»   » ಡ್ರಾಮಾ ಜೂನಿಯರ್ಸ್-2 ಗೆದ್ದ 'ಜೂನಿಯರ್ ಲಕ್ಷ್ಮಿ' ಮತ್ತು ಅಮಿತ್

ಡ್ರಾಮಾ ಜೂನಿಯರ್ಸ್-2 ಗೆದ್ದ 'ಜೂನಿಯರ್ ಲಕ್ಷ್ಮಿ' ಮತ್ತು ಅಮಿತ್

Posted By:
Subscribe to Filmibeat Kannada

ಜೀ-ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜೂನಿಯರ್ಸ್- 2'ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಗಿದಿದೆ. ಅಂತಿಮ ಘಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಸ್ಪರ್ಧೆಯಲ್ಲಿ ಇಬ್ಬರು ವಿನ್ನರ್ ಗಳಾಗಿ ಹೊರಹೊಮ್ಮಿದ್ದಾರೆ.

ಮಂಗಳೂರಿನ ಪ್ರತಿಭೆ ವಂಶಿ ಮತ್ತು ಮೈಸೂರಿನ ಬಾಲಕ ಅಮಿತ್ ಸೀಸನ್ 2ರ ವಿನ್ನರ್ ಅಗಿದ್ದು ಇಬ್ಬರಿಗೂ ಭಾರಿ ಮೊತ್ತದ ನಗದು ಬಹುಮಾನ ಸಿಕ್ಕಿದೆ.

ಜೀ ಕನ್ನಡದ 'ಡ್ರಾಮಾ ಜೂನಿಯರ್ಸ್ 2' ನಲ್ಲಿ ಗೆಲ್ಲುವವರು ಯಾರು?

ಹಾಗಿದ್ರೆ, 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿಗಳಿಗೆ ಸಿಕ್ಕ ಬಹುಮಾನವೇನು? ರನ್ನರ್ ಅಪ್ ಆಗಿದ್ದು ಯಾರು ಮತ್ತು ಅವರಿಗೆ ಸಿಕ್ಕ ಮೊತ್ತವೆಷ್ಟು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಮಂಗಳೂರಿನ ವಂಶಿ ವಿನ್ನರ್

ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಜೂನಿಯರ್ ಲಕ್ಷ್ಮಿ ಎಂದೇ ಗುರುತಿಸಿಕೊಂಡಿದ್ದ ಮಂಗಳೂರು ಪ್ರತಿಭೆ ವಂಶಿ ಎರಡನೇ ಆವೃತ್ತಿಯ ವಿನ್ನರ್ ಆಗಿ ಹೊರಹೊಮ್ಮಿದ್ದು, ಜೀ ಕನ್ನಡ ವಾಹಿನಿಯಿಂದ 4 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ.

'ಡ್ರಾಮಾ ಜೂನಿಯರ್ಸ್' ಸ್ಪರ್ಧಿ 'ವಂಶಿ'ಯ ಅಭಿನಯ ಯಾನ

ಜಂಟಿ ವಿನ್ನರ್ ಆದ ಅಮಿತ್

ಈ ಬಾರಿಯ ಫಲಿತಾಂಶದಲ್ಲಿ ಜಂಟಿ ಜಯಶಾಲಿಗಳು ಎಂದು ಘೋಷಿಸಿದ್ದು, ಬಾಲಕಿಯರಲ್ಲಿ ವಂಶಿ ಹಾಗೂ ಬಾಲಕರಲ್ಲಿ ಮೈಸೂರಿನ ಅಮಿತ್ ವಿನ್ನರ್ ಆಗಿದ್ದಾರೆ. ಅಮಿತ್ ಗೂ ಕೂಡ 4 ಲಕ್ಷ ನಗದು ಬಹುಮಾನ ಸಿಕ್ಕಿದೆ.

ಮೊದಲ ರನ್ನರ್ ಅಪ್

ಇನ್ನು 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ಸುಮಿತ್ ಮೊದಲನೇ ರನ್ನರ್ ಅಪ್ ಆಗಿದ್ದಾರೆ. ಸುಮಿತ್ ಗೆ ಜೀ ಕನ್ನಡ ವಾಹಿನಿ ಕಡೆಯಿಂದ 2 ಲಕ್ಷ ನಗದು ಬಹುಮಾನ ಸಿಕ್ಕಿದೆ.

ಎರಡನೇ ರನ್ನರ್ ಅಪ್

ಡ್ರಾಮಾ ಜೂನಿಯರ್ಸ್-2ನೇ ಆವೃತ್ತಿಯಲ್ಲಿ ಶ್ರಾವ್ಯ ಎರಡನೇ ರನ್ನರ್ ಆಪ್ ಆಗಿದ್ದಾರೆ. ಸೆಕೆಂಡ್ ರನ್ನರ್ ಅಪ್ ಶ್ರಾವ್ಯಗೆ ಜೀ ಕನ್ನಡದ ವತಿಯಿಂದ 1 ಲಕ್ಷ ನಗದು ಬಹುಮಾನ ಪಡೆದುಕೊಂಡರು.

English summary
Mangalore based vamsi and mysore based amit has won the Drama juniors session 2. each winners get 4 lakh cash prize from zee kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X