ತೆಲುಗು ಕಿರುತೆರೆಯಲ್ಲಿ ನಟಿಸುತ್ತಿರುವ ಈ ಕನ್ನಡತಿಗೆ ಸಿನಿಮಾದಲ್ಲಿ ನಟಿಸೋ ಆಸೆ

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಅನೇಕ ನಟ ನಟಿಯರು ಇಂದು ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಬಹುಶಃ "ಕಲಾವಿದರುಗಳಿಗೆ ಭಾಷೆಯ ಹಂಗಿಲ್ಲ" ಎಂದು ಹೇಳುವುದು ಕೂಡಾ ಇದಕ್ಕೆ ಇರಬಹುದೇನೋ! ತೆಲುಗು, ತಮಿಳು ಭಾಷೆ ಗೊತ್ತಿಲದಿರುವಂತಹ ಕಲಾವಿದರುಗಳು ಕೂಡಾ ಪರಭಾಷೆಯ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮನೋಜ್ಞ ನಟನೆಯ ಮೂಲಕ ಕನ್ನಡ ಕಿರುತೆರೆ ವೀಕ್ಷಕರ ಮನ ಸೆಳೆದು, ಸದ್ಯ ತೆಲುಗು ಭಾಷೆಯ ಧಾರಾವಾಹಿಯಲ್ಲಿ ಮೋಡಿ ಮಾಡುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ವರ್ಷಾ ಹೆಚ್.ಕೆ.

ಇಂಟಿರಿಯರ್ ಡಿಸೈನಿಂಗ್‌ನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ವರ್ಷಾ ತದ ನಂತರ ಮುಖ ಮಾಡಿದ್ದು ನಟನೆಯತ್ತ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜ ರಾಣಿ' ಧಾರಾವಾಹಿಯ ಆಡಿಶನ್‌ಗೆ ಹೋಗಿದ್ದ ವರ್ಷಾ ಅವಕಾಶ ಸಿಗಬಹುದು ಎಂಬ ಆಲೋಚನೆಯಲ್ಲಿಯೇ ಇರಲಿಲ್ಲ. ಆಡಿಶನ್‌ನ ನಂತರ ಸುಮ್ಮನಿದ್ದ ಆಕೆಗೆ ವಾಹಿನಿಯಿಂದ ಕರೆ ಬಂದಾಗಲೇ ತಾನು ಸೆಲೆಕ್ಟ್ ಆದ ವಿಚಾರ ತಿಳಿದದ್ದು ಆಯ್ಕೆಯಾಗಿದ್ದೀರಿ ಎಂದಾಗಲೇ. ಈಗ ಬಣ್ಣದ ಲೋಕಕ್ಕೆ ಕಾಲಿಟ್ಟದ್ದು ಸಾರ್ಥಕವಾಯಿತು ಎಂಬ ಭಾವ ವರ್ಷಾರದ್ದು‌.

Varsha, who is acting in Telugu Serials Has a dreams of acting in movies

ನಾಗಮಂಡಲದ ನಾಯಕಿಯಾಗಿ ಮೋಡಿ

'ರಾಜ ರಾಣಿ' ಧಾರಾವಾಹಿಯ ನಂತರ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಮಂಡಲ' ಧಾರಾವಾಹಿಯಲ್ಲಿ ನಾಯಕಿ ರಂಜಿನಿ ಪಾತ್ರಕ್ಕೆ ಜೀವ ತುಂಬಿದರು ವರ್ಷಾ. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೌಟುಂಬಿಕ ಕಥಾಹಂದರವನ್ನೊಳಗೊಂಡ ಧಾರಾವಾಹಿ 'ಕಸ್ತೂರಿ ನಿವಾಸ'ದಲ್ಲಿ ನಾಯಕಿ ಮೃದುಲಾ ಆಗಿ ವರ್ಷಾ ಅಭಿನಯಿಸಿದ್ದರು.

ತೆಲುಗಿಗೆ ಹಾರಿದ ಕನ್ನಡತಿ

'ಕಸ್ತೂರಿ ನಿವಾಸ' ಧಾರಾವಾಹಿಯ ಮೃದುಲಾ ಪಾತ್ರದಿಂದ ಅರ್ಧಕ್ಕೆ ಹೊರಬಂದ ವರ್ಷಾ ನಂತರ ಕಾಣಿಸಿಕೊಂಡಿದ್ದು ಪರಭಾಷೆಯ ಕಿರುತೆರೆಯಲ್ಲಿ. ತೆಲುಗಿನ 'ಪ್ರೇಮ ಎಂಥ ಮಧುರಂ' ಧಾರಾವಾಹಿಯಲ್ಲಿ ನಾಯಕಿ ಅನು ಆಗಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಕಿರುತೆರೆಗೆ ಕಾಲಿಟ್ಟ ವರ್ಷಾ ಈಗಲೂ ಅದೇ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿಯ ರಿಮೇಕ್ ಅದಾಗಿದ್ದು ಅದರಲ್ಲಿ ಕನ್ನಡತಿಯೊಬ್ಬರು ನಾಯಕಿಯಾಗಿ ನಟಿಸುತ್ತಿರುವುದು ನಿಜಕ್ಕೂ ಸಂತಸದ ವಿಚಾರ.

Varsha, who is acting in Telugu Serials Has a dreams of acting in movies

ಸಿನಿಮಾದಲ್ಲಿ ನಟಿಸುವ ಕನಸಿದೆ

"ಎಲ್ಲರಂತೆ ನನಗೂ ಕೂಡಾ ಸಿನಿಮಾಗಳಲ್ಲಿ ನಟಿಸುವ ಕನಸಿದೆ" ಎಂದು ಹೇಳುವ ವರ್ಷಾ ಒಂದು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾ ಅಂದ ಮಾತ್ರಕ್ಕೆ ಸಣ್ಣ ಪುಟ್ಟ ಪಾತ್ರಗಳತ್ತ ಖಂಡಿತಾ ವರ್ಷಾ ಚಿತ್ತವಿಲ್ಲ. ಬದಲಿಗೆ ನಾಯಕಿಯಾಗಿಯೇ ಹಿರಿತೆರೆಯಲ್ಲಿ ಮೋಡಿ ಮಾಡಬೇಕೆಂಬುದೇ ಆಕೆಯ ಕನಸು. ಕಿರುತೆರೆಯಂತೆ ಹಿರಿತೆರೆಯಲ್ಲಿಯೂ ವರ್ಷಾ ಮಿಂಚಲಿ ಎಂಬುದೇ ನಮ್ಮ ಹಾರೈಕೆ.

More from Filmibeat

English summary
Varsha, who is acting in Telugu Serials Has a dreams of acting in movies, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X