ದೇವಾಂಶನಿಂದಾ ದೂರವಾಗುತ್ತಾಳಾ ವೈದೇಹಿ? ಮುಂದಿನ ನಡೆ ಏನು ?

By ಪೂರ್ವ

'ವೈದೇಹಿ ಪರಿಣಯ' ಧಾರಾವಾಹಿ ಉತ್ತಮವಾಗಿ ಮೂಡಿ ಬರುತ್ತಿದೆ.. ಇದೀಗ ಶ್ರಿಯಾಗೆ ಮದುವೆಯಾಗಲು ಇಷ್ಟವಿಲ್ಲದ ಕಾರಣ ವೈದೇಹಿಯ ಬಳಿ ಬಂದು ಹೇಳುತ್ತಾಳೆ ನಾನೊಂದು ಪತ್ರ ಕೊಡುತ್ತೇನೆ ಪ್ಲೀಸ್ ಅದನ್ನು ಹೋಗಿ ದೇವಾಂಶಗೆ ಕೋಡುತ್ತಿಯಾ ಎಂದು ಕೇಳಿದ್ದಾಳೆ.

"ಅದಕ್ಕೆ ಅವಳು ಎನು ಪ್ರೀತಿಯನ್ನು ಈ ರೀತಿ ವ್ಯಕ್ತ ಪಡಿಸುತ್ತಿದ್ದಿಯಾ" ಎಂದಾಗ ಇಲ್ಲ ಹಾಗೇನಿಲ್ಲ. ಎಲ್ಲಾ ಈ ಪತ್ರದಲ್ಲಿ ಬರೆದಿದ್ದೇನೆ ಅವನಿಗೆ ಕೊಟ್ಟುಬಿಡು ಎಂದು ಹೇಳುತ್ತಾಳೆ. ಆ ಪತ್ರವನ್ನು ಹಿಡಿದು ದೇವಾಸ್ಥಾನದ ಕಡೆ ಹೆಜ್ಜೆ ಹಾಕುತ್ತಾಳೆ ವೈದೇಹಿ. ಅಲ್ಲಿ ತಾನು ಮೆಚ್ಚಿದ ಹುಡುಗ ಕಾಯುತ್ತಾ ಇರುವ ಹಾಗೆ ದೇವಸ್ಥಾನದಲ್ಲಿ ಹುಡುಗನನ್ನು ಕಂಡು ನಾಚಿ ನೀರಾದಳು ವೈದೇಹಿ.

Vaidehi Parinaya Serial 30th July Written Update

ವೈದೇಹಿಗೆ ತಿಳಿದೇ ಇಲ್ಲ ತಾನು ಮೆಚ್ಚಿದ ಹುಡುಗ ದೇವಾಂಶ ಶ್ರಿಯಾಳ ಕೈ ಹಿಡಿಯುವವನು ಎಂದು. ವೈದೇಹಿ ಕಂಡ ಕೂಡಲೇ ಬಂದ ದೇವಾಂಶ ಆಕೆಯ ಹತ್ತಿರ ಬರುತ್ತಾನೆ ಬಳಿಕ ಶ್ರಿಯಾ ಬರೆದ ಪತ್ರವನ್ನು ಅಡಗಿಸುತ್ತಾಳೆ. ಬಳಿಗೆ ಬಂದ ದೇವಾಂಶ ವೈದೇಹಿ ಬಳಿ ಮಾತನಾಡುತ್ತಾನೆ.

"ಹಾ.. ಈಗಷ್ಟೇ ನಿನ್ನ ಬಗ್ಗೆ ಹೇಳುತ್ತಿದ್ದೆ ಎಂದಾಗ ಭಯ ಗೊಂಡ ವೈದೇಹಿ ಯಾರ ಹತ್ತಿರ ಎಂದಾಗ ದೇವಾಂಶ ಹೇಳುತ್ತಾನೆ ಮಾರುತಿ ಹತ್ತಿರ... ಎನ್ ಹಾಗ್ ನೋಡುತ್ತಿದ್ದೀರಿ" ಎಂದು ಕೇಳುತ್ತಾನೆ ಅದಕ್ಕೆ ವೈದೇಹಿ ಹೇಳುತ್ತಾಳೆ ಎಲ್ಲಿದ್ದಾನೆ ಮಾರುತಿ ಎಂದಾಗ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ತೋರಿಸುತ್ತಾನೆ ದೇವಾಂಶ. ದೇವರನ್ನು ನೋಡಿದ ವೈದೇಹಿ ಓಹೋ ದೇವರ ಎಂದು ನಿಟ್ಟುಸಿರು ಬಿಡುತ್ತಾಳೆ.

"ಅಗರಬತ್ತಿ ತಯಾರಿಸುತ್ತಾರೆ. ಎಲ್ಲೆಂದರಲ್ಲಿ ಡಾನ್ಸ್ ಮಾಡುತ್ತಾಳೆ ಎಂದೆಲ್ಲ ದೇವರ ಬಳಿ ಹೇಳಿದಾಗ ನೀನೇ ಬಂದೆ ಹಾ.... ಈಗ ನೀನೇ ಹೇಳು" ಎಂದು ದೇವಾಂಶ ಹೇಳುತ್ತಾನೆ. ಆಗ ವೈದೇಹಿ ಕೇಳುತ್ತಾಳೆ ಎನು ಹೇಳಬೇಕು ಎಂದು? ಅದಕ್ಕೆ ದೇವಾಂಶ ಹೇಳುತ್ತಾನೆ ಪಕ್ಕದಲ್ಲಿ ನಿನ್ನ ತಮ್ಮ ಇಲ್ಲ ಅಂದರೆ ಮಾತನಾಡಲ್ವಾ? ಎಂದಾಗ ವೈದೇಹಿ ಮನಸಲ್ಲಿ ಹಾಗೇನಿಲ್ಲ ದೇವಾಂಶ ಅವರಿಗೆ ಶ್ರಿಯಾ ಬರೆದ ಪತ್ರ ಕೊಟ್ಟುಬಿಟ್ಟರೆ ಬಂದ ಕೆಲಸ ಮುಗಿದು ಹೋಗುತ್ತದೆ. ಆಮೇಲೆ ಎಷ್ಟು ಬೇಕಾದರೂ ಮಾತನಾಡಿಕೊಳ್ಳಬಹುದು ಎಂದು ಯೋಚಿಸುತ್ತಿದ್ದಾಗ ದೇವಾಂಶ ಚಿಟಿಕೆ ಹಾಕುತ್ತಾನೆ.

Vaidehi Parinaya Serial 30th July Written Update

ಇದನ್ನು ಕೇಳಿ ಹೌಹಾರಿದ ವೈದೇಹಿ ಮನಸಲ್ಲಿ ಮಾತನಾಡಿಕೊಳ್ಳುತ್ತಿಯಾ ನೇರವಾಗಿ ಹೇಳಲ್ವಾ? ಎಂದಾಗ ವೈದೇಹಿ ಹೇಳುತ್ತೇನೆ. ಅದು ನಾನು ಇಲ್ಲಿಗೆ ಯಾಕೆ ಬಂದಿದ್ದು ಅಂದರೆ ಅದು ಎಂದು ತೊದಲುತ್ತಿರಬೇಕಾದರೆ ದೇವಾಲಯಕ್ಕೆ ಚಪ್ಪಲಿ ಹಾಕಿಕೊಂಡು ಪ್ರವೇಶ ಮಾಡುತ್ತಾನೆ. ಒಬ್ಬಾತ ಆತನನ್ನು ಕಂಡು ದೇವಾಂಶ ಹೇ ನಿಲ್ಲು ಎಂದು ಹೇಳುತ್ತಾನೆ. ಬಳಿಕ ದೇವಾಲಯಕ್ಕೆ ಶೂ ಹಾಕಿಕೊಂಡು ಬರೋ ಹಾಗಿಲ್ಲ. ಎಂದಾಗ ಆತ ಹೇಳುತ್ತಾನೆ ದೇವರ ಬಳಿ ಬಂದಿಲ್ಲ ಎಂದು ಹೇಳಿದಾಗ ದೇವರ ಬಳಿ ಬರಲಿಲ್ಲ ಆದರೂ ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಕೂಡದು ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ. ಇದನ್ನು ಕೇಳಿದ ವೈದೇಹಿಗೆ ಖುಷಿಯಾಗುತ್ತದೆ.

ಬಳಿಕ ಹೇಳುತ್ತಾಳೆ ಅಯ್ಯೋ ದೇವಾಂಶ ಅವರು ಕಾಯುತ್ತಿರುತ್ತಾರೆ ಅಲ್ವಾ. ನಾನು ಬಂದ ಕೆಲಸನೆ ಮರೆತು ಬಿಟ್ಟೆ ಎಂದು ಹೊರಡಲು ಸಿದ್ಧಳಾಗುತ್ತಾಳೆ. ದೇವಾಂಶ ಹೀಗೆ ಹೇಳುತ್ತಿರಬೇಕಾದರೆ ಯಾರು ಸರ್ ನೀವು ಎಂದು ಕೇಳುತ್ತಾನೆ. ಅದಕ್ಕೆ ಒಬ್ಬಾತ ಹೇಳುತ್ತಾನೆ ಇವರು ದಶರಥ ರಾಯರ ಕಿರಿಯ ಪುತ್ರ ದೇವಾಂಶ. ಇವರು ಅಮೆರಿಕದಲ್ಲಿ ಇದ್ದರೂ, ಇವರು ಈ ಊರಿನ ಆಚಾರ ಪದ್ಧತಿಯನ್ನು ಇನ್ನೂ ಮರೆತಿಲ್ಲ ಎಂದೆಲ್ಲ ಹೇಳಬೇಕಾದರೆ, ವೈದೇಹಿ ಗರ ಬಡಿದವಳಂತೆ ನಿಂತು ಬಿಡುತ್ತಾಳೆ. ಇದೀಗ ಶ್ರೀಯಾ ನೋಡಲು ಬಂದ ಗಂಡು ತಾನು ಪ್ರೀತಿಸಿದವರು ಎಂದು ತಿಳಿದು ಶಾಕ್‌ಗೆ ಒಳಗಾಗುತ್ತಾಳೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Vaidehi Parinaya Serial 30th July Written Update, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X