Vadhu ; 15 ವರ್ಷದಿಂದ ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿದೆ ಪ್ರಿಯಾಂಕ ಮನಸು, ಕಾರಣವೇನು ಗೊತ್ತಾಯ್ತಾ ?
ವಧು ಧಾರಾವಾಹಿಯಲ್ಲಿ ವಧುಗೆ ಸುಚಿತ್ ನನ್ನು ಮದುವೆಯಾಗಲು ಒಂದು ಕಡೆ ಒಪ್ಪಿಗೆ ಇದ್ದರೆ, ಮತ್ತೊಂದು ಕಡೆ ಸುಚಿತ್ ನಡವಳಿಕೆ ಆತಂಕವನ್ನು ತಂದೊಡ್ಡಿದೆ. ಹಾಗಾಗಿ ಸದ್ಯ ಮದುವೆ ಬೇಡ ಎಂದು ಮುಂದೂಡಿದ್ದಾಳೆ. ಆದರೆ, ಸುಚಿತ್, ವಧು ಚಿಕ್ಕಮ್ಮನಿಂದಾಗಿ ಈಗಾಗಲೇ ಹಲವರಿಗೆ ತಮ್ಮ ಮದುವೆಯ ವಿಚಾರ ಗೊತ್ತಾಗಿದೆ. ಇತ್ತ ಸಾರ್ಥಕ್ ಮತ್ತು ಪ್ರಿಯಾಂಕ ಡಿವೋರ್ಸ್ ವಿಚಾರ ಹಗ್ಗಜಗ್ಗಾಟ ನಡೆಯುತ್ತಿದೆ. ಪ್ರಿಯಾಂಕಳ ಚುಚ್ಚು ಮಾತುಗಳನ್ನು ಕೇಳಲಾಗದೇ ಸಾರ್ಥಕ್ ಒದ್ದಾಟ ನಡೆಸುತ್ತಿದ್ದಾನೆ.
ಬ್ಲ್ಯಾಕ್ ಮೇಲ್ ಮಾಡಿದ ತರಂಗ
ಇನ್ನು ಪ್ರಿಯಾಂಕ ಯಶೊಮತಿ ಬಳಿ ಎಲ್ಲಾ ಸತ್ಯವನ್ನೂ ಹೇಳುತ್ತೇನೆ ಎಂದು ಹೇಳಿದ ಸಮಯಕ್ಕೆ ಸರಿಯಾಗಿ ಅವರ ತಾಯಿ ಮನೆಗೆ ಬಂದಿದ್ದಾಳೆ. ರೂಮಿಗೆ ಬಂದು ನೀನು ಸಾರ್ಥಕ್ ನನ್ನು ಇಕ್ಕಟ್ಟಿಗೆ ಸಿಕ್ಕಿ ಹಾಕಿಸಬೇಡ. ಅವನು ಕಂಪನಿಯಲ್ಲಿ ಅರ್ಧ ಪಾಲನ್ನು ನಿನಗೆ ಕೊಡುವಂತೆ ಮಾಡಿಕೊ. ಸದ್ಯ ಯಶೋಮತಿಗೆ ಡಿವೋರ್ಸ್ ವಿಚಾರವನ್ನು ಹೇಳಿ ಕೆಲಸವನ್ನು ಹಾಳು ಮಾಡಿಕೊಳ್ಳಬೇಡ ಎಂದು ಬುದ್ಧಿ ಹೇಳುತ್ತಾಳೆ. ಈ ಮಾತುಗಳು ತರಂಗ ಕಿವಿಗಳಿಗೆ ಬಿದ್ದಿದ್ದು, ಶಾಕ್ ಆಗಿದ್ದಾಳೆ. ಪ್ರಿಯಾಂಕ ರೂಮಿನಲ್ಲಿ ಒಬ್ಬಳೇ ಇರುವಾಗ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಡಿವೋರ್ಸ್ ವಿಚಾರ ಯಾರಿಗೂ ಗೊತ್ತಾಗಬಾರದು ಎಂದು ಎರಡು ಲಕ್ಷ ಕೊಡು ಎಂದು ಕೇಳುತ್ತಾಳೆ.

ತರಂಗ ಕಪಾಳಕ್ಕೆ ಬಾರಿಸಿದ ಪ್ರಿಯಾಂಕ
ತರಂಗಗೆ ಡಿವೋರ್ಸ್ ವಿಚಾರ ಗೊತ್ತಾಗಿದ್ದಕ್ಕೆ ಗಾಬರಿ ಪಡಬೇಕಿದ್ದ ಪ್ರಿಯಾಂಕ, ಕೋಪ ಮಾಡಿಕೊಂಡಿದ್ದಾಳೆ. ತರಂಗ ಕೆನ್ನೆಗಳಿಗೆ ರಪರಪನೇ ಬಾರಿಸಿದ್ದು, ನನ್ನ ಹತ್ರ ಬ್ಲ್ಯಾಕ್ ಮೇಲ್ ಮಾಡುವುದನ್ನು ಇಟ್ಟುಕೊಳ್ಳಬೇಡ. ಒಂದು ಲಕ್ಷ ಹಣವನ್ನು ಬಿಸಾಡುತ್ತೇನೆ. ಆದರೆ, ಯಾರಿಗಾದರೂ ಡಿವೋರ್ಸ್ ವಿಚಾರ ಹೇಳಿದ್ದು ಗೊತ್ತಾದರೆ ನಾನಂತೂ ಸುಮ್ಮನಿರುವುದಿಲ್ಲ. ನಿನ್ನ ಬಗ್ಗೆ ಹತ್ತಕ್ಕೂ ಹೆಚ್ಚು ಸೀಕ್ರೆಟ್ ವಿಚಾರಗಳು ನನಗೂ ಗೊತ್ತಿದೆ. ಅವನ್ನೆಲ್ಲಾ ಎಲ್ಲರಿಗೂ ತಿಳುವಂತೆ ಮಾಡಬೇಕಾಗುತ್ತದೆ ಎಂದು ಬೆದರಿಸಿ ತರಂಗಾಳನ್ನು ಕಳಿಸುತ್ತಾಳೆ.
ಅಣ್ಣನ ಹುಟ್ಟುಹಬ್ಬ ಆಚರಿಸಿದ ಪ್ರಿಯಾಂಕ
ಇನ್ನು ಮಧ್ಯರಾತ್ರಿ 12 ಗಂಟೆಗೆ ಎದ್ದೇಳುವ ಪ್ರಿಯಾಂಕ ಅಪರೂಪಕ್ಕೆ ಅಡುಗೆ ಮನೆಗೆ ಹೋಗುತ್ತಾಳೆ. ತುಪ್ಪದಿಂದ ಬೇಸನ್ ಲಾಡುವನ್ನು ತಯಾರಿಸುತ್ತಾಳೆ. ಈ ವೇಳೆ ಕೆಲಸದವಳು ಅಡುಗೆ ಮನೆಗೆ ಬಂದಿದ್ದಕ್ಕೆ ಬೈದು ಕಳಿಸುತ್ತಾಳೆ. ಬೇಸನ್ ಲಾಡುಗಳನ್ನು ಡಬ್ಬಿಯಲ್ಲಿ ತೆಗೆದುಕೊಂಡು ಅಮ್ಮನ ಜೊತೆಗೆ ಸ್ಮಶಾನಕ್ಕೆ ಹೋಗುತ್ತಾಳೆ. ಅಲ್ಲಿ ಪ್ರಿಯಾಂಕ ಅಣ್ಣ ಪ್ರೀತಮ್ ಸಮಾಧಿ ಬಳಿ ಹೋಗಿ ಮಾತನಾಡುತ್ತಾಳೆ. ಅಣ್ಣ ನಿನಗೋಸ್ಕರ ಬೇಸನ್ ಲಾಡು ನಾನೇ ಮಾಡಿ ತಂದಿದ್ದೇನೆ ಎಂದು ಹೇಳಿ ಕೇಕ್ ಕಟ್ ಮಾಡಿ ಅಣ್ಣನ ಹುಟ್ಟು ಹಬ್ಬವನ್ನು ಸೆಲಬ್ರೇಟ್ ಮಾಡುತ್ತಾಳೆ.
ಪ್ರಿಯಾಂಕ ಮನದಲ್ಲಿ ಉಳಿದ ಅಣ್ಣನ ಸಾವಿನ ಸೇಡು
ಬಳಿಕ ಇವತ್ತು ನಿನ್ನದು 27ನೇ ಹುಟ್ಟುಹಬ್ಬ. ನೀನು ಸಮಾಧಿಯಾಗಿ 15 ವರ್ಷವಾಯ್ತು. ನೀನು ಸತ್ತಾಗಿನಿಂದ ಇಂದಿನವರೆಗೂ ನಾನಾಗಲೀ ಅಮ್ಮನಾಗಲೀ ಒಂದು ಹನಿ ಕಣ್ಣೀರು ಕೂಡ ಹಾಕಿಲ್ಲ. ನಿನ್ನ ಸಾವಿಗೆ ಕಾರಣವಾದ ಅಮ್ಮ, ಮಗನನ್ನು ಬೀದಿಗೆ ತಂದ ದಿನ ನಾನು ಅಮ್ಮ ನಿನ್ನ ಸಾವಿನ ನೆನಪಲ್ಲಿ ಮೊದಲ ಕಣ್ಣೀರಿನ ಹನಿಯನ್ನು ಸುರಿಸುತ್ತೇವೆ ಎಂದು ಹೇಳುತ್ತಾಳೆ. ಪ್ರಿಯಾಂಕ ಸೇಡಿನಿಂದಲೇ ಸಾರ್ಥಕ್ ನನ್ನು ಮದುವೆಯಾಗಿರುವುದು ಇದರಿಂದ ಪಕ್ಕಾ ಆಗಿದೆ. ಆದರೆ, ಪ್ರೀತಮ್ ಸಾವಿಗೆ ಸಾರ್ಥಕ್ ಮತ್ತು ಯಶೋಮತಿ ಹೇಗೆ ಕಾರಣಕರ್ತರು ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ. ಒಟ್ನಲ್ಲಿ ಪ್ರಿಯಾಂಕ ಸಾರ್ಥಕ್ ಬದುಕನ್ನು ಹಾಳು ಮಾಡಲೆಂದೇ ಮದುವೆಯಾಗಿರುವುದು ಎಂಬುದಂತೂ ಇದರಿಂದ ಪಕ್ಕಾ ಆಗಿದೆ.


Click it and Unblock the Notifications











