ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ
Recommended Video
'ವೀಕೆಂಡ್ ವಿತ್ ರಮೇಶ್ ಸೀಸನ್ 4' ಕಾರ್ಯಕ್ರಮ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆಯವರ ಮೂಲಕ ಶುರುವಾಗಿದೆ. ನಿನ್ನೆ (ಶನಿವಾರ) ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರ ಆಗಿದೆ.
ಈ ಕಾರ್ಯಕ್ರಮ ಮೂಲಕ ವಿರೇಂದ್ರ ಹೆಗಡೆಯವರ ಅನೇಕ ವಿಷಯಗಳು ವೀಕ್ಷಕರಿಗೆ ತಿಳಿಯಿತು. ಅದರಲ್ಲಿ ಒಂದು ಅವರ ಜನನದ ದಿನ ಕುತೂಹಲಕಾರಿ ಸಂಗತಿ. ಅದೇನೆಂದರೆ, ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯಿತಂತೆ.

ಲಕ್ಷ ದೀಪೋತ್ಸವ ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ನಡೆಯುತ್ತಿದೆ. ಆದರೆ, ಆ ಕಾರ್ಯಕ್ರಮ ನಡೆಯುವ ಶುಭ ದಿನವೇ ವಿರೇಂದ್ರ ಹೆಗಡೆಯಯವರ ಜನನ ಆಗಿತಂತೆ. ಕಮಲಾವತಿ ಅಜ್ಜಿ, ತಾಯಿ ರತ್ಮಮ್ಮ ಮಗು ಹುಟ್ಟಿದ ಖುಷಿಯನ್ನು ಸಂಭ್ರಮಿಸದಂತೆ.

ವಿರೇಂದ್ರ ಹೆಗಡೆಯವರ ಲಕ್ಷ ದೀಪೋತ್ಸವದ ದಿನ ಮತ್ತೊಂದು ದಿನವೇ ಹುಟ್ಟಿದೆ ಎಂದು ಹೇಳಿದ್ದರಂತೆ. ಅಜ್ಜಿ ತಾವೇ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದರಂತೆ. ಅದು ಅವರಿಗೆ ನಿತ್ಯದ ಕೆಲಸ, ನನಗೆ ನಿತ್ಯದ ಹಿಂದೆ ಎಂದು ಅಂದಿನ ದಿನವನ್ನು ತಮಾಷೆಯೊಂದಿಗೆ ವಿವರಿಸಿದರು ವಿರೇಂದ್ರ ಹೆಗಡೆ.


Click it and Unblock the Notifications











