Vanishree: ಹಿರಿತೆರೆಯ ಮೂಲಕ ನಟನೆಗೆ ಕಾಲಿಟ್ಟ ವಾಣಿಶ್ರೀ ಇಂದು ಪೋಷಕ ಪಾತ್ರಗಳಲ್ಲಿ ಬ್ಯುಸಿ

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿ ಲೀಲಾ ತಾಯಿ ಕೌಸಲ್ಯಾ ಆಗಿ ಅಭಿನಯಿಸುತ್ತಿರುವ ವಾಣಿಶ್ರೀ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಮನೋಜ್ಞ ನಟನೆಯ ಮೂಲಕ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಮನೆ ಮಾತಾಗಿರುವ ವಾಣಿಶ್ರೀ 'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಅರ್ಧದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ಈ ಮೊದಲು ಕೌಸಲ್ಯಾ ಆಗಿ ಅಭಿನಯಿಸುತ್ತಿದ್ದ ಅಭಿನಯ ಆ ಪಾತ್ರಕ್ಕೆ ವಿದಾಯ ಹೇಳಿದಾಗ, ಆ ಜಾಗಕ್ಕೆ ಬಂದವರೇ ವಾಣಿಶ್ರೀ. ಇದೀಗ ಕಡಿಮೆ ಅವಧಿಯಲ್ಲಿ ಕೌಸಲ್ಯಾ ಆಗಿ ವೀಕ್ಷಕರ ಮನ ಸೆಳೆದಿರುವ ವಾಣಿಶ್ರೀ ಸದ್ಯ ಪೋಷಕ ಪಾತ್ರಗಳ ಮೂಲಕ ನಟನಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಅಭಿನಯದ 'ಭರ್ಜರಿ ಗಂಡು' ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ತಂಗಿಯಾಗಿ ಕಾಣಿಸಿಕೊಳ್ಳುವ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ವಾಣಿಶ್ರೀ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಮುಂದೆ 'ಕಲಿಯುಗ', 'ಅಲ್ಲಿ ಬ್ರಹ್ಮಚಾರಿ ಇಲ್ಲಿ ರಾಮಚಾರಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Vanishree, who started acting on the big screen, is now busy in supporting roles

ತಂಗಿಯ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ ವಾಣಿಶ್ರೀ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದು 'ಸಿಂಧೂ' ಸಿನಿಮಾದಲ್ಲಿ. ತದ ನಂತರ ಜಿ.ವಿ. ಅಯ್ಯರ್ ಅವರ 'ಕೃಷ್ಣಲೀಲ' ಹಾಗೂ 'ಶಾಂತಲಾ' ಸಿನಿಮಾದಲ್ಲಿ ಅಭಿನಯಿಸಿದ ಈಕೆ 'ಮೈ ಸನ್' ಎಂಬ ಹೆಸರಿನ ಇಂಗ್ಲೀಷ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

'ಸ್ವರ ಸಂಪದ' ಮೂಲಕ ಕಿರುತೆರೆ ಜರ್ನಿ ಆರಂಭ

ಹಿರಿತೆರೆಯಲ್ಲಿ ಮನ ಸೆಳೆದ ವಾಣಿಶ್ರೀ ತದ ನಂತರ ಕಾಲಿಟ್ಟಿದ್ದು ಕಿರುತೆರೆಯಲ್ಲಿ. ಸುನೀಲ್ ಪುರಾಣಿಕ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ 'ಸ್ವರ ಸಂಪದ' ಧಾರಾವಾಹಿಯ ಮೂಲಕ ಕಿರುತೆರೆ ಪಯಣ ಶುರು ಮಾಡಿದ ವಾಣಿಶ್ರೀ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ. ಇಲ್ಲಿಯವರೆಗೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ವಾಣಿಶ್ರೀ ತಮಿಳಿನ 'ನಂದಿನಿ', ತೆಲುಗಿನ 'ಕಥ ಕಾನಿ ಕಥ', ಹಾಗೂ ಹಿಂದಿಯ 'ಕಾಲ್ ಅತೀಶ್' ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ.

Vanishree, who started acting on the big screen, is now busy in supporting roles

ಹಿರಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿ ಮುಂದೆ ಕಿರುತೆರೆ ಜಗತ್ತಿನಲ್ಲಿ ಮಿಂಚಿದ ವಾಣಿಶ್ರೀ ಜಾಹೀರಾತು ಜಗತ್ತಿನಲ್ಲಿ ಸದ್ದು ಮಾಡಿರುವ ವಿಷಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ! ಈಗಾಗಲೇ ಏಳೆಂಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಮಿಂಚಿದ ವಾಣಿಶ್ರೀ ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಮುದ್ದಾದ ನಟನೆಯ ಮೂಲಕ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

More from Filmibeat

English summary
Vanishree, who started acting on the big screen, is now busy in supporting roles, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X