ನಿರಾಸೆ ಅನುಭವಿಸಿದ ಕೋಟ್ಯಧಿಪತಿಯ ಎರಡನೇ ಸ್ಪರ್ಧಿ ವಸಂತ್

ಕನ್ನಡದ ಕೋಟ್ಯಧಿಪತಿಯ ಮೊದಲ ಸ್ಪರ್ಧಿ ದೀಪಾ ಶ್ರೀನಿವಾಸ್ ಅವರ 12.50 ಲಕ್ಷ ಗೆದ್ದು ಖುಷಿಯಿಂದ ಹೋದರು. ಬಳಿಕ ಹಾಟ್ ಸೀಟ್ ಗೆ ಆಯ್ಕೆಯಾದ ವಸಂತ್ ಉತ್ತಮ ಆಟ ಆಡಿದ್ರು. ಆದರೆ, ನಿರೀಕ್ಷಿತ ಹಣವನ್ನ ಗೆಲ್ಲುವಲ್ಲಿ ವಿಫಲವಾದರು.

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುವ ವಸಂತ್ ಅವರು ಕೋಟ್ಯಧಿಪತಿಯ ಐ ಕ್ಯೂಬ್ ಟೆಸ್ಟ್ ನಲ್ಲಿ ಅತಿ ಹೆಚ್ಚು ಅಂಕ ಪಡೆದು, ಪ್ರವೇಶ ಪಡೆದುಕೊಂಡಿದ್ದರು. ಬೈಕ್ ಅಪಘಾತದಲ್ಲಿ ಕೈಗೆ ಗಾಯ ಮಾಡಿಕೊಂಡಿರುವ ವಸಂತ್, ತಮ್ಮ ಶಸ್ತ್ರ ಚಿಕಿತ್ಸೆಗಾಗಿ ಈ ಆಟ ಆಡಲು ಮುಂದಾಗಿದ್ದರು.

ಒಂದು ಕೋಟಿ ನನ್ನ ಟಾರ್ಗೆಟ್ ಆದರೆ 3.20 ಲಕ್ಷ ಹಣ ನಾನು ಗೆದ್ದೇ ಗೆಲ್ಲುತ್ತೇನೆ'' ಎಂಬ ಆತ್ಮವಿಶ್ವಾಸದಲ್ಲಿ ಕೋಟ್ಯಧಿಪತಿ ಆಟವಾಡಿದ ವಸಂತ್ ಗೆ ನಿರಾಸೆ ಆಯಿತು. ಹಾಗಂತ ಹಣವನ್ನೇ ಗೆದ್ದಿಲ್ಲ ಅಂತಲ್ಲ. ನಿರೀಕ್ಷೆಯ ಹಣ ಗೆಲ್ಲಲು ಸಾಧ್ಯವಾಗಲಿಲ್ಲ ಅಂತ. ಅದಕ್ಕೆ ಕಾರಣವಾಗಿದ್ದು ಆ ಒಂದು ಪ್ರಶ್ನೆ? ಮುಂದೆ ಓದಿ...

9 ಪ್ರಶ್ನೆಗೆ ಎಲ್ಲ ಲೈಫ್ ಲೈನ್ ಮುಗಿಯಿತು

9 ಪ್ರಶ್ನೆಗೆ ಎಲ್ಲ ಲೈಫ್ ಲೈನ್ ಮುಗಿಯಿತು

ಉತ್ತಮ ಆರಂಭ ಪಡೆದುಕೊಂಡ ವಸಂತ್ ಅವರು ಮೊದಲ ಹಂತವನ್ನ ಸೇಫ್ ಆಗಿ ದಾಟಿದರು. ನಂತರ ಎರಡನೇ ಹಂತವನ್ನ ದಾಟಲು ಬರುವಷ್ಟರಲ್ಲಿ ತಮ್ಮ ಬಳಿ ಇದ್ದ ಎಲ್ಲ ಲೈಫ್ ಲೈನ್ ಗಳನ್ನ ಬಳಸಿಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಹೀಗಾಗಿ, ಎರಡನೇ ಸೇಫ್ ಝೋನ್ ದಾಟಲು ಸಾಧ್ಯವಾಗಲಿಲ್ಲ.

ಹತ್ತನೇ ಪ್ರಶ್ನೆಗೆ ಉತ್ತರಿಸಲಿಲ್ಲ

ಹತ್ತನೇ ಪ್ರಶ್ನೆಗೆ ಉತ್ತರಿಸಲಿಲ್ಲ

ನಾಲ್ಕು ಲೈಫ್ ಲೈನ್ ಸಹಾಯದಿಂದ ಒಂಭತ್ತು ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದ ವಸಂತ್, ಹತ್ತನೇ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ. ಒಂದು ವೇಳೆ ಪ್ರಶ್ನೆಗೆ ಉತ್ತರ ಕೊಟ್ಟಿದ್ದರೇ ತಮ್ಮ ಕೈಯಲ್ಲಿ 3.20 ಲಕ್ಷ ಹಣವನ್ನ ಸೇಫ್ ಮಾಡಿಕೊಳ್ಳಬಹುದಿತ್ತು. ಆದರೆ, ಕೈಗೆ ಬಂದಿದ್ದು ಬಾಯಿಗೆ ಬಂದಿಲ್ಲ ಎನ್ನುವಂತೆ ಎರಡನೇ ಸೇಫ್ ಝೋನ್ ದಾಟಲಿಲ್ಲ.

3.20 ಲಕ್ಷದ ಆ ಪ್ರಶ್ನೆ ಯಾವುದು?

3.20 ಲಕ್ಷದ ಆ ಪ್ರಶ್ನೆ ಯಾವುದು?

1991ರಲ್ಲಿ ಮೊಟ್ಟಮೊದಲ ಬಾರಿ ಹೈಕೋರ್ಟ್ ಗೆ ಮಹಿಳಾ ಮುಖ್ಯನಾಯಾಧೀಶರನ್ನು ಪಡೆದ ರಾಜ್ಯ ಯಾವುದು?

A ಹಿಮಾಚಲ ಪ್ರದೇಶ

B ತಮಿಳುನಾಡು

C ಗುಜರಾತ್

D ಕೇರಳ

ಆಟ ಕ್ವಿಟ್ ಮಾಡಿದ ವಸಂತ್

ಆಟ ಕ್ವಿಟ್ ಮಾಡಿದ ವಸಂತ್

ಹತ್ತನೇ ಪ್ರಶ್ನೆ ಉತ್ತರಿಸಿದ್ದರೇ ಎರಡನೇ ಸೇಫ್ ಝೋನ್ ತಲುಪಬಹುದಿತ್ತು. ಬಟ್ ಯಾವುದೇ ಲೈಫ್ ಲೈನ್ ಇಲ್ಲದ ಕಾರಣ, ಉತ್ತರದ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ವಸಂತ್ ಅವರು ಆಟವನ್ನ ಕ್ವಿಟ್ ಮಾಡಿದರು. ಒಂಭತ್ತು ಪ್ರಶ್ನೆಗೆ ಉತ್ತರ ಕೊಟ್ಟಿದ್ದ ಕಾರಣ 1.60 ಲಕ್ಷವನ್ನ ಮನೆಗೆ ತೆಗೆದುಕೊಂಡು ಹೋದರು.

(ಹತ್ತನೇ ಪ್ರಶ್ನೆಗೆ ಸರಿ ಉತ್ತರ, A ಹಿಮಾಚಲ ಪ್ರದೇಶ)

More from Filmibeat

English summary
Colors kannada Channel popular show 'Kannadada Kotyadhipathi season 4' start from saturday (22th june). season 4 second contestant Vasanth faced 3.20 lakh quetion, but he lost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X