Vadhu ; ಡಿವೋರ್ಸ್‌ಗೆ ಮುಂದಾದ ಪ್ರಿಯಾಂಕ, ಸಾರ್ಥಕ್‌ಗೆ ಶಾಕ್ ಮೇಲೆ ಶಾಕ್..!
ವಧು ಸೀರಿಯಲ್ ನಲ್ಲಿ ದೊಡ್ಡ ಟ್ವಿಸ್ಟ್ ಒಂದು ಬಂದಿದೆ. ಪ್ರಿಯಾಂಕ ಡಿವೋರ್ಸ್ ಬೇಕು ಎಂದು ಕೇಳಿರುವುದಲ್ಲದೇ ಹೆಜ್ಜೆ ಹೆಜ್ಜೆಗೂ ತನ್ನದೇ ಆದ ಡಿಮ್ಯಾಂಡ್ ಗಳನ್ನು ಮಾಡುತ್ತಿದ್ದಾಳೆ. ಸಾರ್ಥಕ್ ನಿಂದ ದೂರಾಗಲೆಂದೇ ಮದುವೆಯಾಗಿರುವ ಪ್ರಿಯಾಂಕ ಈಗ ಡಿವೋರ್ಸ್ ಕೇಳಿದ್ದಾಳೆ. ಪ್ರತಿ ಬಾರಿಯೂ ಅಡ್ಡ ಗೋಡೆಯ ಮೇಲೆ ದೀಪ ಇಡುವಂತೆ ಮಾತನಾಡುವ ಪ್ರಿಯಾಂಕಳನ್ನು ಸಾರ್ಥಕ್ ಸಹಿಸಿಕೊಳ್ಳದೇ ಬೇರೆ ದಾರಿಯೇ ಇಲ್ಲದಂತಾಗಿದೆ. ಅಮ್ಮನ ಮೇಲೆ ಅಪಾರವಾದ ಪ್ರೀತಿ ಇಟ್ಟಿರುವ ಸಾರ್ಥಕ್ ಈಗ ಪ್ರಿಯಾಂಕಳ ಎಲ್ಲಾ ಮಾತುಗಳಿಗೂ ತಲೆದೂಗುವ ಪರೀಸ್ಥಿತಿ ಎದುರಾಗಿದೆ. ಇಷ್ಟವಿಲ್ಲದಿದ್ದರೂ ಕೂಡ ಸಾರ್ಥಕ್ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ.
ಅತ್ತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ಸೊಸೆ
ಪ್ರಿಯಾಂಕ ಅತ್ತೆ ಬಳಿ ಇರುವ ಆಸ್ತಿಯನ್ನು ತನಗೆ ದಕ್ಕಿಸಿಕೊಳ್ಳಬೇಕು. ಅಲ್ಲದೇ ಅತ್ತೆ ಯಶೋಮತಿಗೆ ಅವಮಾನವಾಗಬೇಕು ಎಂದೇ ಸಕತ್ ಆಗಿ ಪ್ಲಾನ್ ಮಾಡಿಕೊಂಡಿದ್ದಾಳೆ. ಯಶೋಮತಿ ತಮ್ಮನ ಮಗಳೇ ಆಗಿದ್ದರೂ ಪ್ರಿಯಾಂಕ ಮತ್ತು ಅವರ ತಾಯಿಗೆ ಹಳೆ ಧ್ವೇಷವೊಂದು ಕಾಡುತ್ತಿದೆ. ಈ ಧ್ವೇಷಕ್ಕಾಗಿಯೇ ಪ್ರಿಯಾಂಕ ಮದುವೆಯಾದ ಬಳಿಕ ಡಿವೋರ್ಸ್ ಪಡೆಯಲು ನಿರ್ಧರಿಸಿದ್ದಾಳೆ. ಇದರಿಂದ ಯಶೋಮತಿಗೆ ಅವಮಾನವಾಗುತ್ತದೆ. ಅದನ್ನು ನೋಡಿ ಖುಷಿಪಡಬೇಕು ಎಂದುಕೊಂಡಿದ್ದು, ಡಿವೋರ್ಸ್ ಅನ್ನು ಕೂಡ ನಾಜೂಕಾಗಿ ಪಡೆಯಲು ಮುಂದಾಗಿದ್ದಾಳೆ. ಸಾರ್ಥಕ್ ಬಳಿ ಡಿವೋರ್ಸ್ ನೀನೇ ಕೊಡಬೇಕು ಎಂದಿದ್ದು, ಇತ್ತ ಅತ್ತ ಎಯಶೋಮತಿ ಬಳಿ ಸಾರ್ಥಕ್ ನನ್ನ ಜೊತೆಗೆ ಚೆನ್ನಾಗಿಲ್ಲ ಎಂದು ಗುಟ್ಟಾಗಿ ಸುಳ್ಳೊಂದನ್ನು ಹೇಳಿದ್ದಾಳೆ. ಯಶೋಮತಿಗೆ ಪ್ರಿಯಾಂಕ ಎಂದರೆ ಪ್ರೀತಿ. ಮುದ್ದು ಸೊಸೆಯಾಗಿದ್ದಾಳೆ. ಆದರೆ ತನ್ನ ಸೊಸೆ ನಂಬಿಕೆ ದ್ರೋಹ ಮಾಡುತ್ತಿರುವುದು ಗೊತ್ತಾದರೆ ಏನು ಮಾಡುತ್ತಾರೋ ಗೊತ್ತಿಲ್ಲ.

ಮದುವೆ ಬಗ್ಗೆ ಕನ್ಫ್ಯೂಸ್ ಆಗಿರುವ ವಧು
ಇತ್ತ ವಧು ಸುಚಿತ್ ಜೊತೆ ಮದುವೆಯಾಗಲು ಒಪ್ಪಿಕೊಂಡಿದ್ದಾಳೆ. ಆದರೆ ಈಗ ಅವಳಿಗೆ ಗೊಂದಲ ಶುರುವಾಗಿದೆ. ಸುಚಿತ್ ಪ್ರಿಯಾಂಕ ಕಡೆ ಲಾಯರ್ ಆಗಿದ್ದು, ಇಬ್ಬರ ಅಭಿಪ್ರಾಯಗಳು ಬೇರೆ ಇದೆ ಎಂಬ ಅನುಮಾನ ಶುರುವಾಗಿದೆ. ಅಲ್ಲದೇ ಸುಚಿತ್ ಮಾತುಗಳು ಕೂಡ ವಧುಗೆ ಗೊಂದಲವನ್ನುಂಟು ಮಾಡುತ್ತಿದೆ. ಆದರೆ, ಈಗಾಗಲೇ ಎರಡೂ ಕುಟುಂಬವೂ ಮದುವೆಗೆ ಒಪ್ಪಿಗೆ ಸೂಚಿಸಿದ್ದು, ವಧು ಪ್ರಿಯಾಂಕ ಮತ್ತು ಸಾರ್ಥಕ್ ಡಿವೋರ್ಸ್ ಕೇಸ್ ಮುಗಿಯುವವರೆಗೆ ಈ ಮದುವೆ ಬಗ್ಗೆ ಯೋಚಿಸಲು ಅವಕಾಶ ಸಿಕ್ಕಿದೆ.
50-50 ಶೇರ್ ಕೇಳಿದ ಪ್ರಿಯಾಂಕ ಲಾಯರ್
ಪ್ರಿಯಾಂಕ ಡಿವೋರ್ಸ್ ವಿಚಾರದಲ್ಲೂ ಬಹಳ ಡಿಮ್ಯಾಂಡಿಂಗ್ ಆಗಿದ್ದಾಳೆ. ತಾನು ಹೇಲಿದ ಸಮಯಕ್ಕೆ, ತಾನು ಬಯಸಿದ ಜಾಗದಲ್ಲೇ ಮೀಟಿಂಗ್ ಮಾಡಬೇಕು. ಡಿವೋರ್ಸ್ ಕೆಲಸಗಳನ್ನು ಬೇಗನೇ ಮುಗಿಸಬೇಕು ಎಂದು ಡಿಮ್ಯಾಂಡ್ ಮಾಡಿದ್ದಾಳೆ. ಹೀಗಾಗಿ ಕಂಪನಿಯ ಕಚೇರಿಯಲ್ಲೇ ಸುಚಿತ್, ವಧು, ಸಾರ್ಥಕ್ ಮತ್ತು ಪ್ರಿಯಾಂಕ ಸೇರಿದ್ದು, ಸೆಟಲ್ ಮೆಂಟ್ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ವೇಳೆ ವಧು 20% ಶೇರ್ ಬಗ್ಗೆ ಮಾತನಾಡಿದ್ದರೆ, ಸುಚಿತ್ ಸಾಧ್ಯವೇ ಇಲ್ಲ. 50% ಶೇರ್ ಬೇಕು ಎಂದಿದ್ದು, ಇದಕ್ಕೆ ಸಾರ್ಥಕ್ ಒಪ್ಪಿಗೆ ಕೂಡ ಕೊಟ್ಟಿದ್ದಾನೆ.
ಕಂಪನಿಯಲ್ಲೂ ಪಾಲು ಬೇಕು ಎಂದಿದ್ದೆ ಶಾಕ್
ವಧುಗೆ ಸೆಟಲ್ ಮೆಂಟ್ ಬರೋಬ್ಬರಿ 30 ಕೋಟಿ ಆಗಿರುವುದರಿಂದ ಶಾಕ್ ಆಗುತ್ತಾಳೆ. ಇಷ್ಟೋಂದು ಶೇರ್ ಪಡೆಯುವುದು ಸರಿಯಲ್ಲ ಎಂದಿದ್ದಾಳೆ. ಇನ್ನು ಪ್ರಿಯಾಂಕ ಮತ್ತು ಸುಚಿತ್ ಒಡವೆ, ಬಟ್ಟೆ, ಕಾಸ್ಟ್ಲಿ ವಸ್ತುಗಳಲ್ಲೂ ಶೇರ್ ಕೇಳಲು ಮುಂದಾಗಿದ್ದು, ಈಗ ಕಂಪನಿಯಲ್ಲೂ ಶೇರ್ ಬೇಕು ಎಂದಿದ್ದಾರೆ. ಈ ಮಾತನ್ನು ಕೇಳಿದ ಸಾರ್ಥಕ್ ಮತ್ತು ವಧುಗೆ ದೊಡ್ಡ ಶಾಕ್ ಆಗಿದೆ.


Click it and Unblock the Notifications











