ಸೀತಾರಾಮದ ವೈಷ್ಣವಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..! ಸೀತಮ್ಮ ಮಾಡಿದ ತಪ್ಪೇನು..?
ಸೆಲೆಬ್ರಿಟಿಗಳು ಏನೇ ಮಾಡಿದರೂ ಅಭಿಮಾನಿಗಳು ಸಾಮಾನ್ಯವಾಗಿ ಅದನ್ನು ಅನುಸರಿಸುತ್ತಾರೆ. ಅವರ ಸ್ಟೈಲ್, ಆಟಿಟ್ಯೂಡ್ ಇತ್ಯಾದಿಗಳು ಅಭಿಮಾನಿಗಳದ್ದೂ ಆಗಿಬಿಡುತ್ತವೆ. ಈ ಕಾರಣಕ್ಕೆ ಅನೇಕರು ಅಳೆದು ತೂಗಿ ಹೆಜ್ಜೆ ಇಡ್ತಾರೆ. ತಮ್ಮಿಂದ ತಪ್ಪು ಆಗಬಾರದು ಎಂದು ತಲೆಯಲ್ಲಿಟ್ಟುಕೊಂಡು ಕೆಲಸ ಮಾಡ್ತಾರೆ. ಸಮಾಜಕ್ಕೆ ತಪ್ಪು ಸಂದೇಶ ನೀಡಬಾರದು ಎಂಬ ನಿಟ್ಟಿನಲ್ಲಿ ಮೈಯೆಲ್ಲ ಕಣ್ಣಾಗಿಸಿಕೊಂಡು ಕೆಲಸ ಮಾಡ್ತಾರೆ. ಆದರೂ ಕೆಲವೊಮ್ಮೆ ತಪ್ಪು ನಡೆದು ಬಿಡುತ್ತೆ. ಇದಕ್ಕೆ ವೈಷ್ಣವಿ ಗೌಡ ಅತ್ಯುತ್ತಮ ಉದಾಹರಣೆ
ಹೌದು, ತಮ್ಮ ಒರಿಜಿನಲ್ ಹೆಸರನ್ನೇ ಮರೆಯಾಗಿಸುವಂತೆ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದೇ ಖ್ಯಾತಿಯನ್ನ ಗಳಿಸಿದವರು ವೈಷ್ಣವಿ ಗೌಡ. ಅಗ್ನಿ ಸಾಕ್ಷಿ ನಂತರ ಸೀತಾ ರಾಮ ಮೂಲಕ ಮತ್ತೊಮ್ಮೆ ಮೋಡಿ ಮಾಡ್ತಿರುವ ವೈಷ್ಣವಿ ಅವರಿಂದ ಬೆಂಗಳೂರಿನ ಟ್ರಾಫಿಕ್ ಪೊಲೀಸರು ದಂಡ ಹಾಕಿ ವಸೂಲಿ ಮಾಡಿದ್ದಾರೆ.

ಹೌದು, ಅಸಲಿಗೆ ಸೀತಾ ರಾಮ ಧಾರಾವಾಹಿ ನೀವು ನೋಡ್ತಿದ್ದರೆ, ವೈಷ್ಣವಿ ಗೌಡ ಅಲಿಯಾಸ್ ಸೀತಾ ತಮ್ಮ ಸ್ನೇಹಿತೆ ಸ್ಕೂಟರ್ನಲ್ಲಿ ಪ್ರಯಾಣ ಮಾಡಿದ್ದನ್ನ ನೀವು ಗಮನಿಸಿರಬಹುದು. ಇದೇ ಸನ್ನಿವೇಶ ವಿರುದ್ದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದರು. ಸೀತಾ ರಾಮ ಸೀರಿಯಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಸಮಾಜಕ್ಕೆ ಇದರಿಂದ ತಪ್ಪು ಸಂದೇಶ ರವಾನೆಯಾಗಲಿದೆ. ಈ ಕೂಡಲೇ ಆ ನಟಿಯ ಮೇಲೆ, ಸೀರಿಯಲ್ ನಿರ್ದೇಶಕ ಮತ್ತು ವಾಹಿನಿ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ನಮೂದಿಸಿದ್ದರು ಜಯಪ್ರಕಾಶ್.
ಜಯಪ್ರಕಾಶ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಈ ಕೇಸ್ ವರ್ಗಾವಣೆಯಾಗಿತ್ತು. ಅಲ್ಲಿಂದ ವಾಹಿನಿ ಮತ್ತು ನಟಿಗೆ ನೋಟಿಸ್ ರವಾನಿಸಲಾಗಿತ್ತು. ಜತೆಗೆ ಈ ಸೀರಿಯಲ್ ಶೂಟಿಂಗ್ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಆ ಭಾಗದ ರಾಜಾಜಿನಗರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ದೂರು ದಾಖಲಿಸಿ ವಾಹನ ಮಾಲೀಕರಾದ ಸವಿತಾ ಎಂಬುವವರಿಗೆ ಮೇ 10ರಂದು 500 ರೂಪಾಯಿ ದಂಡ ವಿಧಿಸಲಾಗಿತ್ತು. ನಟಿ ವೈಷ್ಣವಿ ಅವರಿಂದಲೂ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.


Click it and Unblock the Notifications











