Vadhu Serial: ಸಾರ್ಥಕ್ ಮಾತು ಕೇಳಲು ತಯಾರಿಲ್ಲ ವಧು: ರುಕ್ಸ್‌ಗಾಗಿ ಆದಿ ಒದ್ದಾಟ!

By ಪ್ರಿಯಾ ದೊರೆ

'ವಧು' ಧಾರಾವಾಹಿಯಲ್ಲಿ ಸಹನಾ ಗಂಡನ ಬಗ್ಗೆ ಭೂಮಿಕಾಳಿಗೆ ಎಲ್ಲಾ ಸತ್ಯವೂ ಗೊತ್ತಾಗಿದೆ. ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಹನಾ ಗಂಡ ಈಗಾಗಲೇ ಒಂದು ನೆಕ್ಲೇಸ್ ಸೇರಿದಂತೆ ಐದು ಲಕ್ಷ ಹಣವನ್ನೂ ದೋಚಿದ್ದಾನೆ. ಅಮೇರಿಕಾಗೆ ಹೋಗುವುದಾಗಿ ಸುಳ್ಳು ಹೇಳಿ ಮನೆಯವರನ್ನೆಲ್ಲಾ ನಂಬಿಸಿದ್ದಾನೆ. ಆದರೆ, ಇತ್ತ ಭಾವನ ಬಗ್ಗೆ ಎಲ್ಲಾ ಸತ್ಯ ತಿಳಿದ ಭೂಮಿಕಾಳಿಗೂ ಏನೂ ಮಾಡಲಾಗದಂತಹ ಪರೀಸ್ಥಿತಿ ಬಂದೊದಗಿದೆ.

ಇತ್ತ ಪ್ರಿಯಾಂಕಾಳಿಗೆ ಅವಮಾನ ಮಾಡಿದ ದಿಶಾಳಿಗೆ ಶಾಲೆಯಿಂದ ಹೊರಗುಳಿಯುವ ಶಿಕ್ಷೆ ಸಿಕ್ಕಿದೆ. ಸಾರ್ಥಕ್ ದಿಶಾ ಜೊತೆಗೆ ಇಡೀ ದಿನವನ್ನು ಕಳೆದಿದ್ದು, ಸಂಜೆ ಮನೆಗೆ ಬಂದಿದ್ದಾಳೆ.

Vadhu Kannada Serial 18th April episode written update

ಅಮ್ಮನಿಗೆ ಶಾಲೆಯಿಂದ ಮೆಸೇಜ್ ಬಂದಿರುವುದು ತಿಳಿಯದ ದಿಶಾಳಿಗೆ ಗೂಸಾಗಳು ಬಿದ್ದಿವೆ. ಸಾರ್ಥಕ್ ಮತ್ತು ವಧು ಇಬ್ಬರಿಗೂ ಇದರಿಂದ ಬೇಸರವಾಗಿದ್ದು, ಏನೂ ಮಾತನಾಡಲಾಗದೇ ಸುಮ್ಮನಾಗಿದ್ದಾರೆ.

ರುಕ್ಸ್‌ಗಾಗಿ ಒದ್ದಾಡುತ್ತಿದ್ದಾನೆ ಆದಿ

ಇನ್ನು ವೀಕ್ಷಿತಾ, ಆದಿಯನ್ನು ಹುಚ್ಚಿಯಂತೆ ಪ್ರೀತಿ ಮಾಡುತ್ತಿದ್ದಾಳೆ. ಆದರೆ, ನೇರವಾಗಿ ಹೇಳುವುದು ಹೇಗೆ ಎಂಬುದು ತಿಳಿಯದೇ ರುಕ್ಮಿಣಿ ಎಂಬ ಹೆಸರಿನಲ್ಲಿ ಆದಿ ಜೊತೆಗೆ ಮೆಸೇಜ್ ಮಾಡಿಕೊಂಡು ಫೋನಿನಲ್ಲಿ ಹರಟುತ್ತಾ ಪ್ರೀತಿ ಮಾಡುತ್ತಿದ್ದಾಳೆ. ಆದಿ ಕೂಡ ರುಕ್ಸ್ ಜೊತೆಗೆ ಸದಾ ಮೊಬೈಲ್‌ನಲ್ಲಿ ಮುಳುಗಿ ಹೋಗಿರುತ್ತಾನೆ. ವೀಕ್ಷಿತಾ ಬೇಕಂತಲೇ ಆದಿಯನ್ನು ಆಟವಾಡಿಸುತ್ತಿದ್ದಾಳೆ. ಈಗ ವೀಕ್ಷಿಯಿಂದ ವೀಡಿಯೋ ಬೇಕು ಎಂದು ರುಕ್ಸ್ ಕೇಳಿದ್ದು, ಆದಿ ಸಂಕಷ್ಟದಲ್ಲಿ ಸಿಲುಕಿದ್ದಾನೆ. ರುಕ್ಸ್ ಗಾಗಿ ಆದಿ ವೀಕ್ಷಿ ಬಳಿ ಹೋಗಿ ನನ್ನ ಬಗ್ಗೆ ನಿನ್ನ ಮನದಲ್ಲಿ ಪ್ರೀತಿ ಇಲ್ಲ ಎಂದು ಹೇಳಿಸಿ ವೀಡಿಯೋ ಮಾಡಿದ್ದಾನೆ. ಇನ್ನೂ ರುಕ್ಸ್ ಅನ್ನು ಆದಿ ನೇರವಾಗಿ ಭೇಟಿ ಮಾಡಿಲ್ಲ. ಭೇಟಿ ಮಾಡಿದ ದಿನ ಆದಿ ರಿಯಾಕ್ಷನ್ ಹೇಗಿರಬಹುದು ಎಂಬುದು ಕುತೂಹಲವೇ ಸರಿ.

ಸುಚಿತ್ ಮಾಹಿತಿ ಪಡೆದ ಸಾರ್ಥಕ್

ಸಾರ್ಥಕ್‌ಗೆ ಈಗಾಗಲೇ ಸುಚಿತ್ ಬಗ್ಗೆ ಅನುಮಾನ ಬಂದಿದೆ. ಹೀಗಾಗಿ ಸಾರ್ಥಕ್ ವಧು ಬಳಿ ಈ ಹಿಂದೆಯೇ ಒಂದು ಸಲ ಹೇಳಿದ್ದಾನೆ. ಆದರೆ ವಧು ತನ್ನ ಕುಟುಂಬದ ವಿಚಾರವನ್ನು ಕೆಲಸದ ವಿಚಾರವನ್ನು ಒಂದು ಮಾಡಲು ಬಯಸುವವಳಲ್ಲ. ಹೀಗಾಗಿ ಸಾರ್ಥಕ್ ಬಳಿ ಸುಚಿತ್ ವಿಚಾರದಲ್ಲಿ ನಿಮ್ಮ ಮಾತನ್ನು ಕೇಳುವುದಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಇನ್ನು ಸಾರ್ಥಕ್, ಸುಚಿತ್ ಮತ್ತು ಅವನ ಲವ್ವರ್ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಈಗ ಸುಚಿತ್ ಲವ್ವರ್ ಅನ್ನು ಭೇಟಿ ಮಾಡಿರುವ ಸಾರ್ಥಕ್ ಅವರ ವಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿಯನ್ನೂ ಕಲೆ ಹಾಕಿದ್ದಾನೆ. ಸುಚಿತ್ ಮತ್ತು ಅವನ ಲವ್ವರ್ ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಮನೆಯಲ್ಲಿ ಮದುವೆಯ ಮಾತುಕತೆಯೂ ನಡೆದಿದೆ. ಮದುವೆಯಾಗುವವರೆಗೂ ಯಾರ ಬಳಿಯೂ ಪ್ರೀತಿಯ ವಿಚಾರವನ್ನು ಹೇಳಬಾರದು ಎಂದು ಮಾತು ಕೂಡ ತೆಗೆದುಕೊಂಡಿದ್ದಾನೆ ಸುಚಿತ್.

Vadhu Kannada Serial 18th April episode written update

ಸಾರ್ಥಕ್ ಮಾತನ್ನು ನಂಬದ ವಧು

ಇದೆಲ್ಲಾ ವಿಚಾರವನ್ನು ತಿಳಿದುಕೊಂಡು ಬಂದ ಸಾರ್ಥಕ್ ಮತ್ತೆ ವಧು ಬಳಿ ಹೇಳಿದ್ದಾನೆ. ಆದರೆ ವಧು ನನ್ನ ಮನೆಯಲ್ಲಿ ಈ ಮದುವೆಯನ್ನು ನಿಶ್ಚಿಯಿಸಿದ್ದಾರೆ. ಈ ವಿಚಾರದಲ್ಲಿ ನಿಮ್ಮ ಮಾತನ್ನನನು ನಾನು ಕೇಳುವುದಕ್ಕೆ ಆಗುವುದಿಲ್ಲ. ನನ್ನ ವಯಕ್ತತತಿಕ ವಿಚಾರದಲ್ಲಿ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಆದರೆ, ಸಾರ್ಥಕ್ ಗೆ ಹೇಗಾದರೂ ಮಾಡಿ ಸುಚಿತ್ ಮತ್ತು ವಧು ಮದುವೆಯನ್ನು ನಿಲ್ಲಿಸಬೇಕು ಎಂದು ಆಲೋಚಿಸುತ್ತಿದ್ದಾನೆ. ಇನ್ನು ವಧು ತಂಟೆಗೆ ಯಾರೇ ಬಂದರೂ ಸಾರ್ಥಕ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾರ್ಥಕ್ ಮನದಲ್ಲಿರುವ ಪ್ರೀತಿಯೇ ಕಾರಣವಿರಬಹುದು.

More from Filmibeat

English summary
Vadhu is not ready to listen sarthak words about suchith
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X