"ನೆಗೆಟಿವ್ ರೋಲ್‌ನಲ್ಲಿ ನಟನಾ ಸಾಮರ್ಥ್ಯವೇ ಬೇರೆ": ವೀಣಾ ಪೊನ್ನಪ್ಪಗೆ ಖಳನಾಯಕಿ ಪಾತ್ರವೇ ಇಷ್ಟ

By ಅನಿತಾ ಬನಾರಿ

ಕನ್ನಡದ ಮನರಂಜನಾ ಕ್ಷೇತ್ರದ ಬಹುಮುಖಿ ಪ್ರತಿಭಾನ್ವಿತ ನಟಿಯರಲ್ಲಿ ವೀಣಾ ಪೊನ್ನಪ್ಪ ಕೂಡ ಒಬ್ಬರು. ಈ ನಟಿ ಬಹಳ ಸಮಯದಿಂದ ಕನ್ನಡ ಕಿರುತೆರೆಯಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಾ ಖ್ಯಾತಿ ಗಳಿಸಿದ್ದಾರೆ. ಅಕ್ಷರಶಃ ತನ್ನ ಅದ್ಭುತ ನಟನಾ ಕೌಶಲದಿಂದ ವೀಕ್ಷಕರನ್ನು ತನ್ನ ಆನ್-ಸ್ಕ್ರೀನ್ ಪಾತ್ರವನ್ನು ದ್ವೇಷಿಸುವಂತೆ ಮಾಡುವಲ್ಲಿ ಇವರು ನಿಪುಣರು.

ಆನ್ ಸ್ಕ್ರೀನ್‌ನಲ್ಲಿ ವಿಲನ್ ಆಗಿ ನಟಿಸುವುದರಲ್ಲಿ ಖುಷಿ ಇದೆ ಎನ್ನುತ್ತಾರೆ ವೀಣಾ ಪೊನ್ನಪ್ಪ. ನಾನು ಇಲ್ಲಿಯವರೆಗೆ ನಟಿಸಿದ ಎಲ್ಲಾ ಚಲನಚಿತ್ರಗಳಲ್ಲಿ ನಾನು ಯಾವಾಗಲೂ ಸಕಾರಾತ್ಮಕ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆದರೆ ಕಿರುತೆರೆಯ ಪ್ರಾಜೆಕ್ಟ್‌ಗಳಿಗೆ ಬಂದಾಗ ನಾನು ಯಾವಾಗಲೂ ಧಾರಾವಾಹಿಯ ವಿಲನ್ ಆಗಿರುತ್ತೇನೆ ಎಂದು ಹೇಳುತ್ತಾರೆ.

Veena Ponnappa who acted as Goddess Mangala wants to act in different roles

ನೆಗೆಟಿವ್ ರೋಲ್‌ನಲ್ಲಿ ನಟನೆಗೆ ಅವಕಾಶ ಜಾಸ್ತಿ

ನಾನು ಗಮನಿಸಿದ ಇನ್ನೊಂದು ಮುಖ್ಯವಾದ ಅಂಶವೆಂದರೆ ನಾವು ನೆಗೆಟಿವ್ ರೋಲನ್ನು ಪ್ಲೇ ಮಾಡುವಾಗ ನಮ್ಮ ನಟನಾ ಸಾಮರ್ಥ್ಯದ ಬೇರೆ ಬೇರೆ ಅಭಿವ್ಯಕ್ತಿಯನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ಹಾಗಾಗಿ ಇದು ನನಗೆ ಬಹಳ ಪ್ರಿಯವಾದದ್ದು. ಹಾಗೂ ನಮ್ಮ ಪ್ರದರ್ಶನಗಳನ್ನು ವೀಕ್ಷಿಸುತ್ತಾ ತಯಾರಕರು ಕೂಡ ತಮ್ಮ ಮನಸ್ಸಿನಲ್ಲಿ ನಾವು ಇಂಥದ್ದೇ ಪಾತ್ರದಲ್ಲಿದ್ದರೆ ಚಂದ ಎಂದು ಫಿಕ್ಸ್ ಆಗಿಬಿಡುತ್ತಾರೆ. ನನಗೂ ಇತರ ಯಾವುದೇ ಪಾತ್ರಗಳಿಗಿಂತ ವಿಲನ್ ಪಾತ್ರವನ್ನು ನಿರ್ವಹಿಸುವುದರಲ್ಲಿ ಖುಷಿ ಇದೆ ಎನ್ನುತ್ತಾರೆ ವೀಣಾ ಪೊನ್ನಪ್ಪ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ

ಟಿವಿಯಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸುವಾಗ, ನಿಜ ಹೇಳಬೇಕೆಂದರೆ, ನಾನು ಚಿತ್ರಿಸುವ ಪ್ರತಿಯೊಂದು ಪಾತ್ರದಲ್ಲಿ ನಾನು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣುತ್ತೇನೆ. ನನ್ನ ಒಂದು ಕೆಲಸಕ್ಕಾಗಿ ಎಲ್ಲರೂ ನನ್ನನ್ನು ಗುರುತಿಸಲು ಸಾಧ್ಯವಿಲ್ಲ. ನಾನು ಚಿತ್ರಿಸುವ ಪ್ರತಿಯೊಂದು ಹೊಸ ಪಾತ್ರದಲ್ಲಿ ನಾನು ವಿಭಿನ್ನವಾಗಿ ಕಾಣುತ್ತೇನೆ. ಒಂದು ಧಾರಾವಾಹಿ ಅಥವಾ ಚಲನಚಿತ್ರದಲ್ಲಿ ನಿರ್ದಿಷ್ಟ ವಿಶೇಷತೆಯಿರುವ ಪಾತ್ರವನ್ನು ಅಭಿನಯಿಸಲು ಇಷ್ಟಪಡುವ ಕಲಾವಿದೆ ನಾನು.

ಎಲ್ಲಾ ಪಾತ್ರಗಳಿಗೆ ಉತ್ತಮ ವಿಮರ್ಶೆ

ನಾನು ಇಲ್ಲಿಯವರೆಗೆ ನಟಿಸಿದ ಎಲ್ಲಾ ಪಾತ್ರಗಳಿಗೆ ಉತ್ತಮ ವಿಮರ್ಶೆಗಳನ್ನು ಗಳಿಸಿದ್ದೇನೆ. ಪ್ರತಿಯೊಂದು ಪಾತ್ರವೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿರುವುದಕ್ಕೆ ತೃಪ್ತಿಯಿದೆ. ತೆರೆಯ ಮೇಲಿನ ಪ್ರತಿಯೊಂದು ಪಾತ್ರದಲ್ಲೂ ನಾನು ವಿಭಿನ್ನವಾಗಿ ಕಾಣುತ್ತೇನೆ ಎಂದು ಅಪಾರ ಹೆಮ್ಮೆಯಿಂದ ಹೇಳಬಲ್ಲೆ ಎಂದು ಹಂಚಿಕೊಂಡರು.

Veena Ponnappa who acted as Goddess Mangala wants to act in different roles

ಮಂಗಳಾದೇವಿಯಾಗಿ ನಟನೆ

ಪ್ರಸ್ತುತ, ನಟಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಎಂಬ ಭಕ್ತಿ ಪ್ರದರ್ಶನದಲ್ಲಿ ರಾಣಿ ಮಂಗಳಾದೇವಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಭಕ್ತಿ ಪ್ರಧಾನ ಧಾರಾವಾಹಿಗಾಗಿ ನನ್ನನ್ನು ಸಂಪರ್ಕಿಸಿದಾಗ, ನನಗೆ ಆಸಕ್ತಿ ಹೆಚ್ಚಾಯಿತು. ನಾನು ಈ ಹಿಂದೆ ಹಲವಾರು ಪೌರಾಣಿಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿದ್ದೇನೆ ಮತ್ತು ನನಗೆ ಈ ಕೆಲಸ ಬೇರೆಯದೇ ಖುಷಿ ನೀಡುತ್ತದೆ.

ಕನ್ನಡದ ಮನರಂಜನಾ ಕ್ಷೇತ್ರಕ್ಕೆ ಸಂಪೂರ್ಣ ಪುನರಾಗಮನವಾದ ಫೀಲ್ ಕೊಡುತ್ತಿದೆ. ಲುಕ್ ಟೆಸ್ಟ್ ಕೂಡ ಚೆನ್ನಾಗಿ ನಡೆಯಿತು. 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯ ರಾಣಿ ಮಂಗಳಾದೇವಿಯ ಪಾತ್ರವನ್ನು ತುಂಬು ಆಸಕ್ತಿಯಿಂದ ನಿರ್ವಹಿಸುತ್ತಿದ್ದೇನೆ ಎಂದರು.

More from Filmibeat

English summary
Veena Ponnappa who acted as Goddess Mangala wants to act in different roles, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X