ಮಗು ವಿಚಾರಕ್ಕೆ ಸಂಸಾರದಲ್ಲಿ ಬಿರುಕು, ಡಿವೋರ್ಸ್ ಪಡೆಯಲು ಮುಂದಾದ ಖ್ಯಾತ ಜೋಡಿ..!
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇದಕ್ಕೆ ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ಸದ್ಯದ ಮತ್ತೊಂದು ಉದಾಹರಣೆ.
ಹೌದು, ಅಮನ್ ವರ್ಮಾ, ಕಿರುತೆರೆಯ ಪ್ರೇಕ್ಷಕರಿಗೆ ತುಂಬಾನೇ ಚಿರಪರಿಚಿತ ವ್ಯಕ್ತಿ. ರಿಶ್ತೆ, ಸಿಐಡಿ, ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ, ಹೀಗೆ ಹತ್ತು ಹಲವು ಧಾರಾವಾಹಿ ಮೂಲಕ ಜನ ಮನ ಗೆದ್ದವರು ಇವರು. ಕೇವಲ ಕಿರುತೆರೆ ಮಾತ್ರವಲ್ಲ ಬಾಗ್ಭನ್, ವ್ಹಾ ಲೈಫ್ ಹೋ ತೋ ಐಸಿ ಸೇರಿ ಅನೇಕ ಚಿತ್ರಗಳ ಮೂಲಕ ಬೆಳ್ಳಿ ತೆರೆಯಲ್ಲಿ ಮೋಡಿ ಮಾಡಿದವರು ಅಮನ್ ವರ್ಮಾ.

ಇಂಥಾ ಅಮನ್ ವರ್ಮಾ ಸರಿಯಾಗಿ ಹತ್ತು ವರ್ಷಗಳ ಹಿಂದೆ ವಂದನಾ ಲಾಲ್ವಾನಿ ಜೊತೆ ಸಪ್ತಪದಿ ತುಳಿದಿದ್ದರು. ಪರಸ್ಪರ ಮೆಚ್ಚಿ ಇಬ್ಬರು ಮದ್ವೆಯಾಗಿದ್ದರು. ವಂದನಾ ಅವರದ್ದು ಕೂಡ ಸೀರಿಯಲ್ ಪ್ರಪಂಚದಲ್ಲಿ ಪ್ರಖ್ಯಾತ ಹೆಸರು. ಇಂಡಿಯಾವಲಿ ಮಾ, ಬುದ್ದ, ರಾಜೋಂ ಕಾ ರಾಜ, ಬಾಂಬೆ ಹೀಗೆ ಅನೇಕ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ವಂದನಾ 2014ರಲ್ಲಿ ಅಮನ್ ವರ್ಮಾ ಅವರನ್ನು ಹಮ್ನೆ ಲಿ ಹೈ ಶಪಥ್ ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾಗಿದ್ದರು. ಆ ನಂತರ 2015ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2016ರ ಡಿಸೆಂಬರ್‌ನಲ್ಲಿ ಮದುವೆಯೂ ಆದರು. ಆದರೆ ಈಗ ಇವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆ ಪ್ರಕಾರ ಇಬ್ಬರ ನಡುವೆ ಮಗು ಮಾಡಿಕೊಳ್ಳುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿಯೇ ಅಮನ್ ವರ್ಮಾ ಅವರಿಂದ ದೂರವಾಗುವ ನಿರ್ಧಾರಕ್ಕೆ ಬಂದಿರುವ ವಂದನಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ತಮ್ಮ ನಡುವಿನ ಭಿನ್ನಾಭಿಪ್ರಾಯ ದೂರ ಮಾಡಲು ಹಲವು ಬಾರಿ ಪ್ರಯತ್ನವನ್ನು ಮಾಡಿದ್ದರು ಕೂಡ ಸಾಧ್ಯವಾಗಲಿಲ್ಲ. ರಾಜಿ ಮಾಡಿಕೊಳ್ಳಲಾಗದ ಹಂತಕ್ಕೆ ಈಗ ವಿಚಾರ ತಲುಪಿದ್ದು ವಿಚ್ಛೇದನ ಪಡೆಯುವುದೊಂದೇ ಅಂತಿಮ ದಾರಿಯೆಂದು ಇಬ್ಬರು ನಿರ್ಧರಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಅಮನ್ ವರ್ಮಾ ಸದ್ಯ ನಾನೇನು ಮಾತನಾಡುವುದಿಲ್ಲ. ನಾನೇನೇ ಮಾತನಾಡಿದರೂ ವಕೀಲರ ಮೂಲಕವೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನು ವಂದನಾ ಕೂಡ ಈ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲು ನಿರಾಕರಿಸಿದ್ದಾರೆ.
ಇನ್ನುಳಿದಂತೆ ಟೈಮ್ಸ್ ಆಫ್ ಇಂಡಿಯಾಗೆ ಮೂರು ವರ್ಷದ ಹಿಂದೆ ಸಂದರ್ಶನ ನೀಡಿದ್ದ ಅಮನ್ ವರ್ಮಾ, ವಂದನಾ ಜೊತೆ ನಾನು ತುಂಬಾನೇ ಸುಖಿಯಾಗಿದ್ದೇನೆ ಎಂದು ಹೇಳಿದ್ದರು. ಮದ್ವೆಯಾಗಿ ಆರು ವರ್ಷಗಳಾಗಿವೆ ಒಂದು ದಿನವೂ ನಮ್ಮಿಬ್ಬರ ನಡುವೆ ಸಮಸ್ಯೆಯಾಗಿಲ್ಲ ಎಂದು ಮಾತನಾಡಿದ್ದರು. ಇನ್ನು ಮಗು ವಿಚಾರಕ್ಕೆ ಈ ಸಂದರ್ಶನದಲ್ಲಿ ಮಾತನಾಡಿದ್ದ ಅಮನ್ ವರ್ಮಾ ನನಗೆ ಹೋದಲ್ಲಿ ಬಂದಲ್ಲಿ ಅನೇಕರು ಈ ವಿಚಾರವನ್ನು ಕೇಳುತ್ತಲೇ ಇರುತ್ತಾರೆ. ಇನ್ನು ಕೆಲವರು ಎಲ್ಲ ಕೆಲಸ ಬದಿಗಿಟ್ಟು ಮೊದಲು ಮಕ್ಕಳು ಮಾಡ್ಕೋ ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ, ಆದರೆ ಎಲ್ಲದಕ್ಕೂ ಸಮಯ ಕೂಡಿ ಬರಬೇಕು ಎನ್ನುವುದು ನನ್ನ ಭಾವನೆ ನೋಡೋಣ ಆ ಸಮಯ ಬೇಗ ಬರಬಹುದು ಎಂದು ಹೇಳಿದ್ದರು.


Click it and Unblock the Notifications











