ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ ಸಂತಸದಲ್ಲಿ ನಟಿ ವೈಷ್ಣವಿ ಗೌಡ

ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಹೊಸ ಸಾಧನೆ ಮಾಡಿದ ಖುಷಿಯಲ್ಲಿದ್ದಾರೆ. ಬಿಗ್ ಬಾಸ್ ಮೂಲಕ ಮತ್ತಷ್ಟು ಪ್ರಸಿದ್ಧಿಗಳಿಸಿದ್ದ ನಟಿ ವೈಷ್ಣವಿ ಗೌಡ ಇದೀಗ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಅಭಿಮಾನಿಗಳು ಅಪಾರ ಪ್ರೀತಿ ಸುರಿಸುತ್ತಿರುವುದನ್ನು ನೋಡಿ ವೈಷ್ಣವಿ ಗೌಡ ಫುಲ್ ಖುಷ್ ಆಗಿದ್ದಾರೆ.

ಈ ಬಗ್ಗೆ ನಟಿ ವೈಷ್ಣವಿ ಗೌಡ ಇನ್ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ವಿಶೇಷ ಪೋಸ್ಟ್ ಶೇರ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ. ಕೈಯಲ್ಲಿ 1ಮಿಲಿಯನ್ ಸಿಂಬಲ್ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಜೊತೆಗೆ "ಹೌದು, ಒಂದು ಮಿಲಿಯನ್. ನನ್ನ ಕಡೆಯಿಂದ ಒಂದು ಮಿಲಿಯನ್ ಹಾರ್ಟ್. ನಿಮ್ಮ ಪ್ರೀತಿ ಬೆಂಬಲಕ್ಕೆ ಧನ್ಯವಾದಗಳು. ಯಾವಾಗಲು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ವೈಷ್ಣವಿ ಗೌಡ ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳು ಹರಿದುಬರುತ್ತಿವೆ. ಸಹ ಕಲಾವಿದರು, ಸ್ನೇಹಿತರು, ಅಭಿಮಾನಿಗಳು ಪ್ರತಿಯೊಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಬಿಗ್ ಬಾಸ್ ಸಹ ಸ್ಪರ್ಧಿಗಳು ಕಾಮಂಟ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ. ರಘು ಗೌಡ, ಗೀತಾ ಭಟ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿ ಹಾರ್ಟ್ ಇಮೋಜಿ ಕಳುಹಿಸಿದ್ದಾರೆ. ಇನ್ನು ವೈಷ್ಣವಿ ಗೌಡ ಅವರ ಬೆಸ್ಟ್ ಫ್ರೆಂಡ್ ಆಗಿರುವ ನಟಿ ಅಮೂಲ್ಯ ಕೂಡ ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Vaishnavi Gowda crosses 1 million followers on instagram, says thanks for fans

ನಟಿ ವೈಷ್ಣವಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಪ್ರಸಿದ್ಧಿಗಳಿಸಿದ್ದರು. ಆಗ್ನಿಸಾಕ್ಷಿಯಲ್ಲಿ ವೈಷ್ಣವಿ ಸನ್ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರದಲ್ಲಿ ಮಿಂಚಿದ್ದ ವೈಷ್ಣವಿಗೆ ಕಿರುತೆರೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ವೈಷ್ಣವಿ ಎನ್ನುವುದಕ್ಕಿಂತ ಸನ್ನಿಧಿ ಹೆಸರಿನ ಮೂಲಕವೇ ಖ್ಯಾತಿಗಳಿಸಿದ್ದಾರೆ. ಸುಮಾರು 6 ವರ್ಷಗಳ ಕಾಲ ಪ್ರೇಕ್ಷಕರು ಸನ್ನಿಧಿ ಪಾತ್ರವನ್ನು ಇಷ್ಟಪಟ್ಟಿದ್ದಾರೆ. ಬಳಿಕ ನಟ ಸೂರ್ಯ ಪಾತ್ರ ಕೊನೆಯಾದ ಬಳಿಕ ಅಗ್ನಿಸಾಕ್ಷಿ ಧಾರಾವಾಹಿ ನಿಲ್ಲಲಿದೆ, ಸನ್ನಿಧಿ ಪಾತ್ರ ಕೂಡ ಕೊನೆಯಾಗಲಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಧಾರಾವಾಹಿಯ ಕೊನೆಯವರೆಗು ವೈಷ್ಣವಿ ತನ್ನ ಪಾತ್ರವನ್ನು ನಿರ್ವಹಿಸಿದರು.

ಅಗ್ನಿಸಾಕ್ಷಿ ಧಾರಾವಾಹಿ ಬಳಿಕ ವೈಷ್ಣವಿ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. ಬಳಿಕ ಬಿಗ್ ಬಾಸ್ 8ರಲ್ಲಿ ಸ್ಪರ್ಧಿಯಾಗಿ ಬಿಗ್ ಮನೆ ಪ್ರವೇಶ ಮಾಡಿದರು. ಬಿಗ್ ಬಾಸ್ ನಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಕೋಟ್ಯಂತರ ಕನ್ನಡಿಗರ ಮನಗೆದ್ದರು. ಅಂತಿಮ ಐದು ಸ್ಪರ್ಧಿಗಳಲ್ಲಿ ವೈಷ್ಣವಿ ಕೂಡ ಒಬ್ಬರಾಗಿದ್ದರು. ಕೊನೆಯವರೆಗೂ ಅಭಿಮಾನಿಗಳನ್ನು ರಂಜಿಸಿ ಮತ್ತಷ್ಟು ಪ್ರಸಿದ್ಧಿಗಳಿಸಿದರು.

ಸದ್ಯ ವೈಷ್ಣವಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ ಸಂತಸವನ್ನು ಸಂಭ್ರಮಿಸುತ್ತಿದ್ದಾರೆ. ಅಂದಹಾಗೆ ವೈಷ್ಣವಿ ಮುಂದಿನ ನಡೆ ಯಾವುದು, ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.

More from Filmibeat

English summary
Actress Vaishnavi Gowda crosses 1 million followers on instagram, says thanks for fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X