»   » ಭಾರತದ ಈ ಕ್ರಿಕೆಟ್ ಆಟಗಾರ್ತಿಗೆ ಯಶ್ ಅಂದ್ರೆ ಸಿಕ್ಕಾಪಟ್ಟೆ ಪ್ರೀತಿ

ಭಾರತದ ಈ ಕ್ರಿಕೆಟ್ ಆಟಗಾರ್ತಿಗೆ ಯಶ್ ಅಂದ್ರೆ ಸಿಕ್ಕಾಪಟ್ಟೆ ಪ್ರೀತಿ

Posted By:
Subscribe to Filmibeat Kannada

ಸಾಮಾನ್ಯವಾಗಿ ಭಾರತ ಕ್ರಿಕೆಟ್ ತಂಡದ ಆಟಗಾರ ಅಥವಾ ಆಟಗಾರ್ತಿಯರಿಗೆ ಎಲ್ಲರು ಅಭಿಮಾನಿಗಳಾಗಿರುತ್ತಾರೆ. ಆದ್ರೆ, ಇಲ್ಲೊಬ್ಬ ಭಾರತ ಕ್ರಿಕೆಟ್ ಆಟಗಾರ್ತಿ ರಾಕಿಂಗ್ ಸ್ಟಾರ್ ಯಶ್ ಅವರ ದೊಡ್ಡ ಅಭಿಮಾನಿಯಂತೆ.

ಅದು ಎಷ್ಟರ ಮಟ್ಟಿಗೆ ಅಭಿಮಾನ ಅಂದ್ರೆ, ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆದಾಗ, ''ನನ್ನ ಹೃದಯ ಛಿದ್ರವಾಯಿತು'' ಎಂದಿದ್ದಂತೆ. ಹೌದು, ನಾವು ಹೇಳುತ್ತಿರುವ ರಾಕಿಂಗ್ ಸ್ಟಾರ್ ಅಭಿಮಾನಿ ಭಾರತ ಮಹಿಳಾ ವಿಶ್ವಕಪ್ ತಂಡವನ್ನ ಪ್ರತಿನಿಧಿಸಿದ್ದ ವೇದಾ ಕೃಷ್ಣಮೂರ್ತಿ ಬಗ್ಗೆ.

'ನವರತನ್ ಜ್ಯುವೆಲರ್ಸ್'ನ ಹೊಸ ಮಳಿಗೆ ಉದ್ಘಾಟಿಸಿದ ರಾಕಿಂಗ್ ಸ್ಟಾರ್ ದಂಪತಿ

Veda Krishnamurthy says she is a huge fan of Yash

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮಕ್ಕೆ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕವಾಡ್ ಅತಿಥಿಗಳಾಗಿ ಆಗಮಿಸಿದ್ದಾರೆ. ಈ ವೇಳೆ ವೇದಾ ಅವರ ಯಶ್ ಅವರ ಅಭಿಮಾನಿ ಎಂದು ಹೇಳಿಕೊಂಡರು.

ಉದಯ ಟಿವಿಯಲ್ಲಿ ಪ್ರೀಮಿಯರ್ ಚಲನಚಿತ್ರ 'ಸಂತು ಸ್ಟ್ರೈಟ್ ಫಾರ್ವರ್ಡ್'

ಇದೇ ವೇಳೆ ತಮ್ಮ ಸಹ ಆಟಗಾರ್ತಿ ವೇದಾ ಅವರು ಯಶ್ ಅಭಿಮಾನಿ ಎನ್ನುವ ಬಗ್ಗೆ ರಾಜೇಶ್ವರಿ ಗಾಯಕವಾಡ್ ಕೂಡ ದನಿ ಗೂಡಿಸಿದ್ದಾರೆ. ಇವರಿಬ್ಬರು ಅತಿಥಿ ಆಗಿ ಆಗಮಿಸಿರುವ ಕಾರ್ಯಕ್ರಮ ಆಗಸ್ಟ್ 11 ರಂದು ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

English summary
Indian cricketer Veda Krishnamurthy says ''she is a huge fan of Yash'' in Super Talktime Show hosted by Akul Balaji

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada