ ಸೀಸನ್ 03ರಲ್ಲಿ ಭಾಗಿಯಾದರು. ಆಲ್ಬಂ ಹಾಡುಗಳಿಗೆ ಹೆಜ್ಜೆಯನ್ನು ಕೂಡ ಹಾಕಿದರು.

ಆದರೆ.. ಅದ್ಯಾವಾಗ ಬೆಳಗಾಗುವುದರೊಳಗೆ ಚಂದ್ರಿಕಾ ಅವರ ವಡಾ ಪಾವ್ ಪ್ರಚಾರ ಗಗನಕ್ಕೆ ತಲುಪಿತ್ತೋ, ಅಂದಿನಿಂದಲೇ .. ಜನಪ್ರಿಯತೆ ಎಂಬ ಭ್ರಮೆಯಲ್ಲಿ ಚಂದ್ರಿಕಾ ಬದುಕಲು ಆರಂಭ ಮಾಡಿದ್ದರು. ಇಂಥಾ ಚಂದ್ರಿಕಾ ದೀಕ್ಷಿತ್ ಅವರ ದಾಂಪತ್ಯ ಕಲಹ ಇದೀಗ ಬೀದಿಗೆ ಬಿದ್ದಿದೆ.
ತಮ್ಮ ಸಾಂಸಾರಿಕ ಜೀವನದಲ್ಲಿ ಎದ್ದ ಬಿರುಗಾಳಿಯ ಕಥೆಯನ್ನು ಹಂಚಿಕೊಂಡಿರುವ ಚಂದ್ರಿಕಾ ದೀಕ್ಷಿತ್, ತಮ್ಮ ಪತಿ ಯುಗಮ್ ಗೆರಾ ಅವರ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದಾರೆ. ನನ್ನ ಪತಿಗೆ ಅನೈತಿಕ ಸಂಬಂಧ ಇದೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ನನ್ನ ಪತಿ ದೀರ್ಘ ಕಾಲದಿಂದ ಮಹಿಳೆಯೊಬ್ಬಳ ಜೊತೆ ಮಾತನಾಡುತ್ತಿದ್ದರು ಎಂದು ಹೇಳಿರುವ ಚಂದ್ರಿಕಾ, ನಾನು ಇಷ್ಟು ದಿನ ಮೌನವಾಗಿದ್ದುಕೊಂಡು ನನ್ನ ದಾಂಪತ್ಯ ಜೀವನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಿದ್ದಾರೆ. ಇನ್ನೂ ನನ್ನಿಂದ ಸಾಧ್ಯವಾಗುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ತಮ್ಮ ಪತಿಯ ಅಕ್ರಮ ಸಂಬಂಧಕ್ಕೆ ಸಾಕ್ಷಿಯನ್ನಾಗಿ ಕೆಲ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ನನ್ನ ಬಳಿಯೂ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.
ಮತ್ತೊಂದು ಕಡೆ ಚಂದ್ರಿಕಾ ದೀಕ್ಷಿತ್ ಅವರ ಪತಿ ಯುಗಮ್ ಗೆರಾ ಕೂಡ ತಮ್ಮ ಪ್ರತಿಕ್ರಿಯೆ ನೀಡಿದ್ದು ನಿಜಾ. ನನ್ನಿಂದ ತಪ್ಪಾಗಿದೆ, ಆದರೆ ಅದು ಅಷ್ಟೊಂದು ದೊಡ್ಡ ತಪ್ಪಲ್ಲ ಎಂದು ಹೇಳಿದ್ದಾರೆ. ನನ್ನ ಪತ್ನಿಗೆ ಸಂಬಂಧಿಸಿದಂತೆ ಕೆಲ ಮಹತ್ವದ ಸಾಕ್ಷಿಗಳು ನನ್ನ ಬಳಿಯೂ ಇವೆ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೇ ನಿನಗೆ ಸಿಕ್ಕ ಈ ಯಶಸ್ಸು ಮತ್ತು ಕೀರ್ತಿಯ ಹಿಂದೆ ನನ್ನ ಕೊಡುಗೆ ತುಂಬಾನೇ ದೊಡ್ಡದಿದೆ, ಅದನ್ನು ಮರೆಯಬೇಡ ಎಂದು ಕೂಡ ತಮ್ಮ ಪತ್ನಿಗೆ ಹೇಳಿದ್ದಾರೆ.ಸದ್ಯ ಚಂದ್ರಿಕಾ ದೀಕ್ಷಿತ್ ಮತ್ತು ಯುಗಮ್ ಗೆರಾ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಚರ್ಚೆಗೆ ನಾಂದಿ ಹಾಡಿವೆ.


Click it and Unblock the Notifications











