ಗಂಡ ಜೊತೆಯಲ್ಲಿದ್ದರೂ ಪರ ಪುರುಷನ ಜೊತೆ ಬಿಗ್ ಬಾಸ್ ಸ್ಫರ್ಧಿಯ ಪ್ರೇಮ ಸಲ್ಲಾಪ ; ಕ್ಯಾಕರಿಸಿ ಉಗಿದ ಜನ

ಪ್ರೀತಿ ಅನ್ನೋ ಪದಕ್ಕೆ ಅರ್ಥ ಬದಲಾಗದೇ ಇದ್ರೂ, ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ಈಗ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಪ್ರೀತೀಲೂ ನಾನಾ ವೆರೈಟಿಗಳು ಬಂದಿವೆ. ಪಾರ್ಟ್ ಟೈಮ್ ಪ್ರೀತಿ.. ಫುಲ್ ಟೈಮ್ ಪ್ರೀತಿ.. ಟೈಮ್ ಟು ಟೈಮ್ ಪ್ರೀತಿ.. ಟೈಮ್ ಬೈ ಟೈಮ್ ಪ್ರೀತಿ.. ಅಂತೆಲ್ಲ ಹಲವು ಯೋಚನೆ ಮಾಡುತ್ತಾರೆ.ಇದರಿಂದ ಮದುವೆ ಎಂಬ ಪವಿತ್ರ ಬಂಧನ ಕೂಡ ಅರ್ಥ ಕಳೆದುಕೊಳ್ಳುತ್ತಿದೆ. ಕೇವಲ ಹಲವು ಜನಸಾಮಾನ್ಯರ ಬದುಕಿನಲ್ಲಿ ಮಾತ್ರ ಅಲ್ಲ, ಬೆಳ್ಳಿತೆರೆ, ಕಿರುತೆರೆ ಮಾತ್ರವಲ್ಲ ಬಿಗ್ ಬಾಸ್ ಸ್ಫರ್ಧಿಗಳ ವ್ಯೆಯಕ್ತಿಕ ಬದುಕಿನಲ್ಲಿಯೂ ಪ್ರೀತಿ ಮತ್ತು ಮದುವೆಗೆ ಈಗ ಅರ್ಥ ಇಲ್ಲದಂತಾಗುತ್ತಿದೆ.

ಯಾಕೆಂದರೆ, ಹಿಂದೆಯೆಲ್ಲ ಮದುವೆ ಎನ್ನುವುದು ಸಮರಸ ಜೀವನದ ಆರಂಭ. ಜೊತೆಗಾರ ಅಥವಾ ಜೊತೆಗಾರ್ತಿಯ ಆಯ್ಕೆಗೆ ಮದುವೆ ಎನ್ನುವುದು ಸಾಮಾಜಿಕ ಮನ್ನಣೆ ಪಡೆದಿರುವ ಅಡಿಪಾಯ ಎಂದು ಹೇಳಲಾಗುತ್ತಿತ್ತು. ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ ಎಂಬ ಪಾಠವನ್ನು ಕೂಡ ಎದೆಯೆತ್ತರಕ್ಕೆ ಬೆಳೆದ ಮಕ್ಕಳಿಗೆ ಮಾಡಲಾಗುತ್ತಿತ್ತು. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿ ಭೂಲೋಕದಲ್ಲಿ ನಡೆಯುವಂತಹದ್ದು ಎಂಬ ನಂಬಿಕೆ ಹಿರಿಯರದ್ದಾಗಿತ್ತು.

Vada Pav Girl To Bigg Boss Chandrika Dixit s Bold New Love Amid Husband Scandal

ಆದರೆ ಈಗ ಈ ಈ ಡಿಜಿಟಲ್ ಕಾಲದಲ್ಲಿ ಈ ತತ್ವ ಸಿದ್ಧಾಂತಗಳನ್ನೆಲ್ಲಾ ಹಲವರು ಗಾಳಿಗೆ ತೂರುತ್ತಿದ್ದಾರೆ. ಸಂಬಂಧಗಳು ಇಂದು ಉಪಯೋಗಿಸಿ ಬಿಸಾಡುವ ವಸ್ತುಗಳಂತಾಗಿವೆ. ಇಂದಿನ ಕಾಲದಲ್ಲಿ ಪವಿತ್ರವಾದ ಮದುವೆಯ ಬಂಧ ಸೋಶಿಯಲ್ ಮೀಡಿಯಾ ಕಂಟೆಂಟ್ ಆಗಿ ಮಾರ್ಪಟ್ಟಿದೆ.

ಸಂಗಾತಿ ದ್ರೋಹ ಎಸಗಿದರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಸರಿಪಡಿಸಿಕೊಳ್ಳುವ ಬದಲು, ರೀಲ್ಸ್, ಸ್ಕ್ರೀನ್‌ಶಾಟ್ ಮತ್ತು ಲೈವ್ ಸ್ಟ್ರೀಮ್‌ಗಳ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತಿದೆ. ನೂರಾರು ವರ್ಷಗಳ ಮೌಲ್ಯಗಳಿಗಿಂತ ಒಂದು ವೈರಲ್ ವಿಡಿಯೋಗೇ ಹೆಚ್ಚಿನ ಬೆಲೆ ಸಿಗುತ್ತಿರುವುದು ದುರಂತ.ಉದಾಹರಣೆಗೆ ಚಂದ್ರಿಕಾ ದೀಕ್ಷಿತ್ ಅವರ ವ್ಯೆಯಕ್ತಿಕ ಬದುಕನ್ನೇ ತೆಗೆದುಕೊಳ್ಳಿ.

ಹೌದು, ಚಂದ್ರಿಕಾ ದೀಕ್ಷಿತ್ ..ದೆಹಲಿಯ ''ವಡಾ ಪಾವ್ ಗರ್ಲ್'' ಎಂದೇ ಜನಜನಿತರಾದವರು. ಹೆಚ್ಚೇನು ಇಲ್ಲ. ಎರಡು-ಮೂರು ವರ್ಷದ ಹಿಂದೆ ಬದುಕಿನ ಬಂಡಿಯನ್ನ ಎಳೆಯಲು ಇವರು ಹರಸಾಹಸ ಮಾಡುತ್ತಿದ್ದರು. ಪರಿಸ್ಥಿತಿಯ ಹೊಡೆತಕ್ಕೆ ಸಿಲುಕಿ, ಕುಟುಂಬ ನಿರ್ವಹಣೆಗೆ ದೆಹಲಿ ಬೀದಿ ಬದಿಯಲ್ಲಿ ಹಲವು ವರ್ಷಗಳಿಂದ ವಡಾ-ಪಾವ್ ಮಾರುತ್ತಿದ್ದರು.

ಹೀಗೆ ಅದೊಂದು ದಿನ ಚಂದ್ರಿಕಾ ವಡಾ-ಪಾವ ಮಾರುತ್ತಿದ್ದಾಗ ವ್ಯಕ್ತಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಇಲ್ಲಿಂದ ಚಂದ್ರಿಕಾ ದೀಕ್ಷಿತ್ ಬದುಕು ಸಂಪೂರ್ಣವಾಗಿ ಬದಲಾಗಿ ಹೋಯ್ತು.

Vada Pav Girl To Bigg Boss Chandrika Dixit s Bold New Love Amid Husband Scandal

ಚಂದ್ರಿಕಾ ಅವರ ತಳ್ಳುವ ಗಾಡಿಯ ಮುಂದೆ ಕಣ್ಣಾಯಿಸಿದ ಕಡೆಯೆಲ್ಲ ಜನ ಕಂಡು ಬಂದರು. ದಿನಕ್ಕೊಬ್ಬರು ವಡಾ ಪಾವ್ ಮತ್ತು ಚಂದ್ರಿಕಾ ಅವರ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳತೊಡಗಿದರು.

ನೋಡ .. ನೋಡುತ್ತಾ.. ಸಾಮಾಜಿಕ ಜಾಲತಾಣದಲ್ಲಿ ಇವರ ಹಿಂಬಾಲಕರ ಸಂಖ್ಯೆ ಹೆಚ್ಚಾಯಿತು. 70 ಲಕ್ಷ ಬೆಲೆ ಬಾಳುವ ಪೋರ್ಡ್ ಮಸ್ಟಾಂಗ್ ಕಾರು ಕೂಡ ಚಂದ್ರಿಕಾ ಅವರನ್ನ ಅರಸಿಕೊಂಡು ಬಂತು. ಇಷ್ಟೇ ಅಲ್ಲ ಬೀದಿಯಲ್ಲಿದ್ದ ಚಂದ್ರಿಕಾ ಆ ನಂತರ ''ಬಿಗ್ ಬಾಸ್'' ಮನೆಗೆ ಕೂಡ ಹೋದರು. 2024ರ ''ಬಿಗ್ ಬಾಸ್‌'' ಓಟಿಟಿ ಸೀಸನ್‌ 03ರಲ್ಲಿ ಭಾಗಿಯಾದರು. ಆಲ್ಬಂ ಹಾಡುಗಳಿಗೆ ಹೆಜ್ಜೆಯನ್ನು ಕೂಡ ಹಾಕಿದರು.

ಇಂಥಾ ಚಂದ್ರಿಕಾ ದೀಕ್ಷಿತ್ ಸದ್ಯ ತಮ್ಮ ವ್ಯೆಯಕ್ತಿಕ ಬದುಕನ್ನು ಸಾರ್ವಜನಿಕವಾಗಿ ಪ್ರದರ್ಶನಕಿಟ್ಟಿದ್ದಾರೆ. ಹಲವರ ಪಾಲಿಗೆ ಮನರಂಜನೆಯ ಸರಕಾಗಿದ್ದಾರೆ.

ಹೌದು, ಕೆಲ ದಿನಗಳ ಹಿಂದೆಯಷ್ಟೇ ಚಂದ್ರಿಕಾ ತಮ್ಮ ಪತಿ ಯುಗಮ್ ಗೆರಾ ಅವರ ವಿರುದ್ಧ ಆರೋಪ ಮಾಡಿದ್ದರು. ನನ್ನ ಪತಿಗೆ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇದೆ ಎಂದು ಕಣ್ಣೀರು ಹಾಕಿದ್ದರು. ಕೆಲವು ಮೆಸೇಜ್‌ಗಳ ಸ್ಕ್ರೀನ್ ಶಾಟ್‌ನ್ನು ಕೂಡ ಸಾಕ್ಷಿಯನ್ನಾಗಿ ತೋರಿಸಿದ್ದರು. ಎರಡು ತಿಂಗಳಿಂದ ನಾನು ನರಕ ಅನುಭವಿಸುತ್ತಿದ್ದೇನೆ ಎಂದು ಹೇಳಿ ಬಿಕ್ಕಿದ್ದರು.

ಚಂದ್ರಿಕಾ ಅವರ ಪತಿ ಯುಗಮ್ ಗೆರಾ ಕೂಡ ಸುಮ್ಮನೆ ಕೂರಲಿಲ್ಲ. ಪತ್ನಿಯ ಆರೋಪಕ್ಕೆ ತಿರುಗೇಟು ನೀಡಿದ್ದ ಯುಗಮ್ ಗೆರಾ ನಿನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೇ ನಾನು, ಈ ಸಕ್ಸಸ್ ಹಿಂದೆ ನಾನಿದ್ದೇನೆ ಎನ್ನುವುದನ್ನು ಮರೆಯಬೇಡ ಎಂದರು. ಮುಂದುವರೆದು ನೀನು ಯಾವನ ಜೊತೆಯಾದರೂ ಓಡಾಡು, ಎಲ್ಲಾದರೂ ಹೋಗು, ಏನು ಬೇಕಾದರೂ ಮಾಡು ಆದರೆ ನನ್ನ ಅಂಗಡಿ ಬಳಿ ಅಪ್ಪಿ ತಪ್ಪಿಯೂ ಕಾಣಿಸಿಕೊಳ್ಳಬೇಡ ಎಂದಿದ್ದರು.

ಗಂಡ ಯುಗಮ್ ಗೆರಾ ಹೀಗೆ ಹೇಳಿದ್ದೇ ತಡ ಈಗ ಚಂದ್ರಿಕಾ ಮಿಸ್ಟರಿ ಮ್ಯಾನ್ ಜೊತೆ ಕಾಣಿಸಿಕೊಂಡಿದ್ದಾರೆ. @kon_mysteryman ಎಂಬ ಹ್ಯಾಂಡಲ್ ಹೊಂದಿರುವ ವ್ಯಕ್ತಿಯ ಜೊತೆ ಪ್ರೇಮ ಸಲ್ಲಾಪ ನಡೆಸಿದ್ದಾರೆ. ಐ ಲವ್ ಯೂ ಎಂದು ಹೇಳಿದ್ದಾರೆ. ಈ ಮೂಲಕ ಹಲವರನ್ನು ಅಚ್ಚರಿಗೆ ದೂಡಿದ್ದಾರೆ. ಇನ್ನೂ ಚಂದ್ರಿಕಾ ಐ ಲವ್ ಯೂ ಹೇಳಿದ್ದೇ ತಡ ಆ ವ್ಯಕ್ತಿ ಚಂದ್ರಿಕಾ ಬೈತಲೆಯಲ್ಲಿದ್ದ ಕುಂಕುಮ ತಗೊಂಡು ತನ್ನ ಹಣೆಗೆ ಕುಂಕುಮ ಹಚ್ಚಿಕೊಂಡಿದ್ದಾನೆ.

ಸದ್ಯಕ್ಕೆ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ಹಲವರಿಗೆ ಇವರ ವ್ಯೆಯಕ್ತಿಕ ಬದುಕು ಧಾರಾವಾಹಿಯಿಗಿಂತ ರೋಚಕವಾಗಿ ಈಗ ಕಾಣುತ್ತಿದೆ. ಮೊದಲೆಲ್ಲ ಚಂದ್ರಿಕಾ ಪರವಾಗಿ ಇದ್ದವರೇ ಈಗ ತಿರುಗಿ ಬಿದ್ದಿದ್ದು, ಪಬ್ಲಿಸಿಟಿ ಹುಚ್ಚು ಏನೆಲ್ಲಾ ಮಾಡಿಸುತ್ತೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೀಢೀರ್ ಆಗಿ ಶ್ರೀಮಂತಿಕೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ನಿಮ್ಮ ಬದುಕೇ ಅತ್ಯುತ್ತಮ ಸಾಕ್ಷಿ ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಇದು ನಿಜವಾದ ಪ್ರೀತಿನಾ..? ಮದುವೆಯಂತಹ ಗಂಭೀರ ವಿಷಯವನ್ನೇ ಇಟ್ಟುಕೊಂಡು ನಾಟಕ ಆಡುತ್ತಿರುವ ನಿಮಗೆ ನಾಚಿಕೆ ಆಗಬೇಕು ಎಂದು ತಪರಾಕಿಯನ್ನು ಹಾಕುತ್ತಿದ್ದಾರೆ.

ಒಟ್ನಲ್ಲಿ ಯುಗಮ ಗೆರಾ ಅವರಲ್ಲಾಗಲಿ ಚಂದ್ರಿಕಾ ಅವರಲ್ಲಾಗಲಿ.. ಇಬ್ಬರಲ್ಲಿಯೂ ಮದುವೆಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕಿಂತ, ಯಾರು ಹೆಚ್ಚು ವೈರಲ್ ಆಗುತ್ತಾರೆ ಎಂಬ ಸ್ಪರ್ಧೆಯೇ ಹೆಚ್ಚಾಗಿ ಕಾಣುತ್ತಿದೆ.

''ಎಕನಾಮಿಕ್ ಟೈಮ್ಸ್'' ವರದಿಯ ಪ್ರಕಾರ, ಚಂದ್ರಿಕಾ ಮತ್ತು ಯುಗಮ್ ದೆಹಲಿಯಲ್ಲಿ ಭೇಟಿಯಾಗಿದ್ದರು. ಚಂದ್ರಿಕಾ ಈ ಹಿಂದೆ ಹೇಳಿದಂತೆ, ಪತಿ ಯುಗಮ್ ''ಬಿಗ್ ಬಾಸ್ OTT 3'' ಸೇರಿದಂತೆ ಅವರ ವೃತ್ತಿಜೀವನಕ್ಕೆ ಬೆಂಬಲ ನೀಡಿದ್ದರು. ಆದರೆ ಈಗ ಚಂದ್ರಿಕಾ ವರಸೆ ಬದಲಾಗಿದೆ. ನಾನು ಇಲ್ಲದಿದ್ದರೆ ನನ್ನ ಗಂಡ ರ್‍ಯಾಪಿಡೋ ಡ್ರೈವರ್ ಆಗಿಯೇ ಉಳಿಯಬೇಕಿತ್ತು ಎಂದಿದ್ದಾರೆ.

ಸದ್ಯ ಇವರ ಸಾಂಸಾರಿಕ ಜೀವನ ಚರ್ಚೆಗೀಡಾಗಿದೆ. ಇದರ ನಡುವೆ ಇದು ಕೇವಲ ಪ್ರಚಾರಕ್ಕಾಗಿ ಮಾಡುತ್ತಿರುವ ನಾಟಕವಾಗಿದ್ದರೆ, ಮದುವೆಯಂತಹ ಮೌಲ್ಯಗಳು ಇನ್ನು ಮುಂದೆ ಕೇವಲ ಹಣ ಮತ್ತು ಪ್ರಖ್ಯಾತಿಯ ಮೆಟ್ಟಿಲಾಗುತ್ತವೆ ಎನ್ನುವ ಕಳವಳವನ್ನು ಕೂಡ ಹಲವರು ವ್ಯಕ್ತಪಡಿಸುತ್ತಿದ್ದಾರೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ವೈರಲ್ ವಿಡಿಯೋದ ಅಸಲಿಯತ್ತನ್ನೂ ಚಂದ್ರಿಕಾ ಅವರೇ ಹೇಳಬೇಕಿದೆ.

More from Filmibeat

English summary
Vada Pav Girl Chandrika Dixit confirms new love. Amid a bitter public fallout with husband Yugam Gera, the Bigg Boss contestant's "I Love You" video with a mystery man goes viral. Get the full scoop on the cheating allegations and her new flame.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X