ನನ್ನ ಮಗನ ಉಜ್ವಲ ಭವಿಷ್ಯಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗ್ತೀನಿ
ಉಳ್ಳವರು, ಬಡವರು, ವಿದ್ಯಾವಂತರು, ಅವಿದ್ಯಾವಂತರು, ಯಾರೇ ಆಗಲಿ ತಮ್ಮ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ತಾವು ಅನುಭವಿಸಿದ ಕಷ್ಟ ಅವರು ಅನುಭವಿಸಬಾರದು ಎಂದು ಬಯಸುತ್ತಾರೆ. ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹಗಲಿರುಳೂ ಅವರ ಭವಿಷ್ಯವನ್ನೇ ಗಮನದಲ್ಲಿಟ್ಕೊಂಡು ಬೆವರು ಸುರಿಸುತ್ತಾರೆ.
ಆದರೆ, ಇಲ್ಲೊಬ್ಬರು ಇದಕ್ಕೆ ತದ್ವಿರುದ್ಧ. ತಮ್ಮ ಮಗನ ಭವಿಷ್ಯಕ್ಕೆ ಈ ಮಹಾತಾಯಿ ಕೆಲಸ ಮಾಡುವುದಾಗಿ ಹೇಳಿಲ್ಲ. ರಕ್ತ ಬಸಿದು ನನ್ನ ಮಗನ ಭವಿಷ್ಯ ರೂಪಿಸುತ್ತೇನೆ ಎಂದು ಕೂಡ ನುಡಿದಿಲ್ಲ. ಬದಲಿಗೆ ನನ್ನ ಮಗನ ಸಲುವಾಗಿ ನಾನು ಯಾರ ಜೊತೆಯಾದರು ಮಲಗಲು ಸಿದ್ಧ ಎಂದು ಹೇಳಿದ್ದಾರೆ. ಈ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ತಾಯಿ ಬೇರೆ ಯಾರು ಅಲ್ಲ. ಬದಲಿಗೆ ಚಂದ್ರಿಕಾ ದೀಕ್ಷಿತ್ ಎನ್ನುವುದೇ ಈ ಸೋಶಿಯಲ್ ಮೀಡಿಯಾ ಕಾಲದ ದುರಂತ.

ಹೌದು, ಚಂದ್ರಿಕಾ ದೀಕ್ಷಿತ್ ..ದೆಹಲಿಯ ''ವಡಾ ಪಾವ್ ಗರ್ಲ್'' ಎಂದೇ ಜನಜನಿತರಾದವರು. ಹೆಚ್ಚೇನು ಇಲ್ಲ. ಎರಡು-ಮೂರು ವರ್ಷದ ಹಿಂದೆ ಬದುಕಿನ ಬಂಡಿಯನ್ನ ಎಳೆಯಲು ಇವರು ಹರಸಾಹಸ ಮಾಡುತ್ತಿದ್ದರು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ಹಲವು ವರ್ಷಗಳಿಂದ ವಡಾ-ಪಾವ್ ಮಾರುತ್ತಿದ್ದರು.
ಹೀಗೆ ಅದೊಂದು ದಿನ ಚಂದ್ರಿಕಾ ವಡಾ-ಪಾವ ಮಾರುತ್ತಿದ್ದಾಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇಲ್ಲಿಂದ ಚಂದ್ರಿಕಾ ದೀಕ್ಷಿತ್ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯ್ತು.
ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು.
ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು. ಇಷ್ಟೇ ಅಲ್ಲ ಬೀದಿಯಲ್ಲಿದ್ದ ಚಂದ್ರಿಕಾ ಆ ನಂತರ ''ಬಿಗ್ ಬಾಸ್'' ಮನೆಗೆ ಕೂಡ ಹೋದರು. 2024ರ ''ಬಿಗ್ ಬಾಸ್'' ಓಟಿಟಿ ಸೀಸನ್ 03ರಲ್ಲಿ ಭಾಗಿಯಾದರು. ಆಲ್ಬಂ ಹಾಡುಗಳಿಗೆ ಹೆಜ್ಜೆಯನ್ನು ಕೂಡ ಹಾಕಿದರು

ಇಂಥಾ ಚಂದ್ರಿಕಾ ದೀಕ್ಷಿತ್ ಕಳೆದ ಕೆಲ ದಿನಗಳಿಂದ ವ್ಯೂವ್ಸ್ ಮತ್ತು ಲೈಕ್ಸ್‌ಗೋಸ್ಕರ ತಮ್ಮ ವ್ಯೆಯಕ್ತಿಕ ಬದುಕನ್ನು ಸಾರ್ವಜನಿಕವಾಗಿ ಪ್ರದರ್ಶನಕಿಟ್ಟಿದ್ದಾರೆ. ಹಲವರ ಪಾಲಿಗೆ ಮನರಂಜನೆಯ ಸರಕಾಗಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಪತಿ ಯುಗಮ್ ಗೆರಾ ಅವರ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿದ್ದ, ಚಂದ್ರಿಕಾ ಕೆಲವು ಮೆಸೇಜ್‌ಗಳ ಸ್ಕ್ರೀನ್ ಶಾಟ್‌ನ್ನು ಕೂಡ ಸಾಕ್ಷಿಯನ್ನಾಗಿ ತೋರಿಸಿದ್ದರು. ಎರಡು ತಿಂಗಳಿಂದ ನಾನು ನರಕ ಅನುಭವಿಸುತ್ತಿದ್ದೇನೆ ಎಂದು ಹೇಳಿ ಬಿಕ್ಕಿದ್ದರು. ಆ ನಂತರ @kon_mysteryman ಎಂಬ ಹ್ಯಾಂಡಲ್ ಹೊಂದಿರುವ ವ್ಯಕ್ತಿಯ ಜೊತೆ ಪ್ರೇಮ ಸಲ್ಲಾಪ ತಾವೇ ಖುದ್ದು ನಡೆಸಿದ್ದರು. ಐ ಲವ್ ಯೂ ಎಂದು ಹೇಳಿದ್ದರು. ವಿಡಿಯೋವನ್ನು ಹಂಚಿಕೊಂಡಿದ್ದರು.
ಹೀಗೆ ಈ ವರ್ಷದ ಆರಂಭದಿಂದಲೂ ಸದ್ದು ಮಾಡುತ್ತಾ, ತಮ್ಮ ವೈಯಕ್ತಿಕ ಜೀವನದಿಂದ ಸುದ್ದಿಯ ಕೇಂದ್ರಬಿಂದುವಾಗುತ್ರಾ ಬಂದ ಚಂದ್ರಿಕಾ ಈಗ ಇನ್ನೊಂದು ಹಜ್ಜೆ ಮುಂದೆ ಹೋಗಿದ್ದಾರೆ. ನನ್ನ ಮಗನ ಭವಿಷ್ಯಕ್ಕಾಗಿ ನಾನು ಯಾರ ಜೊತೆಯಾದರೂ ಮಲಗಲು ಸಿದ್ದ ಎಂದು ಘಂಟಾಘೋಷವಾಗಿ ಘೋಷಿಸಿದ್ದಾರೆ.
ಈ ಕುರಿತು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಚಂದ್ರಿಕಾ,ನನ್ನ ಮಗನ ಭವಿಷ್ಯಕ್ಕಾಗಿ, ಅವನನ್ನು ಸಾಕಲು, ಹಣಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ಸಿದ್ಧ ಎಂದು ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಹಲವರು ಚಂದ್ರಿಕಾ ಅವರ ಈ ನುಡಿಯನ್ನು ಕೇಳಿ ಬೆಚ್ಚಿ ಬಿದ್ದಿದ್ದಾರೆ.
ಜೀವನೋಪಾಯಕ್ಕೆ ಹಲವಾರು ಕಾನೂನುಬದ್ಧ ಮತ್ತು ಗೌರವಯುತ ಮಾರ್ಗಗಳಿವೆ ಎಂದು ಹೇಳುತ್ತಿರುವ ಹಲವರು ಕೇವಲ ಸುದ್ದಿಯಲ್ಲಿರಲು, ವ್ಯೂವ್ಸ್ ಪಡೆಯಲು, ಕೆಲವರು ಬಾಯಿಗೆ ಬಂದಂತೆ ಮಾತನಾಡುವುದನ್ನೇ ಪ್ರವತ್ತಿಯನ್ನಾಗಿಸಿಕೊಂಡಿದ್ದಾರೆ. ಇದಕ್ಕೆ ನೀವೆ ಅತ್ಯುತ್ತಮ ಉದಾಹರಣೆ ಎಂದು ಕಿಡಿ ಕಾರುತ್ತಿದ್ದಾರೆ. ಈ ಜಗದಲ್ಲಿ ಕೋಟ್ಯಂತರ ತಾಯಂದಿರು ಎಷ್ಟೇ ಕಷ್ಟವಿದ್ದರೂ ಘನತೆಯಿಂದ ಬದುಕುತ್ತಿದ್ದಾರೆ, ಅಂತಹವರಿಗೆ ಈ ಚಂದ್ರಿಕಾ ದೀಕ್ಷಿತ್ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಚಂದ್ರಿಕಾ ಮಗ ಇನ್ನೂ ಓದುತ್ತಿರುವ ಚಿಕ್ಕ ಬಾಲಕ. ಅವನ ಮಾನಸಿಕ ಸ್ಥಿತಿಯ ಮೇಲೆ ಅವನ ತಾಯಿಯ ಈ ಮಾತುಗಳು ಎಷ್ಟು ಪರಿಣಾಮ ಬೀರಬಹುದು ಎನ್ನುವ ಆತಂಕವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದು, ದುಡಿದು ಕೂಡ ತಿನ್ನಬಹುದು ಎನ್ನುವುದನ್ನು ಒಂದು ಕಾಲದಲ್ಲಿ ದುಡಿಮೆಯೇ ದೇವರು ಎಂದು ನಂಬಿದ್ದ ಚಂದ್ರಿಕಾ ಮರೆತಿದ್ದು ದುರಂತ ಎನ್ನುವ ಅಭಿಪ್ರಾಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.


Click it and Unblock the Notifications











