BBK10: ದೊಡ್ಮನೆ ಬಗ್ಗೆ ಪ್ರಥಮ್ ಏನಂತಾರೆ...? ಒಳಗೆ ಹೋಗಲು ಯಾವ ರೀತಿ ತಪಾಸಣೆ ನಡೆಯುತ್ತದೆ?
ಒಳ್ಳೆ ಹುಡುಗ ಪ್ರಥಮ್ ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಥಮ್ ಈ ಬಾರಿ ಲಾರ್ಡ್ ಪ್ರಥಮ್ ಆಗಿ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದರು. ಸ್ಫರ್ಧಿಗಳು ಯಾವ ರೀತಿ ಇರಬೇಕು, ಯಾವ ರೀತಿ ಇರಬಾರದು ಎಂಬುದರ ಬಗ್ಗೆಯೂ ಸಹ ತಿಳಿಸಿದ್ದರು.
ಕೆಲವರ ಮುಖವಾಡ ಸಹ ಕಳಚಿ ಬಂದಿದ್ದರು. ನಂತರ ವರ್ತೂರು ಸಂತೋಷ್ ಅವರಿಗೂ ಸಹ ಸಾಕಷ್ಟು ಬುದ್ದಿವಾದ ಹೇಳಿದ್ದರು. ಹುಲಿ ಉಗುರು ಹೊಂದಿರುವ ಆರೋಪದಲ್ಲಿ ಸಂತೋಷ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಈ ಬಗ್ಗೆ ಪ್ರಥಮ್ ಸಾಕಷ್ಟು ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ಹಾಗೂ ಅವರು ಯಾವ ರೀತಿಯಲ್ಲಿ ಸೆಕ್ಯೂರಿಟಿ ಚೆಕ್ ಮಾಡುತ್ತಾರೆ ಎಂಬ ಎಲ್ಲಾ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ವರ್ತೂರು ಸಂತೋಷ್ ವಿಷಯದಲ್ಲಿ ಯಾಕೆ ಈ ರೀತಿ ಆಯಿತು ಗೊತ್ತಿಲ್ಲ ಎಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ನಿಯಮಗಳನ್ನ ಇಟ್ಟುಕೊಂಡು ಆಟ ಆಡಿಸಲಾಗುತ್ತದೆ. ಅಷ್ಟು ಸುಲಭವಾಗಿ ಯಾವುದೇ ವ್ಯಕ್ತಿಯನ್ನು ದೂಷಣೆ ಮಾಡಲು ಬಿಡುವುದಿಲ್ಲ ಎಂದು ಪ್ರಥಮ್ ಹೇಳಿದ್ದಾರೆ. ನಾವು ಹಾಕುವ ಪ್ರತಿಯೊಂದು ವಸ್ತುವನ್ನು ಸಹ ಅಲ್ಲಿ ಸೆಕ್ಯೂರಿಟಿ ಚೆಕ್ ಮಾಡಲಾಗುತ್ತದೆ ಎಂಬುದನ್ನು ಸಹ ಹೇಳಿದ್ದಾರೆ. ಬಿಗ್ ಬಾಸ್ ಮನೆ ಎಂದರೆ ಅಷ್ಟು ಸುಲಭವಾಗಿಲ್ಲ, ನಾವು ಹೋಗುವ ಮೊದಲೇ ಎಲ್ಲದಕ್ಕೂ ಸಹ ತಯಾರಾಗಿ ಹೋಗಬೇಕು. ಆದರೆ ವರ್ತೂರು ಸಂತೋಷ್ ವಿಚಾರ ಬೇಸರ ತಂದಿದೆ ಎಂದು ಹೇಳಿದ್ದಾರೆ.
ಕಣ್ಣಿಗೆ ಬಟ್ಟೆ ಕಟ್ಟಿ ಸೆಕ್ಯೂರಿಟಿ ಚೆಕ್
ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಹೋಗಬೇಕಾದರೆ ತಾವು ತೊಟ್ಟಿರುವ ಬಟ್ಟೆಯಿಂದ ಹಿಡಿದು ಯಾವುದೇ ಒಂದು ಸಣ್ಣ ಸೂಜಿಯನ್ನು ತೆಗೆದುಕೊಂಡು ಹೋಗಲು ಸೆಕ್ಯೂರಿಟಿ ಬಿಡುವುದಿಲ್ಲ. ಅಷ್ಟು ಚೆನ್ನಾಗಿ ಸೆಕ್ಯುರಿಟಿ ಚೆಕ್ ಮಾಡಲಾಗುತ್ತದೆ ಎಂದು ಪ್ರಥಮ್ ಹೇಳಿದ್ದಾರೆ. ನಮಗೆ ಯಾವುದಾದರೂ ಒಂದು ವಸ್ತುವಿನ ಮೇಲೆ ತುಂಬಾ ಅಟ್ಯಾಚ್‌ಮೆಂಟ್ ಇದ್ದರೆ ಅಂತಹ ವಸ್ತುವನ್ನು ಮಾತ್ರ ಧರಿಸಲು ಬಿಡುತ್ತಾರೆ ಎಂದು ಪ್ರಥಮ್ ತಿಳಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಸೆಕ್ಯೂರಿಟಿ ಚೆಕ್ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಏನನ್ನೂ ತೆಗೆದುಕೊಂಡು ಹೋಗುವಂತಿಲ್ಲ
ಸಂತೋಷ್ ಹುಲಿ ಉಗುರು ಧರಿಸುರುವುದು ಬಿಗ್ ಬಾಸ್‌ನವರ ಗಮನಕ್ಕೆ ಬಂದಿಲ್ಲ. ಯಾವುದೇ ಮೆಟಲ್ ಆದರೂ ಸಹ ಅದನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಅದರ ಮೇಲೆ ಅಟ್ಯಾಚ್‌ಮೆಂಟ್ ಇದೆ ಎಂದರೆ ಮಾತ್ರ ಹಾಕಿಕೊಳ್ಳಲಿ ಎನ್ನುತ್ತಾರೆ. ಅದು ಸರವಾಗಿರಬಹುದು, ಚಿನ್ನದ ಉಂಗುರವಾಗಿರಬಹುದು, ಎಂದು ಪ್ರಥಮ್ ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಅರೆಸ್ಟ್ ಆಗಿರುವುದರಲ್ಲಿ ಬಿಗ್ ಬಾಸ್‌ನ ಪಾತ್ರ ಇಲ್ಲ ಎಂದು ಪ್ರಥಮ್ ತಿಳಿಸಿದ್ದಾರೆ.
ನನ್ನ ಬಟ್ಟೆಯನ್ನೇ ಹಾಕಿಕೊಳ್ಳಲು ಬಿಟ್ಟಿಲ್ಲ
ಬಿಗ್ ಬಾಸ್ ಮನೆಗೆ ಲಾರ್ಡ್ ಪ್ರಥಮವಾಗಿ ಹೋಗಲು ಒಂದು ಬಟ್ಟೆಯನ್ನು ಧರಿಸಿ ಹೋಗಿದ್ದೆ ಅದನ್ನೇ ಸೆಕ್ಯುರಿಟಿ ಅವರು ಬಿಟ್ಟಿಲ್ಲ. ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಹೊಸ ರೀತಿಯ ಗೆಟಪ್ ಹಾಕಿಸಿ ಬಿಗ್ ಬಾಸ್ ಮನೆ ಒಳಗೆ ಬಿಟ್ಟರು. ನಾವು ಬಿಗ್ ಬಾಸ್ ಮನೆಯೊಳಗೆ ಯಾವುದೇ ರೀತಿಯ ವೆಪನ್‌ಗಳನ್ನು ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇನ್ನು ವರ್ತೂರು ಸಂತೋಷ್ ಧರಿಸಿದ್ದ ಆ ಸರದ ಮೇಲೆ ಗಮನ ಬಂದಿಲ್ಲ ಹಾಗಾಗಿ ಅವರನ್ನು ಒಳಗಡೆ ಬಿಟ್ಟಿದ್ದಾರೆ ಎಂದು ಪ್ರಥಮ್ ಹೇಳಿದ್ದಾರೆ.


Click it and Unblock the Notifications











