ಮದುವೆ ನಂತರ ಕಿರುತೆರೆಗೆ ಮರಳಿದ ಸನ್ನಿಧಿ ; ಗೆಳತಿ ಗಾಯತ್ರಿಯನ್ನು ಹುಡುಕಲು ಮುಂದಾದ ವೈಷ್ಣವಿ ಗೌಡ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಸಾಮಾನ್ಯವಾಗಿ ಮದುವೆಯ ನಂತರ ನಾಯಕಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ದರು ಕೂಡ ಮದುವೆಯಾದ ನಂತರ ಹೊಸ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಮಗ್ನರಾಗಿ ಬಿಡುತ್ತಾರೆ.

ಆದರೆ, ಇದಕ್ಕೆ ಅಪವಾದ ಎಂಬಂತೆ ಅಲ್ಲೊಬ್ಬರು.. ಇಲ್ಲೊಬ್ಬರು.. ಮದುವೆಯ ನಂತರವೂ ಮರಳಿ ಬರುತ್ತಾರೆ‌‌. ಹೊಸ ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪೈಸ್ ನೀಡುತ್ತಾರೆ. ಉದಾಹರಣೆಗೆ ವೈಷ್ಣವಿ ಗೌಡ.

vaishnavi-gowda-returns-to-kannada-tv-as-parvathi-in-udaya-tvs-gelathi-gayathri

ಹೌದು. ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ತಮ್ಮ ಅಭಿನಯದಿಂದ ಕನ್ನಡಿಗರ ಮನೆ ಮತ್ತು ಮನವನ್ನ ತಲುಪಿದ ವೈಷ್ಣವಿ ಗೌಡ ಭರ್ಜರಿ ಕಾಮಿಡಿ ಎಂಬ ಕಾರ್ಯಕ್ರಮದ ನಿರೂಪಕಿಯೂ ಹೌದು.

''ಬಿಗ್ ಬಾಸ್‌''ನ ಮಾಜಿ ಸ್ಫರ್ಧಿಯೂ ಹೌದು. ಕಿರುತೆರೆಯಿಂದ ಹಿರಿತೆರೆಗೆ ತೆರಳಿ ಆ ನಂತರ ಮತ್ತೆ ಮರಳಿ ಕಿರುತೆರೆಗೆ ಬಂದ ವೈಷ್ಣವಿ ಗೌಡ ಕಳೆದ ವರ್ಷ ಅನುಕೂಲ್ ಮಿಶ್ರಾ ಅವರ ಜೊತೆ ಸಪ್ತಪದಿ ತುಳಿದಿದ್ದರು. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು.

ಇನ್ನೂ ಅನುಕೂಲ್ ಮಿಶ್ರಾ ಇಲ್ಲಿಯವರಲ್ಲ. ಉತ್ತರ ಭಾರತದ ಛತ್ತಿಸ್​ಗಡದವರು. ಹೀಗಾಗಿ ವೈಷ್ಣವಿ ಗೌಡ ಮತ್ತೆ ಕಿರುತೆರೆಗೆ ಮರಳುವುದು ಅನುಮಾನ ಎಂದೇ ಹಲವರು ಅಂದುಕೊಂಡಿದ್ದರು.

ಆದರೆ. ಹಲವರ ಈ ಲೆಕ್ಕಾಚಾರ ತಲೆಕೆಳಗಾಗಿದ್ದು ವೈಷ್ಣವಿ ಗೌಡ ಸದ್ಯ ಕಿರುತೆರೆಯಲ್ಲಿ ತಮ್ಮ ಮೂರನೇ ಇನಿಂಗ್ಸ್ ಶುರು ಮಾಡಲು ಅಣಿಯಾಗಿದ್ದಾರೆ. ಕಿರುತೆರೆಗೆ ಮರಳಿದ್ದಾರೆ. ಆದರೆ ಫಾರ್ ಎ ಚೇಂಜ್ ಈ ಬಾರಿ ನೀವು
ವೈಷ್ಣವಿ ಅವರನ್ನು ಜೀ ಅಥವಾ ಕಲರ್ಸ್ ನಲ್ಲಿ ನೋಡಲು ಸಾಧ್ಯ ಇಲ್ಲ. ಯಾಕೆಂದರೆ ಈ ಬಾರಿ ಇವರು ನಿಮಗೆ ಸನ್ ಉದಯ ಟಿವಿಯಲ್ಲಿ ದರ್ಶನ ನೀಡಲಿದ್ದಾರೆ

English summary
After a brief hiatus post-marriage, Vaishnavi Gowda returns to the fiction space with Gelathi Gayathri on Udaya TV. Discover her new character Parvathi and her emotional search for her childhood friend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X