ಸೀತಾ ರಾಮ ನಟಿ ವೈಷ್ಣವಿ ಗೌಡ ಅವರ ಸೌಂದರ್ಯದ ಗುಟ್ಟೇನು ಗೊತ್ತಾ..?

By ಪ್ರಿಯಾ ದೊರೆ

ಧಾರಾವಾಹಿ ಮೂಲಕ ಅಭಿನಯ ಆರಂಭಿಸಿದ ನಟಿ ವೈಷ್ಣವಿಗೌಡ ಅವರು ಕಾಲೇಜು ದಿನಗಳಲ್ಲೇ ಬಣ್ಣದ ಲೋಕದ ನಂಟನ್ನು ಹೊಂದಿದ್ದರು. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ನಟನೆ ಆರಂಭಿಸಿದ ವೈಷ್ಣವಿ ಗೌಡ ಅವರು ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿಯಾಗಿಯೇ ಉಳಿದುಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಸೀತಾರಾಮ ಧಾರಾವಾಹಿಯಲ್ಲಿನ ತಮ್ಮ ಪಾತ್ರದಿಂದಲೇ ಇನ್ನಷ್ಟು ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.

ಸನ್ನಿಧಿಗಿದ್ದಾರೆ 1.4 ಮಿಲಿಯನ್ ಫಾಲೋವರ್ಸ್

ಅಗ್ನಿಸಾಕ್ಷಿ ಸನ್ನಿಧಿ ಎಂದೇ ಚಿರಪರಿಚಿತರಾದ ವೈಷ್ಣವಿ ಗೌಡ ಅವರು ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಾರೆ. ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಕಾರಣದಿಂದಾಗಿ ವೈಷ್ಣವಿ ಗೌಡ ಅವರಿಗೆ ಇನ್ ಸ್ಟಾಗ್ರಾಂನಲ್ಲಿ 1.4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುವ ವೈಷ್ಣವಿ ಗೌಡ ಅವರು, ಐಕಾನಿಕ್ ಲುಕ್ ಗಳನ್ನು ರಿಕ್ರಿಯೇಟ್ ಮಾಡುವುದು, ಹೊಸ ಹೊಸ ಲುಕ್ ನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವುದು, ಧಾರಾವಾಹಿ ಸೆಟ್ ನಲ್ಲಿ ಟ್ರೆಂಡಿಂಗ್ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಅಭಿಮಾನಿಗಳಿಗೆ ಇಷ್ಟವಾಗುವಂತೆ ಇನ್ ಸ್ಟಾಗ್ರಾಂನಲ್ಲಿ ಆಗಾಗ ಕೆಲ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.

vaishnavi gowda on her seetha charater and lifestyle

ಸಮಯ ವ್ಯರ್ಥ ಮಾಡದ ನಟಿ

ಬಹುಮುಖ ಪ್ರತಿಭೆಯಾಗಿರುವ ವೈಷ್ಣವಿ ಗೌಡ ಅವರು, ಭರತನಾಟ್ಯಾಂ, ಕೂಚಿಪೂಡಿ, ಬೆಲ್ಲಿ ಡ್ಯಾನ್ಸ್ ನ ಕರಗತ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಹಾಡು ಹೇಳುತ್ತಾರೆ, ಯೋಗ ಮಾಡುತ್ತಾರೆ. ಸುಮ್ಮನೆ ಸಮಯ ಹಾಳು ಮಾಡಲು ಬಯಸದ ವೈಷ್ಣವಿ, ಏನಾದರೂ ಒಂದು ಮಾಡುತ್ತಲೇ ಇರುತ್ತಾರೆ. ಶೂಟಿಂಗ್ ಇಲ್ಲ ಎಂದರೆ, ಹೊಸ ಹೊಸ ಜಾಗಗಳಿಗೆ ಭೇಟಿ ಕೊಡುತ್ತಾರೆ. ಅಲ್ಲಿನ ಆಹಾರ ಸವಿದು ಯೂಟ್ಯೂಬ್ ನಲ್ಲಿ ಹಾಕುತ್ತಾರೆ. ಮೇಕಪ್, ಸ್ಟೈಲಿಶ್ ಲುಕ್, ಹೀಗೆ ಏನಾದರೂ ಒಂದರ ವಿಡಿಯೋ ಮಾಡುತ್ತಿರುತ್ತಾರೆ. ಈಗಾಗಲೇ ವೈಷ್ಣವಿ ಅವರ ಯೂಟ್ಯೂಬ್ ಸಬ್ ಸ್ಕ್ರೈಬರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ. 300.848 ಸಬ್ ಸ್ಕ್ರೈಬರ್ಸ್ ಆಗಿದ್ದು, ಇದು ಇನ್ನೂ ಹೆಚ್ಚಾಗಲಿ ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವೈಷ್ಣವಿ ಅವರು ಹಂಚಿಕೊಂಡಿದ್ದಾರೆ.

ಸಿನಿಮಾ, ಧಾರಾವಾಹಿ ಎರಡರಲ್ಲೂ ಬ್ಯುಸಿ

ಬಹುಕೃತ ವೇಷಂ ಸಿನಿಮಾದಲ್ಲಿ ನಟಿಸಿರುವ ವೈಷ್ಣವಿ ಅವರು ಮತ್ತೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾರಾಮ ಧಾರಾವಾಹಿಯಲ್ಲಿ ಪುಟ್ಟ ಮಗುವಿನ ತಾಯಿ ಪಾತ್ರವನ್ನು ನಿರ್ವಹಿಸುತ್ತಿರುವ ವೈಷ್ಣವಿ ಅವರಿಗೆ ಖುಷಿ ಇದೆ. ಸಾಕಷ್ಟು ಚಾಲೆಂಜ್ ಗಳಿರುವ ಪಾತ್ರ ಇದಾಗಿದ್ದು, ಸಿಹಿ ಹೇಗೆ ಸೀತಾಳ ಮಗಳು, ಸೀತಾಳ ಹಿಂದಿನ ಕಥೆ ಏನು, ಮುಂದಿನ ದಿನಗಳಲ್ಲಿ ಸೀತಾ ಬಾಳಲಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದು ಬಹಳ ಕುತೂಹಲಕಾರಿಯಾಗಿದ್ದು, ವೈಷ್ಣವಿ ಅವರು ಈ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಮೂಲಕವೇ ವೈಷ್ಣವಿ ಅವರು ಫುಲ್ ಫೇಮಸ್ ಆಗಿದ್ದರು. ಈಗ ಸೀತಾ ಪಾತ್ರದ ಮೂಲಕ ಜನರ ಮನಸ್ಸಲ್ಲಿ ಇನ್ನಷ್ಟು ಜಾಗ ಪಡೆಯುವ ಪ್ರಯತ್ನ ಮಾಡಿದ್ದಾರೆ.

vaishnavi gowda on her seetha charater and lifestyle

ಆರೋಗ್ಯ ಕಾಪಾಡಿಕೊಳ್ಳಲು ವೈಷ್ಣವಿ ಟಿಪ್ಸ್

ಬಿಗ್ ಬಾಸ್ 8ರಲ್ಲಿ ಭಾಗವಹಿಸಿದ್ದ ವೈಷ್ಣವಿ ಅವರು ಫಿಟ್ನೆಸ್ ಫ್ರೀಕ್ ಎನ್ನುವುದಕ್ಕಿಂತಲೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಸಿನಿಮಾ ಹಾಗೂ ಧಾರಾವಾಹಿ ಎರಡೂ ಕಡೆಯೂ ಕೆಲಸ ಮಾಡುತ್ತಿರುವ ವೈಷ್ಣವಿ ಅವರು, ಆದಷ್ಟು ಮನೆಯ ಊಟವನ್ನೇ ಸವಿಯಲು ಇಷ್ಟಪಡುತ್ತಾರೆ. ಹೊರಗಡೆ ಊಟ ಆರೋಗ್ಯಕ್ಕೆ ಒಳ್ಳೆಯದಲ್ಲ. ಮನೆಯ ಊಟ ಮಾಡುವುದು ದೇಹಕ್ಕೆ ಒಳ್ಳೆಯದು. ಸಮಯ ಸಿಕ್ಕಾಗ ವಾಕಿಂಗ್ ಮಾಡಬೇಕು. ಮೆಡಿಟೇಷನ್ ಹಾಗೂ ಯೋಗ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

More from Filmibeat

English summary
seetharama serial actress vaishnavi gowda lifestyle details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X