Vaishnavi Gowda: ಹೊಸ ಆರಂಭಕ್ಕೆ ಚೀರ್ಸ್ ಎಂದ ಗುಳಿಕೆನ್ನೆಯ ಚೆಲುವೆ.. ಯಾಕೆ ಗೊತ್ತಾ?
'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿಗಾಗಿ ಎಂಟು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ವೈಷ್ಣವಿ ಗೌಡ ಇದೀಗ 'ಸೀತಾರಾಮ' ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ ಆಗಿದ್ದಾರೆ. ಸದ್ಯದಲ್ಲೇ ಧಾರಾವಾಹಿ ಶುರುವಾಗಲಿದ್ದು, ಈಗಾಗಲೇ ಹಲವು ತಿಂಗಳಿಂದ ಪ್ರೋಮೋ ಹಾಗು ಇತರ ವಿಡಿಯೋಗಳು ಬಿಡುಗಡೆಗೊಳ್ಳುವ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ.
ದೇವಿ ಹಾಗೂ ಅಗ್ನಿಸಾಕ್ಷಿ ಧಾರಾವಾಹಿಗಳಿಂದ ಕಿರುತೆರೆ ಪ್ರಿಯರ ಮನೆಮಗಳಂತಿರುವ ನಟಿ ವೈಷ್ಣವಿ ಗೌಡ ಅವರು ಇದೀಗ ಮತ್ತೆ ಧಾರಾವಾಹಿಗೆ ವಾಪಸ್ ಆಗುತ್ತಿರುವುದು ಎಲ್ಲಾ ಕಿರುತೆರೆ ಪ್ರೇಕ್ಷಕರಿಗೂ ಸಂತಸ ತಂದಿದೆ. ವಿಭಿನ್ನ ರೀತಿಯ ಕಥಾಹಂದರವನ್ನೊಳಗೊಂಡಿರುವ ಸೀತಾರಾಮ ಧಾರಾವಾಹಿಯನ್ನು ಕಿರುತೆರೆ ವೀಕ್ಷಕರು ಮೆಚ್ಚಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ವಿಚ್ಛೇದನ ನೀಡಿದ ಮಹಿಳೆ ಪಾತ್ರದಲ್ಲಿ ವೈಷ್ಣವಿ ಗೌಡ
ಈ ಸಂದರ್ಭದಲ್ಲಿ ತಮ್ಮ ಸಹನಟ ಗಗನ್ ಚಿನ್ನಪ್ಪ ಹಾಗೂ ಪುಟಾಣಿ ಕಲಾವಿದೆ ರಿತು ಸಿಂಗ್ ಅವರೊಂದಿಗಿನ ಫೋಟೋಗಳನ್ನು ನಟಿ ವೈಷ್ಣವಿ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಗಗನ್ ಚಿನ್ನಪ್ಪ ಹಾಗೂ ವೈಷ್ಣವಿಯ ಗೌಡ ಅವರು ಮೊದಲ ಬಾರಿಗೆ ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬ ಡೈವೋರ್ಸ್ಡ್ ಮಹಿಳೆಯ ಪಾತ್ರವನ್ನು ವೈಷ್ಣವಿಯವರು ನಿರ್ವಹಿಸಲಿದ್ದಾರೆ. ಜೊತೆಗೆ ಈ ಪಾತ್ರಕ್ಕೆ ನಾಲ್ಕು ವರ್ಷದ ಪುಟ್ಟ ಮಗಳು ಇದ್ದಾಳೆ.
ಈಗಾಗಲೇ ಶೂಟಿಂಗ್ ಶುರುವಾಗಿದ್ದು, ಶೂಟಿಂಗ್ ನ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ವೈಷ್ಣವಿ ಗೌಡ ಅವರು "ಚೀರ್ಸ್ ಟು ದಿ ಗುಡ್ ಟೈಮ್ಸ್, ಕಮಿಂಗ್ ಸೂನ್" ಎಂದು ಬರೆದುಕೊಳ್ಳುವ ಮೂಲಕ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಅಂದಹಾಗೆ, ನಟಿ ವೈಷ್ಣವಿ ಗೌಡ ಅವರು ಕೊನೆಯದಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯಲ್ಲಿ ಅತಿಥಿ ಪಾತ್ರವೊಂದನ್ನು ಮಾಡಿದ್ದರು. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಬಿಟ್ಟರೆ ಮತ್ತೆಲ್ಲೂ ಈಕೆ ಹೆಚ್ಚಾಗಿ ಸ್ಕ್ರೀನ್ ಅಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಪ್ರಮುಖ ಪಾತ್ರದ ಮೂಲಕ ಮನರಂಜಿಸಲು ಬರುತ್ತಿದ್ದು ಪ್ರೇಕ್ಷಕರಿಗಂತೂ ಬಹಳ ಖುಷಿಯಾಗಿದೆ.


Click it and Unblock the Notifications











