'ಕಲರ್ಸ್ ಕನ್ನಡ'ದಿಂದ 'ಸ್ಟಾರ್ ಸುವರ್ಣ'ಗೆ ಜಿಗಿದ 'ಅಗ್ನಿಸಾಕ್ಷಿ' ಸನ್ನಿಧಿ!

By Naveen

Recommended Video

ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಈಗ ನಿರೂಪಕಿ | Filmibeat Kannada

ಕನ್ನಡ ಕಿರುತೆರೆಯಲ್ಲಿ ಸದ್ಯ ಪ್ರಸಾರ ಆಗುತ್ತಿರುವ ಧಾರಾವಾಹಿಗಳ ಪೈಕಿ ದೊಡ್ಡ ಜನಪ್ರಿಯತೆ ಗಳಿಸಿರುವ ಸೀರಿಯಲ್ 'ಅಗ್ನಿಸಾಕ್ಷಿ'. ಈ ಧಾರಾವಾಹಿಯಲ್ಲಿ ಹೈಲೆಟ್ ಅಂದರೆ ನಾಯಕಿ ಪಾತ್ರದ ಸನ್ನಿಧಿ ಪಾತ್ರ. ಇನ್ನು ಸನ್ನಿಧಿ ಪಾತ್ರವನ್ನು ನಿರ್ವಹಿಸಿರುವುದು ನಟಿ ವೈಷ್ಣವಿ ಗೌಡ.

ಇಷ್ಟು ದಿನ ಬರಿ 'ಕಲರ್ಸ್ ಕನ್ನಡ' ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವೈಷ್ಣವಿ ಗೌಡ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿಯೂ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ಸಿನಿಮಾ ನಟಿಯರ ಮಟ್ಟಿಗೆ ಜನಪ್ರಿಯತೆ ಗಳಿಸಿದ ವೈಷ್ಣವಿ ಈಗ 'ಕಲರ್ಸ್ ಕನ್ನಡ'ದಿಂದ 'ಸ್ಟಾರ್ ಸುವರ್ಣ' ವಾಹಿನಿಗೆ ಬಂದಿದ್ದಾರೆ. ಹಾಗಂತ ಅವರು 'ಸ್ಟಾರ್ ಸುವರ್ಣ' ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ನಿರೂಪಕಿ ಆಗಿದ್ದಾರೆ. ಹೌದು, ಇಷ್ಟು ದಿನ ನಟಿ ಆಗಿ ಟಿವಿ ತೆರೆ ಮೇಲೆ ಕಾಣಿಸಿಕೊಂಡಿದ್ದ ವೈಷ್ಣವಿ ಈಗ ಹೊಸ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ನಿರೂಪಕಿ ಆಗಿದ್ದಾರೆ. ಮುಂದೆ ಓದಿ...

'ಭರ್ಜರಿ ಕಾಮಿಡಿ' ಶೋ

'ಭರ್ಜರಿ ಕಾಮಿಡಿ' ಶೋ

ಸ್ಟಾರ್ ಸುವರ್ಣ ವಾಹಿನಿಯ ಹೊಸ ಕಾಮಿಡಿ ರಿಯಾಲಿಟಿ ಶೋ 'ಭರ್ಜರಿ ಕಾಮಿಡಿ' ಕಾರ್ಯಕ್ರಮಕ್ಕೆ ನಟಿ ವೈಷ್ಣವಿ ಗೌಡ ನಿರೂಪಕಿ ಆಗಿದ್ದಾರೆ.

ಪ್ರೋಮೋ ಬಿಡುಗಡೆ

ಪ್ರೋಮೋ ಬಿಡುಗಡೆ

ಸದ್ಯ 'ಭರ್ಜರಿ ಕಾಮಿಡಿ' ಕಾರ್ಯಕ್ರಮದ ಹೊಸ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಕಾರ್ಯಕ್ರಮದ ನಿರೂಪಕಿ ಯಾರು ಎಂಬ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ವೈಷ್ಣವಿ ನಿರೂಪಣೆ

ವೈಷ್ಣವಿ ನಿರೂಪಣೆ

ವಿಶೇಷ ಅಂದರೆ 'ಕಲರ್ಸ್ ಕನ್ನಡ' ವಾಹಿನಿಯ 'ಕಾಮಿಡಿ ಟಾಕೀಸ್' ಕಾರ್ಯಕ್ರಮಕ್ಕೆ ಸಹ ವೈಷ್ಣವಿ ನಿರೂಪಕಿ ಆಗಿದ್ದರು. ಆ ಕಾರ್ಯಕ್ರಮದ ಪ್ರಾರಂಭಿಕ ಸಂಚಿಕೆಯಲ್ಲಿ ವಿಜಯ್ ಸೂರ್ಯ ಜೊತೆ ವೈಷ್ಣವಿ ಕೂಡ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಮೂವರು ತೀರ್ಪುಗಾರರು

ಮೂವರು ತೀರ್ಪುಗಾರರು

'ಭರ್ಜರಿ ಕಾಮಿಡಿ' ಕಾರ್ಯಕ್ರಮದಲ್ಲಿ ಮೂರು ಜನ ತೀರ್ಪುಗಾರರು ಇದ್ದಾರೆ. ನಟಿ ರಾಗಿಣಿ ದ್ವಿವೇದಿ, ದೊಡ್ಡಣ್ಣ ಮತ್ತು ನಿರ್ದೇಶಕ ಗುರುಪ್ರಸಾದ್ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಇನ್ನು ಗುರುಪ್ರಸಾದ್ ಈ ಹಿಂದೆಯೂ ಕೆಲ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿದ್ದರು.

ರಾಗಿಣಿ - ದೊಡ್ಡಣ್ಣ

ರಾಗಿಣಿ - ದೊಡ್ಡಣ್ಣ

ಈ ಕಾರ್ಯಕ್ರಮದ ಮೂಲಕ ಫಸ್ಟ್ ಟೈಂ ನಟಿ ರಾಗಿಣಿ ಮತ್ತು ದೊಡ್ಡಣ್ಣ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

ಡಿಸೆಂಬರ್ 23ರಿಂದ

ಡಿಸೆಂಬರ್ 23ರಿಂದ

'ಭರ್ಜರಿ ಕಾಮಿಡಿ' ಕಾರ್ಯಕ್ರಮ ಡಿಸೆಂಬರ್ 23ರಿಂದ ಅಂದರೆ ಇದೇ ಶನಿವಾರ ದಿಂದ ಶುರುವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

More from Filmibeat

English summary
Kannada serial 'Agnisakshi' actress Vaishnavi Gowda will host 'Star Suvarna's new reality show 'Bharjari Comedy'. And Kannada actress Ragini Dwivedi, Doddanna and Guru Prasad will be judges of this show, starting from 23 Dec 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X