Veena Ponnappa:' ಶ್ರೀ ರೇಣುಕಾ ಯಲ್ಲಮ್ಮ' ಸೀರಿಯಲ್‌ನಲ್ಲಿ ರಾಣಿಯಾಗಿ ಮರಳಿದ ವೀಣಾ ಪೊನ್ನಪ್ಪ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಭಕ್ತಿಪ್ರಧಾನ ಧಾರಾವಾಹಿ "ಶ್ರೀ ಉಧೋ ಉಧೋ ರೇಣುಕಾ ಯಲ್ಲಮ್ಮ" ಧಾರಾವಾಹಿಯಲ್ಲಿ ರಾಣಿ ಮಂಗಳಾದೇವಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದಾರೆ ವೀಣಾ ಪೊನ್ನಪ್ಪ. ಹೆಚ್ಚು ಕಮ್ಮಿ ಐದು ವರ್ಷದ ನಂತರ ಮತ್ತೆ ಕಿರುತೆರೆಗೆ ಕಾಲಿಟ್ಟಿರುವ ವೀಣಾ ಪೊನ್ನಪ್ಪ ಪೌರಾಣಿಕ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ರಾಣಿ ಮಂಗಳಾದೇವಿ ಪಾತ್ರದ ಬಗ್ಗೆ ಮಾತನಾಡಿದ ವೀಣಾ ಪೊನ್ನಪ್ಪ" ಪುಟ್ಮಲ್ಲಿಯ ನಂತರ ನನಗೆ ತೆಲುಗಿನಲ್ಲಿ ಬಹಳಷ್ಟು ಅವಕಾಶಗಳು ಬರುತ್ತ ಹೋದವು. ಹಾಗಾಗಿ ನಾನು ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿ ಇದ್ದೆ. ಈ ನಡುವೆ ಕನ್ನಡದಿಂದ ಬಹಳ ಅವಕಾಶಗಳು ಬಂದರೂ ಸಹ ಒಂದೊಳ್ಳೆ ಪ್ರಾಜೆಕ್ಟ್‌ಗಾಗಿ ಕಾಯುತ್ತಿದ್ದೆ. ಕೊನೆಗೂ ಶ್ರೀನಿವಾಸ ಸರ್ ಅವನಿಂದ ಕರೆ ಬಂತು. ತದ ನಂತರ 'ಶ್ರೀ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ರಾಣಿ ಪಾತ್ರ ಸಿಕ್ಕಿದೆ. ಬಹಳ ಸಮಯದ ನಂತರ ಮತ್ತೆ ಕನ್ನಡ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನನಗೆ ಬಹಳ ಸಂತೋಷವಿದೆ" ಎಂದಿದ್ದಾರೆ.

ಕಿರುತೆರೆಗೆ ಮರಳಿದ ವೀಣಾ ಪೊನ್ನಪ್ಪ

ಕಿರುತೆರೆಗೆ ಮರಳಿದ ವೀಣಾ ಪೊನ್ನಪ್ಪ

"ಕನ್ನಡ ಕಿರುತೆರೆಗೆ ವಾಪಸ್ ಆಗಲು ಇದೊಂದು ಒಳ್ಳೆಯ ಪಾತ್ರ ಎಂದು ನನಗೆ ಅನಿಸಿತು. ಲುಕ್ ಟೆಸ್ಟ್‌ನಲ್ಲಿಯೂ ಅದ್ಭುತವಾಗಿ ಪಾಸಾದ ಕಾರಣ ಈಗ ಇಲ್ಲಿ ನಾನು ರಾಣಿ ಪಾತ್ರವನ್ನು ಮಾಡುತ್ತಿದ್ದೇನೆ. ನನಗೆ ಮಂಗಳ ದೇವಿ ಪಾತ್ರ ಬಹಳ ವಿಶೇಷ. ಯಾಕೆಂದರೆ ಮೊದಲಿಗೆ ಒಳ್ಳೆಯವಳಾಗಿ ನಂತರ ಅಷ್ಟೇನೂ ಸಮಾಧಾನಕರವಲ್ಲದ ಪ್ರೀತಿಯ ಸ್ವಭಾವವನ್ನು ತೋರ್ಪಡಿಸುವ ಪಾತ್ರವದು" ಎಂದು ಹೇಳಿದರು ವೀಣಾ ಪೊನ್ನಪ್ಪ.

ಪಾತ್ರ ಬದಲಾದ ರೀತಿ ಅದ್ಭುತ

ಪಾತ್ರ ಬದಲಾದ ರೀತಿ ಅದ್ಭುತ

"ಈ ಧಾರಾವಾಹಿಯಲ್ಲಿ ರಾಜ ಹೇಗೆ ತನ್ನ ಮಗುವಿನ ಆರೈಕೆಯನ್ನು ಬೇರೆಯವರಿಗೆ ಹಸ್ತಾಂತರಿಸುತ್ತಿದ್ದಂತೆ ಮಗುವಿನ ಸ್ವಭಾವ ಬದಲಾಗುತ್ತದೆ ಎಂಬುದನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ಒಳ್ಳೆಯದರಿಂದ ಕೆಟ್ಟದರ ಸ್ವಭಾವದೆಡೆಗೆ ತಿರುಗುವ ಈ ಟ್ರಾನ್ಸಿಷನ್ ನನಗೆ ಬಹಳ ಹಿಡಿಸಿತು. ಭಾವನೆಗಳನ್ನು ತೋರ್ಪಡಿಸಲು ಈ ಪಾತ್ರ ಬಹಳ ಸಹಕಾರಿ. ನಮ್ಮನ್ನು ನಾವು ಚೆನ್ನಾಗಿ ವ್ಯಕ್ತಪಡಿಸುವುದನ್ನು ಈ ಪಾತ್ರ ನಿರೀಕ್ಷಿಸುತ್ತದೆ. ನಾನು ನನ್ನ ಆಕ್ಷನ್‌ಗಳ ಮೂಲಕ ಹಾಗೆಯೇ ಬಾಡಿ ಹಾಗೂ ಫೇಸ್ ಲ್ಯಾಂಗ್ವೇಜ್ ಮೂಲಕ ಆದಷ್ಟು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು ನಟಿ ವೀಣಾ ಪೊನ್ನಪ್ಪ.

'ಅದ್ಭುತ ಅವಕಾಶಗಳನ್ನು ಬಿಡಬಾರದು'

'ಅದ್ಭುತ ಅವಕಾಶಗಳನ್ನು ಬಿಡಬಾರದು'

ಇನ್ನು ತಮ್ಮ ಸಹನಟರು ಹಾಗೂ ಧಾರಾವಾಹಿ ತಂಡದ ಬಗ್ಗೆ ಮಾತನಾಡಿದ ಅವರು "ಧಾರಾವಾಹಿಯಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿರುವ ಪ್ರತಿ ನಟರು ಅತ್ಯದ್ಭುತವಾಗಿ ನಟಿಸುತ್ತಾ ತಮ್ಮ 100% ಅನ್ನು ಕೊಡುತ್ತಾ ಇದ್ದಾರೆ. ಅಭಿನಯವಾಗಲಿ ವೇಷಭೂಷಣವಾಗಲಿ ಪ್ರತಿಯೊಂದು ಕೂಡ ಪರ್ಫೆಕ್ಟ್ ಆಗಿ ಬರಬೇಕು ಎಂಬುದೇ ನಿರ್ದೇಶಕರ ಅಂಬೋಣ. ಇನ್ನು ಪೌರಾಣಿಕ ಪಾತ್ರ ಎಂದಾಗ ಅದರಂತೆ ಒಂದಷ್ಟು ಸವಾಲುಗಳಿರುತ್ತವೆ. ಭಾರವಾದ ಕಾಸ್ಟಿಂಗ್ ಜೊತೆಗೆ ಭಾಷೆಯಲ್ಲಿಯೂ ಬಹಳ ವಿಭಿನ್ನವಾಗಿ ನಾವು ಡೈಲಾಗ್ ಡೆಲಿವರಿ ಮಾಡಬೇಕಾಗುತ್ತದೆ. ಎಲ್ಲವನ್ನು ಹೊರತಾಗಿ ಪೌರಾಣಿಕ ಪಾತ್ರಗಳು ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕಾಗ ಇಂತಹ ಅದ್ಭುತ ಅವಕಾಶಗಳನ್ನು ಬಿಡಬಾರದು ಈ ನಿಟ್ಟಿನಲ್ಲಿ ನಾನು ಬಹಳ ಲಕ್ಕಿ ಎಂದು ಭಾವಿಸುತ್ತೇನೆ" ಎಂದರು.

ಖಳನಾಯಕಿ ಪಾತ್ರ ಇಷ್ಟ

ಖಳನಾಯಕಿ ಪಾತ್ರ ಇಷ್ಟ

"ನಾನು ಇದುವರೆಗೂ ಬಹಳಷ್ಟು ಬೇರೆ ಬೇರೆ ವಿಭಿನ್ನ ಪಾತ್ರಗಳನ್ನು ನಟಿಸುತ್ತಾ ಬಂದಿದ್ದೇನೆ. ಸಿನಿಮಾದಲ್ಲಿ ಒಂದು ರೀತಿಯ ಪಾತ್ರಗಳು ಸಿಕ್ಕರೆ ಕಿರುತೆರೆಗೆ ಬಂದಾಗ ಯಾವಾಗಲೂ ನನಗೆ ಖಳನಾಯಕಿ ಪಾತ್ರವನ್ನೇ ಕೊಡುತ್ತಾರೆ. ಬಹುಶಃ ನಿರ್ದೇಶಕರು ನನ್ನನ್ನು ನೋಡುತ್ತಿದ್ದಂತೆ ನಾನು ಅಂತ ಪಾತ್ರಗಳಿಗೆ ಸರಿಯಾಗಿದ್ದೇನೆ ಎಂದು ನಿರ್ಧರಿಸುತ್ತಾರೆ. ನನಗೂ ಖಳನಾಯಕಿ ಪಾತ್ರಗಳೇ ಹೆಚ್ಚು ಇಷ್ಟ. ಏಕೆಂದರೆ ಇದಕ್ಕೆ ಬಹಳಷ್ಟು ಸ್ಕೋಪ್ ಇರುತ್ತದೆ. ಇಲ್ಲಿ ಅಭಿನಯಕ್ಕೂ ಹಾಗೂ ಪಾತ್ರಕ್ಕೂ ಬಹಳ ಪ್ರಾಮುಖ್ಯತೆ ಇರುತ್ತದೆ" ಎನ್ನುತ್ತಾರೆ ವೀಣಾ ಪೊನ್ನಪ್ಪ.

ವಿಭಿನ್ನ ಪಾತ್ರಗಳೇ ಬೇಕು

ವಿಭಿನ್ನ ಪಾತ್ರಗಳೇ ಬೇಕು

"ಇನ್ನು ನಾನು ಎಷ್ಟೋ ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದರು ಜನರು ನನ್ನನ್ನು ಬೇರೆ ಬೇರೆ ಪಾತ್ರಗಳಲ್ಲಿ ನೋಡುವುದರಿಂದ ಅವರಿಗೆ ಎಷ್ಟೋ ಬಾರಿ ಆಶ್ಚರ್ಯವಾಗುವುದು ಉಂಟು. ಆದರೆ, ಪ್ರತಿ ಪಾತ್ರಕ್ಕೂ ನಾನು ಒಳ್ಳೊಳ್ಳೆ ರಿವ್ಯೂಗಳನ್ನು ಪಡೆದಿದ್ದೇನೆ. ಈ ರೀತಿ ಏಕತಾನತೆ ಇಲ್ಲದೆ ವಿಭಿನ್ನ ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವುದು ನನ್ನ ಸಾಮರ್ಥ್ಯ ಎಂದು ನಂಬಿದ್ದೇನೆ. ಹಾಗಾಗಿ ಆ ಮಟ್ಟಿಗೆ ನಾನು ಬಹಳ ಸಂತೃಪ್ತಿಯಿಂದಿದ್ದೇನೆ"ಎಂದು ತಮ್ಮ ನಟನಾ ಕೆರಿಯರ್ ಬಗ್ಗೆ ಮಾತನಾಡಿ ಸಂತೋಷ ವ್ಯಕ್ತಪಡಿಸಿದರು ನಟಿ ವೀಣಾ ಪೊನ್ನಪ್ಪ.

More from Filmibeat

English summary
Veena Ponnappa returned to Kannada television through devotional serial Udho Udho Shri Renuka Yellamma,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X