ಗಿಲ್ಲಿ, ರಕ್ಷಿತಾ ಬೇಡಿಕೆ ಏನು? ಅಂದು ವರ್ತೂರು ಸಂತೋಷ್ ಬೇಡಿಕೆಗೆ ಬಿಗ್‌ಬಾಸ್ ಶಾಕ್ ಆಗಿದ್ದೇಕೆ?

ಕಲರ್ಸ್ ಕನ್ನಡ ಬಿಗ್‌ಬಾಸ್ ಸೀಸನ್-12ರ ಅಂತಿಮ ಘಟ್ಟ ಬಂತು ತಲುಪಿದೆ. ಫಿನಾಲೆ ವಾರದಲ್ಲಿ ದೊಡ್ಮನೆ ರಂಗೇರಿದೆ. ಸ್ಪರ್ಧೀಗಳು ವೋಟ್ ಮಾಡುವಂತೆ ವೀಕ್ಷಕರಲ್ಲಿ ಮನವಿ ಮಾಡುತ್ತಿದ್ದಾರೆ. ಇನ್ನು ಸ್ಪರ್ಧಿಗಳು ಬಿಗ್‌ಬಾಸ್ ಮುಂದೆ ಬೇಡಿಕೆಗಳನ್ನು ಇಟ್ಟಿದ್ದಾರೆ. ಮೂರರಲ್ಲಿ ಒಂದು ಬೇಡಿಕೆ ಈಡೇರಿಸುವುದಾಗಿ ಬಿಗ್‌ಬಾಸ್ ಹೇಳಿದ್ದಾರೆ. ಆದರೆ ಬಿಗ್‌ಬಾಸ್ ಸೀಸನ್ 10ರಲ್ಲಿ ವರ್ತೂರು ಸಂತೋಷ್ ಇಟ್ಟಿದ್ದ ಬೇಡಿಕೆ ಕೇಳಿ ಬಿಗ್‌ಬಾಸ್ ಶಾಕ್ ಆಗಿದ್ದರು.

ಹಳ್ಳಿಕಾರ್ ಒಡೆಯ ಎಂದೇ ಖ್ಯಾತರಾಗಿರುವ ವರ್ತೂರ್ ಸಂತೋಷ್ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿದ್ದರು. ಫಿನಾಲೆವರೆಗೂ ಇದ್ದು 5ನೇ ರನ್ನರ್ ಅಪ್ ಆಗಿದ್ದರು. 111 ದಿನಗಳ ಕಾಲ ದೊಡ್ಮನೆ ಅಲ್ಲಿ ಉಳಿದುಕೊಂಡಿದ್ದರು. ಬಿಗ್‌ಬಾಸ್ ಬಳಿಕ ಕೂಡ ತಮ್ಮ ಮಾತಿನ ಶೈಲಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇನ್ನು ಬಿಗ್‌ಬಾಸ್ ಮನೆಯಲ್ಲಿ ಇದ್ದಾಗಲೇ ಸಂತೋಷ್ ಹುಲಿ ಉಗುರು ಪ್ರಕರಣದಲ್ಲಿ ಜೈಲಿಗೆ ಹೋಗುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ದೊಡ್ಮನೆ ಒಳಗೆ ಹೋಗಿದ್ದರು.

Varthur Santosh s Shocking Demand to See Bigg Boss Voice Goes Viral Ahead of Season 12 Finale

ಈ ವಾರ ಬಿಗ್‌ಬಾಸ್ ಮನೆ ಸ್ಪರ್ಧಿಗಳಿಗೆ ತಮ್ಮ 3 ಬೇಡಿಕೆಗಳನ್ನು ಇಡಲು ಬಿಗ್‌ಬಾಸ್ ಹೇಳಿದ್ದಾರೆ. ಎಲ್ಲರೂ ಇಂಟ್ರೆಸ್ಟಿಂಗ್ ಎನಿಸುವಂತೆ ತಮ್ಮ ಪಟ್ಟಿಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಗೆ ಮೀನುಗಾರರು ಬರಬೇಕು, ಸಮುದ್ರಕ್ಕಿಳಿದು ಮೀನು ಹಿಡಿದು ತರುವ ಅವರ ಸವಾಲುಗಳ ಬಗ್ಗೆ ಮಾತನಾಡಲು ಅವಕಾಶ ಕೊಡಬೇಕು. ಅಥವಾ ಬಿಗ್‌ಬಾಸ್ ಮನೆಗೆ ಹುಲಿ ನೃತ್ಯದ ಕಲಾವಿದರು ಬರಬೇಕು, ಇಲ್ಲದೇ ಬಿಗ್‌ಬಾಸ್ ಮನೆಯಲ್ಲಿ ಕನ್ನಡ ನಾಟಕ ನೋಡಬೇಕು ಎಂದು ರಕ್ಷಿತಾ 2 ಆಸೆಗಳನ್ನು ವ್ಯಕ್ತಪಡಿಸಿದ್ದಾರೆ.

ಗಿಲ್ಲಿ ತಮ್ಮ 3 ಆಸೆಗಳನ್ನು ಕಾಗದದಲ್ಲಿ ಬರೆದು ಕ್ಯಾಮರಾ ಮುಂದೆ ಪ್ರದರ್ಶಿಸಿದ್ದಾರೆ. ಬಿಗ್‌ಬಾಸ್ ಮನೆ ಟಿವಿಯಲ್ಲಿ ಒಳ್ಳೆ ಸಿನಿಮಾ ನೋಡಬೇಕು.. ಅಥವಾ ಬಿಗ್‌ಬಾಸ್ ಮನೆಯಲ್ಲಿರುವ ಆನೆಯ ಮೇಲೆ ಒಮ್ಮೆ ಕೂರಬೇಕು.. ಅಥವಾ ನನಗೆ ನಲ್ಲಿ ಮೂಳೆ ಅಂದ್ರೆ ಬಹಳ ಇಷ್ಟ, ಬರೀ ನಲ್ಲಿ ಮೂಳೆ ತಿಂದು ಬೆಳಗ್ಗ ಒಂದು ಗಂಟೆ ಮಲಗಬೇಕು. ಆದರೆ ನಾಯಿ ಬೊಗಳುವ ಸೌಂಡ್ ಬರಬಾರದು ಎಂದು ಗಿಲ್ಲಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿಗಳಿಗೆ ಇದೇ ರೀತಿ ಅವಕಾಶ ಕೊಡಲಾಗಿತ್ತು. ಆಗ ವರ್ತೂರು ಸಂತೋಷ್ ಇಟ್ಟಿದ್ದ ಬೇಡಿಕೆ ಕೇಳಿ ಬಿಗ್‌ಬಾಸ್ ಅಚ್ಚರಿಗೊಂಡಿದ್ದರು. ಅದನ್ನು ಈಡೇರಿಸಲು ಸಾಧ್ಯವೇ ಇಲ್ಲ. ಬೇರೆ ಏನಾದರೂ ಕೇಳಿ ಎಂದುಬಿಟ್ಟಿದ್ದರು. ಆ ವೀಡಿಯೋ ಈಗ ವೈರಲ್ ಆಗ್ತಿದೆ.

ಬಿಗ್‌ ಬಾಸ್ ಶೋನಲ್ಲಿ ಬಿಗ್‌ಬಾಸ್ ಅಂದ್ರ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಒಂದು ಅಶರೀರವಾಣಿ ಮಾತ್ರ ಮನೆ ಮಂದಿಗೆಲ್ಲಾ ಸಲಹೆ, ಸೂಚನೆ ಕೊಡುತ್ತದೆ. ಆ ಧ್ವನಿ ಯಾರದ್ದು ಎನ್ನುವುದನ್ನು ಕೂಡ ರಹಸ್ಯವಾಗಿಯೇ ಇಡಲಾಗಿದೆ. ಆದರೆ ಅಂದು ವರ್ತೂರ್ ಸಂತೋಷ್ "ನಾನು ಬಿಗ್‌ಬಾಸ್‌ನ ನೋಡಬೇಕು. ಈ ಧ್ವನಿ ಮಾತನಾಡುವ ವ್ಯಕ್ತಿಯನ್ನು ನೋಡಬೇಕು ಎನ್ನುವುದು ನನ್ನ ಆಸೆ" ಎಂದಿದ್ದರು.

"ನಿಮ್ಮ ಆಸೆಯನ್ನು ಬದಲಾಯಿಸಿ, ಯೋಚಿಸಿ.. ನೀವು ಕೇಳಿರುವುದು ಸಾಧ್ಯವೇ ಇಲ್ಲ" ಎಂದು ಬಿಗ್‌ಬಾಸ್ ಹೇಳಿದ್ದರು. ವರ್ತೂರ್ ಸಂತೋಷ್ ಬೇಡಿಕೆ ಕೇಳಿ ಬಿಗ್‌ಬಾಸ್ ಕೂಡ ಶಾಕ್ ಆಗಿದ್ರು ಎಂದು ವೀಡಿಯೋ ವೈರಲ್ ಮಾಡಲಾಗ್ತಿದೆ. ಇನ್ನು ಈ ಭಾನುವಾರ(ಜನವರಿ 18) ಬಿಗ್‌ಬಾಸ್-12 ಫಿನಾಲೆ ನಡೆಯಲಿದೆ. ಸದ್ಯ ಮನ ಒಳಗೆ 7 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ವಾರದ ಮಧ್ಯೆ ಒಬ್ಬರು ಎಲಿಮಿನೇಟ್ ಆಗಿ ಹೊರಬರಲಿದ್ದಾರೆ. ಉಳಿದ 6 ಮಂದಿ ಫಿನಾಲೆಗೆ ಹೋಗಲಿದ್ದಾರೆ.

More from Filmibeat

Read more about: bigg boss bigg boss 12 gilli
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X